Advertisement

ಅಮೆರಿಕದ ಕಣ್ಗಾವಲು ತಪ್ಪಿಸಿಕೊಂಡ ರೂಪಾಯಿ

01:11 AM May 30, 2019 | Team Udayavani |

ವಾಷಿಂಗ್ಟನ್‌: ಭಾರೀ ಮೌಲ್ಯ ಕುಸಿತದ ಅನಂತರ ಚೇತರಿಸಿಕೊಳ್ಳುತ್ತಿರುವ ರೂಪಾಯಿಯ ಮೇಲೆ ಅಮೆರಿಕ ಈಗ ಕಣ್ಗಾವಲು ಮಾಡುವುದನ್ನು ಕೈಬಿಟ್ಟಿದೆ. ಕಳೆದ ಮಾರ್ಚ್‌ನಲ್ಲಿ ಅಮೆರಿಕದ ಕರೆನ್ಸಿ ಕಣ್ಗಾವಲು ಪಟ್ಟಿಗೆ ಸೇರಿದ್ದ ರೂಪಾಯಿ ಸತತ ಎರಡು ಬಾರಿಯೂ ವಿಚಕ್ಷಣೆಯಲ್ಲಿ ಸುಧಾರಣೆ ಕಂಡಿದ್ದರಿಂದ ಈ ಪಟ್ಟಿಯಿಂದ ಕೈಬಿಡಲಾಗಿದೆ. ಈ ಕಣ್ಗಾವಲು ಪಟ್ಟಿಗೆ ಸೇರಿದ ಕರೆನ್ಸಿಯ ಮೌಲ್ಯವನ್ನು ಸರಕಾರ ಹಾಗೂ ನಿಯಂತ್ರಕಗಳು ವಿಪರೀತ ಬದಲಿಸುತ್ತವೆ ಎಂಬ ಆರೋಪ ಇರುತ್ತದೆ.

Advertisement

ಅಷ್ಟೇ ಅಲ್ಲ, ಇದರ ಖರೀದಿ ಮತ್ತು ಮಾರಾಟ ಪ್ರಮಾಣವೂ ಸಂಶಯಾಸ್ಪದಕ್ಕೆ ಕಾರಣವಾಗುವ ರೀತಿಯಲ್ಲಿ ಇರುತ್ತದೆ. ಆದರೆ ಸತತ ಎರಡು ಬಾರಿಯೂ ಅಮೆರಿಕ ಕರೆನ್ಸಿ ಕಣ್ಗಾವಲು ಸಮಿತಿಯ ವರದಿಯಲ್ಲಿ ಧನಾತ್ಮಕ ಪ್ರಗತಿ ಸಾಧಿಸಿದರೆ ಅವುಗಳನ್ನು ಪಟ್ಟಿಯಿಂದ ಕೈಬಿಡಲಾ ಗುತ್ತದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿಯ ನಿಯಮಕ್ಕೆ ಪೂರಕವಾಗಿಯೇ ಭಾರತವು ವಿದೇಶಿ ವಿನಿಮಯ ಮೀ ಸಲು ಹೊಂದಿದೆ. ಅಲ್ಲದೆ, ಜಿಡಿಪಿಯ ಶೇ. 1.7ರಷ್ಟು ವಿದೇಶಿ ವಿನಿಮಯ ಮಾರಾಟ ಮಾಡಿದೆ. ಹೀಗಾಗಿ ದೇಶದ ಕರೆನ್ಸಿಯನ್ನು ಸ್ಥಿರ ಎಂಬುದಾಗಿ ಅಮೆರಿಕ ಪರಿಗಣಿಸಿದೆ. ಭಾರತದ ಜೊತೆಗೆ ಸ್ವಿಜರ್ಲೆಂಡ್‌ ಕರೆನ್ಸಿಯನ್ನೂ ಪಟ್ಟಿಯಿಂದ ಕೈಬಿಡಲಾಗಿದೆ. ಆದರೆ ಚೀನ, ಜಪಾನ್‌, ದಕ್ಷಿಣ ಕೊರಿಯಾ, ಜರ್ಮನಿ, ಇಟಲಿ, ಐರ್ಲೆಂಡ್‌, ಸಿಂಗಾಪುರ, ಮಲೇಷ್ಯಾ ಮತ್ತು ವಿಯೆಟ್ನಾಂ ಇನ್ನೂ ಈ ಪಟ್ಟಿಯಲ್ಲಿ ಮುಂದುವರಿದಿವೆ.

Advertisement

Udayavani is now on Telegram. Click here to join our channel and stay updated with the latest news.

Next