Advertisement

ಲಾಕ್‌ಡೌನ್‌ಗೆ ಗ್ರಾಮೀಣ ಪ್ರದೇಶ ಸ್ತಬ್ಧ

05:26 AM Jul 06, 2020 | Lakshmi GovindaRaj |

ಮಳವಳ್ಳಿ: ಸರ್ಕಾರದ ಲಾಕ್‌ಡೌನ್‌ ಸೂಚನೆ ಮೇರೆಗೆ ಭಾನುವಾರ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶವು ಸ್ತಬ್ಧಗೊಂಡಿದ್ದವು. ಪಟ್ಟಣದ ಪೇಟೆ ಬೀದಿ, ಕೊಳ್ಳೇಗಾಲ ರಸ್ತೆ, ಮೈಸೂರು ರಸ್ತೆ ಜನರಿಲ್ಲದೇ ಬಿಕೋ ಎನ್ನುತ್ತಿದ್ದವು.  ತಾಲೂಕಿನ ಬಿ.ಜಿ.ಪುರ ಹೋಬಳಿಯ ಬೆಳಕವಾಡಿ, ಕಿರುಗಾವಲು ಸೇರಿದಂತೆ ಹಲವು ಭಾಗಗಳಲ್ಲೂ ಭಾನುವಾರದ ಲಾಕ್‌ ಡೌನ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಯಿತು. ಅಗತ್ಯ ವಸ್ತುಗಳ ಖರೀದಿಗೆ ಕೆಲ ಸಮಯ ನಿಗದಿಪಡಿಸಿ ಅವಕಾಶ  ನೀಡಲಾಗಿತು.

Advertisement

ಹೆದ್ದಾರಿಗಳಿಗೆ ಬ್ಯಾರಿಕೇಡ್‌: ಪೊಲೀಸರು ತಾಲೂಕಿನಲ್ಲಿ ಶನಿವಾರ ರಾತ್ರಿಯೇ ಕರ್ಫ್ಯೂಗೆ ಸಿದಟಛಿತೆ ನಡೆಸಿ, ರಾತ್ರಿಯೇ ಪಟ್ಟಣದ ಪ್ರಮುಖ ರಸ್ತೆಗಳು, ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಿಗೆ ಬ್ಯಾರಿಕೇಡ್‌ ಹಾಕಿ  ಸಂಚರಿಸುವವರಿಗೆ ಎಚ್ಚರಿಗೆ ನೀಡುತ್ತಿದ್ದರು. ಭಾನುವಾರ ಬೆಳಗ್ಗೆಯಿಂದ ಸಂಜೆಯವರೆಗೂ ಜನರ ಸಂಚಾರ ವಿರಳವಾಗಿತು. ಪಟ್ಟಣದ ಒಳಭಾಗ ಪ್ರವೇಶಕ್ಕೆ ಸಂಪೂರ್ಣ ನಿಷೇಧ ಮಾಡಲಾಗಿತ್ತು. ಅನಗತ್ಯವಾಗಿ ಓಡಾಟ ನಡೆಸುತ್ತಿದ್ದ ಕೆಲವರಿಗೆ ಅನಂತ್‌  ರಾಂ ಸರ್ಕಲ್‌ ಬಳಿ ಸರ್ಕಲ್‌ ಇನ್ಸ್‌ಪೆಕ್ಟರ್‌ ಎ.ಕೆ.ರಾಜೇಶ್‌ ಲಾಕ್‌ಡೌನ್‌ ಮಯದ ಪಾಠ ಮಾಡಿದರು.

ಮನೆಯಲ್ಲಿಯೇ ಇದ್ದ ಗ್ರಾಮೀಣರು: ಗ್ರಾಮೀಣ ಪ್ರದೇಶದ ಜನರಿಗೆ ಲಾಕ್‌ಡೌನ್‌ ಬಗ್ಗೆ ಮೊದಲೇ ಮಾಹಿತಿ ಇದ್ದ ಕಾರಣ ಹೆಚ್ಚು ಜನರು ಸ್ವಯಂಪ್ರೇರಿತವಾಗಿ ಮನೆಯಲ್ಲಿಯೇ ಇದ್ದರು. ಕೆಲವೇ ಮಂದಿ ಓಡಾಡುತ್ತಿದ್ದವರನ್ನು ಪೊಲೀಸರು  ಹಿಂದೆ ಕಳುಹಿಸುತ್ತಿದ್ದರು. ಎಲ್ಲಾ ಅಂಗಡಿ, ಮಳಿಗೆಗಳನ್ನು ಮುಚ್ಚಲಾಗಿತ್ತು. ಮೆಡಿಕಲ್‌, ಹಾಲು, ತರಕಾರಿ, ದಿನಸಿ, ಮಾಂಸದ ಅಂಗಡಿಗಳು ಮಾತ್ರ ತೆರೆಯಲಾಗಿತ್ತು. ಶನಿವಾರ ರಾತ್ರಿ ಪ್ರಾರಂಭಗೊಂಡಿದ್ದ ಲಾಕ್‌ಡೌನ್‌ ಸೋಮವಾರ ಬೆಳಗ್ಗೆ 5ರವರೆಗೆ ಇತ್ತು.

ಸ್ವಯಂ ಬಂದ್‌ಗೆ ನಿರ್ಧಾರ: ಪಟ್ಟಣದ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ವ್ಯಾಪಾರಿಗಳ ಸಂಘ ಹಾಗೂ ವರ್ತಕರ ಸಂಘ ಸಭೆ ನಡೆಸಿ, ಸ್ವಯಂ ಪ್ರೇರಿತವಾಗಿ ಬಂದ್‌ ತೀರ್ಮಾನಿಸಿದ್ದಾರೆ. ನಮ್ಮ ಆರೋಗ್ಯ ನಮ್ಮ ರಕ್ಷಣೆ ಎಂಬ  ಘೋಷಣೆಯೊಂದಿಗೆ ಸೋಮವಾರದಿಂದ ಬೆಳಗ್ಗೆ 9ರಿಂದ ಸಂಜೆ 5 ಗಂಟೆವರೆಗೆ ವ್ಯಾಪಾರ ನಡೆಸಿ, ಉಳಿದ ಅವಧಿಯಲ್ಲಿ ಸ್ವಯಂಪ್ರೇರಿತ ಬಂದ್‌ ಮಾಡಲು ತೀರ್ಮಾನಿಸಿ ತಹಶೀಲ್ದಾರ್‌ ಕೆ.ಚಂದ್ರಮೌಳಿ ಅವರನ್ನು ಭೇಟಿ ಮಾಡಿ ಅಗತ್ಯ  ಕ್ರಮಕ್ಕೆ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next