Advertisement

“ಶಿಕ್ಷಣದೊಂದಿಗೆ ಶಿಸ್ತುಬದ್ಧ ಜೀವನ ರೂಪಿಸಿಕೊಳ್ಳಿ’

04:47 PM Apr 13, 2017 | Team Udayavani |

ತೆಕ್ಕಟ್ಟೆ: ಮಕ್ಕಳು ಕಲಿಕೆಯೊಂದಿಗೆ ಪಾಠೇತರ ಚಟು ವಟಿಕೆಗಳನ್ನು ಮೈಗೂಡಿಸಿಕೊಳ್ಳುವ ಜತೆಗೆ ಉತ್ತಮ ಶಿಕ್ಷಣ ಪಡೆದು ಶಿಸ್ತುಬದ್ಧ ಜೀವನವನ್ನು ರೂಪಿಸಿ ಕೊಳ್ಳಬೇಕಾಗಿದೆ ಎಂದು ಕುಂಭಾಶಿ ಗ್ರಾ.ಪಂ. ಸದಸ್ಯೆ ಸಾಲು ಕುಂಭಾಶಿ ಹೇಳಿದರು.

Advertisement

ಅವರು ಎ. 11ರಂದು ಕುಂಭಾಶಿ ಅಂಬೇಡ್ಕರ್‌ ಭವನದಲ್ಲಿರುವ ಮಕ್ಕಳ ಮನೆಯಲ್ಲಿ  ಕೊರಗ ಸಮುದಾಯ ವಿದ್ಯಾರ್ಥಿಗಳಿಗಾಗಿ ಸುಮಾರು 42 ದಿನಗಳ ಕಾಲ  ನಡೆಯುವ ವಿಶೇಷ ಕಲಿಕಾ ತರಬೇತಿ ಶಿಬಿರ -2017  ಉದ್ಘಾಟಿಸಿ ಮಾತನಾಡಿದರು.ಇದೆ ಸಂದರ್ಭ ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ಇನ್ನಿತರ ಕಲಿಕಾ ಪರಿಕರಗಳನ್ನು ವಿತರಿಸಲಾಯಿತು.

ಕುಂಭಾಶಿ ಗ್ರಾ.ಪಂ. ಅಧ್ಯಕ್ಷ ಶ್ರೀವಾಣಿ ಅಡಿಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಉತ್ತಮ ಮಾರ್ಗದರ್ಶನ ಹಾಗೂ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡಾಗ  ಮಾತ್ರ ಯಶಸ್ವಿ ಜೀವನ ನಮ್ಮದಾಗುವುದು. ಈ ನಿಟ್ಟಿನಲ್ಲಿ  ನಮ್ಮ ಶಕ್ತಿಯನ್ನು ಶಿಕ್ಷಣದ ಮೂಲಕ ಅಭಿವ್ಯಕ್ತಿಸಿದಾಗ ತನ್ನ ಮೌಲ್ಯವನ್ನು ಹೆಚ್ಚಿಸಿಕೊಳ್ಳುವುದು ಎಂದು ಹೇಳಿದರು.

ಕೊರಗ ಶ್ರೇಯೋಭಿವೃದ್ಧಿ ಸಮಿತಿಯ ಅಧ್ಯಕ್ಷ ಗಣೇಶ್‌ ವಿ. ಪ್ರಾಸ್ತಾವಿಕವಾಗಿ ಮಾತನಾಡಿ ಮಕ್ಕಳ ಸುಪ್ತ ಪ್ರತಿಭೆ ಯನ್ನು ಗುರುತಿಸಿ ಗೌರವಿಸುವ ನಿಟ್ಟಿನಿಂದ ಮಕ್ಕಳ ಬದುಕು ಭಾವನೆಗಳಿಗೆ ಪೂರಕವಾಗಿ ನಿಸರ್ಗ ಅಧ್ಯಯನದ ಜೊತೆಗೆ ಆಟದೊಂದಿಗೆ ಪಾಠ ಎನ್ನುವ ವಿಭಿನ್ನ ಪರಿಕಲ್ಪನೆಯೊಂದಿಗೆ ಮಕ್ಕಳಿಗೆ ವಿಶೇಷವಾದ ತರಬೇತಿ ನೀಡುವುದೇ ಈ ತರಬೇತಿಯ ಮೂಲ ಉದ್ದೇಶ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ  ಕೊರಗ ಯುವ ಮುಖಂಡ ಶರತ್‌ ಹಾಗೂ ಸುಮಾರು 18 ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಶಿಕ್ಷಕಿ ವಿನುತಾ ಸ್ವಾಗತಿಸಿ,  ಸುಪ್ರಿತಾ ಪ್ರಾರ್ಥಿಸಿ, ಸುಮಲತಾ ನಿರೂಪಿಸಿ, ವಿದ್ಯಾರ್ಥಿನಿ  ಸಾವಿತ್ರಿ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next