ನವದೆಹಲಿ: ಅಮೆರಿಕದ ಡಾಲರ್ ಎದುರು ಶುಕ್ರವಾರ (ಅಕ್ಟೋಬರ್ 07) ರೂಪಾಯಿ ಮೌಲ್ಯ 16 ಪೈಸೆ ಕುಸಿತ ಕಂಡಿದ್ದು, 82.33 ರೂಪಾಯಿ ಮೌಲ್ಯದೊಂದಿಗೆ ಅಂತ್ಯವಾಗಿದೆ. ಇದು ರೂಪಾಯಿಯ ಸಾರ್ವಕಾಲಿಕ ಕನಿಷ್ಠ ಮೌಲ್ಯವಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ದಾಖಲೆಗಳನ್ನು ಸಲ್ಲಿಸಲು ನಾನು ಒಪ್ಪಿದ್ದೇನೆ: ಇಡಿ ವಿಚಾರಣೆ ಬಳಿಕ ಡಿ.ಕೆ.ಶಿವಕುಮಾರ್
ಕಚ್ಛಾ ತೈಲ ಬೆಲೆ, ಹೂಡಿಕೆದಾರರ ನೀರಸ ವಹಿವಾಟಿನ ಪರಿಣಾಮ ಡಾಲರ್ ಎದುರು ರೂಪಾಯಿ ಮೌಲ್ಯ ಭಾರೀ ಕುಸಿತ ಕಂಡಿದೆ. ದೇಶೀಯ ಕರೆನ್ಸಿ 82.30 ರೂ. (ಡಾಲರ್ ಮೊತ್ತ)ನಲ್ಲಿ ವಹಿವಾಟು ನಡೆದಿದೆ.
ಗುರುವಾರ ಡಾಲರ್ ಎದುರು ರೂಪಾಯಿ ಮೌಲ್ಯ 32 ಪೈಸೆ ಕುಸಿತ ಕಂಡಿದ್ದು, 81.89 ರೂ.ನಲ್ಲಿ ವಹಿವಾಟು ಕೊನೆಗೊಂಡಿತ್ತು. ಇಂದೂ ಕೂಡಾ 16 ಪೈಸೆಯಷ್ಟು ಕುಸಿತದೊಂದಿಗೆ ಸಾರ್ವಕಾಲಿಕ ಕನಿಷ್ಠ ಮೌಲ್ಯ ದಾಖಲಾಗಿರುವುದಾಗಿ ವರದಿ ವಿವರಿಸಿದೆ.
ರೂಪಾಯಿ ಮೌಲ್ಯ ಈ ವರ್ಷ ಶೇ.10ಕ್ಕಿಂತಲೂ ಹೆಚ್ಚು ಕುಸಿತ ಕಂಡಿದ್ದು, ಇದರಿಂದಾಗಿ ರೂಪಾಯಿ ಮೌಲ್ಯ (82.33) ಡಾಲರ್ ಎದುರು ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿದೆ ಎಂದು ಪಿಟಿಐ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.