Advertisement

ಗ್ರಾಮೀಣ ಬ್ಯಾಂಕ್‌ ನೌಕರರ ಪ್ರತಿಭಟನೆ

05:33 PM Mar 30, 2022 | Shwetha M |

ವಿಜಯಪುರ: ರಾಷ್ಟ್ರೀಯ ಗ್ರಾಮೀಣ ಬ್ಯಾಂಕ್‌ ರಚನೆ ಆಗಲೇಬೇಕು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ ನೌಕರರು ಹಾಗೂ ಅಧಿಕಾರಿಗಳು ಪ್ರತಿಭಟಿಸಿದರು.

Advertisement

ಪ್ರತಿಭಟನಾ ಮೆರವಣಿಗೆ ಜಿಲ್ಲಾ ಪಂಚಾಯಿತಿ ಆವರಣದಿಂದ ತಹಶೀಲ್ದಾರ್‌ ಕಚೇರಿಗೆ ಹಾಗೂ ಪ್ರಾದೇಶಿಕ ಕಚೇರಿ ಸಹಾಯಕ ಮಹಾ ಪ್ರಬಂಧಕ ಬಿ.ಶೇಖರ ಶೆಟ್ಟಿ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಮುಖಂಡರು, 2010ರ ನಂತರ ಸೇವೆಗೆ ಸೇರಿದ ಸಿಬ್ಬಂದಿಗೂ ಹಿಂದಿನ ಸುತ್ತೋಲೆ ಪ್ರಕಾರ ನಿವೃತ್ತಿ ವೇತನ ಜಾರಿಯಾಗಬೇಕು. 11ನೇ ವೇತನ ಪರಿಷ್ಕರಣೆ ಸಂಪೂರ್ಣ ಜಾರಿಗೆ ಬರಬೇಕು. ಬಡ್ತಿ ಮತ್ತು ಸೇವಾ ನಿಯಮಗಳು ತಿದ್ದುಪಡಿ ಆಗಲೇಬೇಕು ಎಂದು ಆಗ್ರಹಿಸಿದರು.

ಕಂಪ್ಯೂಟರ್‌ ಇನ್‌ಕ್ರಿಮೆಂಟ್‌ ಜಾರಿಗೆ ಬರಬೇಕು, ಅನುಕಂಪದ ನೇಮಕಾತಿ ಹಿಂದಿನಿಂದಲೂ ಜಾರಿಗೆ ಬರಬೇಕು, ಹೊರಗುತ್ತಿಗೆ ಪದ್ಧತಿ ರದ್ದಾಗಲಿ, ದಿನಗೂಲಿ ನೌಕರರನ್ನು ಕಾಯಂ ಮಾಡಬೇಕು. ಸರ್ಕಾರಿ ಸ್ವಾಮ್ಯದ ಉದ್ದಿಮೆಗಳ ಖಾಸಗೀಕರಣ, ಕೇಂದ್ರ ಸರ್ಕಾರದ ಹಣಕಾಸು ನೀತಿ, ಪ್ರವರ್ತಕ ಬ್ಯಾಂಕ್‌ ತಾರತಮ್ಯ ಧೋರಣೆಗೆ ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ ಎಂಪ್ಲಾಯ್‌ ಅಸೋಸಿಯೇಶನ್‌ ಉಪಾಧ್ಯಕ್ಷ ರಾಜು ಭಜಂತ್ರಿ, ಜಂಟಿ ಕಾರ್ಯದರ್ಶಿ ವಿಶ್ವನಾಥರಡ್ಡಿ, ಜಿಲ್ಲಾ ಅಧಿಕಾರಿಗಳ ಸಂಘದ ಅಧ್ಯಕ್ಷ ಈಶ್ವರ ಬಾಲರಡ್ಡಿ, ಕಾರ್ಯದರ್ಶಿ ವಿಜಯ ನಾಯ್ದೊಡಿ, ಶಿವಕುಮಾರ ಉಮದಿ, ಅಮರನಾಥ, ಜಿಲ್ಲಾಧ್ಯಕ್ಷ ಎ.ಎಂ.ಮುಲ್ಲಾ, ಲಕ್ಷ್ಮಣ ಅಂಬಿಗೇರ, ಕೆ.ಎ.ಹುಂಡೇಕಾರ, ರಘುವೀರ ನೀಲೂರ, ಲಕ್ಷ್ಮೀಕಾಂತ ಅಂಬಲಿ ಹಾಗೂ ಇತರರು ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next