Advertisement

74.39ಕ್ಕೆ ಕುಸಿದ ರೂಪಾಯಿ ಮೌಲ್ಯ

08:30 AM Oct 10, 2018 | Team Udayavani |

ಮುಂಬಯಿ: ರೂಪಾಯಿ ಮೌಲ್ಯ ಕುಸಿತ ಮುಂದುವರಿದಿದ್ದು, ಮಂಗಳವಾರ ಅಮೆರಿಕದ ಡಾಲರ್‌ ವಿರುದ್ಧ 33 ಪೈಸೆ ಕುಸಿದು 74.39ಕ್ಕೆ ತಲುಪಿದೆ. ಕಚ್ಚಾ ತೈಲ ಬೆಲೆ ಏರಿಕೆ ಮತ್ತು ವಿದೇಶಿ ಹೂಡಿಕೆ ಹೊರಹರಿವು ಹೆಚ್ಚಿದ ಪರಿಣಾಮ ರೂಪಾಯಿ ನಿರಂತರ ಕುಸಿಯುತ್ತಿದೆ. ದಿನದ ಆರಂಭದಲ್ಲಿ 18 ಪೈಸೆ ಮೌಲ್ಯ ಏರಿಕೆಯಾಗಿತ್ತಾದರೂ ದಿನದ ಕೊನೆಯಲ್ಲಿ ಬ್ರೆಂಟ್‌ ಕಚ್ಚಾ ತೈಲ ಬೆಲೆ ಗಮನಾರ್ಹ ಏರಿಕೆ ಕಂಡಿದ್ದರಿಂದ ರೂಪಾಯಿ ಮೌಲ್ಯ ಕುಸಿತ ಕಂಡಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next