Advertisement
ಅಪರಿಚಿತ ವ್ಯಕ್ತಿಗಳು ಈ ಕೃತ್ಯ ನಡೆಸಿರುವುದಾಗಿ ರೈತ ರಾಹುಲ್ ಬಾಜಿರಾವ್ ಪಗಾರ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಬೇಸಗೆ ಈರುಳ್ಳಿ ದಾಸ್ತಾನನ್ನು ತಮ್ಮ ಗೋದಾಮಿನಲ್ಲಿ ಇಟ್ಟಿದ್ದಾಗಿ ಅವರು ಹೇಳಿದ್ದಾರೆ.
ರವಿವಾರ ಸಂಜೆ ಹೊತ್ತಿಗೆ ಗೋದಾಮಿನಿಂದ ಈರುಳ್ಳಿ ಕಳವಾಗಿರುವುದು ಬೆಳಕಿಗೆ ಬಂದಿದೆ ಎಂದು ರಾಹುಲ್ ಹೇಳಿದ್ದಾರೆ. ಸದ್ಯದ ಸಂದರ್ಭದಲ್ಲಿ ಈರುಳ್ಳಿಯನ್ನು ಇಲ್ಲಿನ ಎಪಿಎಂಸಿಯಲ್ಲಿ ಹರಾಜು ಹಾಕಲಾಗುತ್ತದೆ. ಇದರ ಬೆಲೆ ಕೆ.ಜಿ.ಗೆ 100 ರೂ.ಗಳಿಷ್ಟಿದೆ. ಏತನ್ಮಧ್ಯೆ ದಿಲ್ಲಿಯಲ್ಲಿ ಈರುಳ್ಳಿ ಬೆಲೆ 70-80 ರೂ.ಗಳಿಗೆ ಏರಿಕೆಯಾಗಿದೆ. ದೇಶಾದ್ಯಂತ ವಿವಿಧ ಮೆಟ್ರೋಗಳಲ್ಲೂ ಈರುಳ್ಳಿ ಬೆಲೆ ಏರಿಕೆಯಾಗಿದೆ.