“ನಮ್ಮ ನಿಮ್ಮ ಸೈಕಲ್ ಫೌಂಡೇಷನ್’ ಎನ್.ಜಿ.ಓ, ಪರಿಸರಸ್ನೇಹಿ ಜೀವನಶೈಲಿಯನ್ನು ಪ್ರಚುರ ಪಡಿಸುವ ಉದ್ದೇಶದಿಂದ ನಂದಿ ಹಿಲ್ಸ್‌ನಲ್ಲಿ ಮ್ಯಾರಾಥಾನ್ ಓಟದ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಕರ್ನಾಟಕ ಪ್ರವಾಸೋದ್ಯಮ ಇಲಾಖೆ, ಭಾರತೀಯ ಪುರಾತತ್ವ ಇಲಾಖೆ ಮತ್ತು ಇಂದಿರಾಗಾಂಧಿ ರಾಷ್ಟ್ರೀಯ ಕಲಾಸಂಸ್ಥೆಯ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮ ಏರ್ಪಾಡಾಗಿದೆ.
ಯೋಗ, ಸಂಗೀತ ಮತ್ತು ಶಿಲ್ಪಕಲೆಯ ಸಂಗಮವಾದ ಭೋಗ ನಂದೀಶ್ವರ ದೇವಸ್ಥಾನದಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಭಾರತೀಯ ಸಂಸೃRತಿಯ ನಾದ, ಶಿಲ್ಪಕಲೆ, ಓಟದ ಕ್ರೀಡೆ, ದೇಶಿ ತಿನಿಸು ಮತ್ತು ಪರಿಸರದ ಸೌಂದರ್ಯವನ್ನು ಸವಿಯಲು ನಂದಿ ಬೆಟ್ಟ ಸೂಕ್ತವಾದ ಸ್ಥಳ.
ಮ್ಯೂಸಿಕಲ್ ರನ್ ಯೋಗ: ಇಲ್ಲಿ ಯೋಗದೊಂದಿಗೆ ಕ್ರೀಡೆಯ ಸಂಯೋಗವಿದೆ. ಪ್ರಾಚೀನ ಸಂಸ್ಕೃತಿಯೊಡನೆ ಆಧುನಿಕತೆಯ ಸಂಗಮವಿದೆ. ಕಣ್ಮನ ತಣಿಸಲು ವಿಹಂಗಮ ನೋಟವಿದೆ. ಕರ್ನಾಟಕ ಸಂಗೀತದ ವಿವಿಧ ರಾಗಗಳನ್ನು ಬೆಳಗ್ಗೆ ಕೇಳುವುದರಿಂದ ಆರೋಗ್ಯ ಸುಧಾರಿಸುವುದಲ್ಲದೆ ಮನಸ್ಸಿಗೆ ಹರ್ಷೋಲ್ಲಾಸ ದೊರಕುತ್ತದೆ ಎನ್ನುವುದು ಸಂಶೋಧನೆಯಿಂದ ತಿಳಿದುಬಂದ ಸಂಗತಿ. ಈ ನಿಟ್ಟಿನಲ್ಲಿ ಸಂಗೀತ ಮತ್ತು ಕ್ರೀಡೆಯನ್ನು ಸಂಯೋಜಿಸುವ ನವೀನ ಸಂಶೋಧನೆಯನ್ನು “ರಾಗ ಲ್ಯಾಬ್ಸ್’ ಮಾಡಿದೆ.
ಯೋಗಿ ರನ್ ಮೂಲಕ ಸಂಗೀತ ಮತ್ತು ಓಟದ ಸಂಯೋಜನೆಯ ಪ್ರಯೋಗ ಮೊದಲ ಬಾರಿಗೆ ನಡೆಯಲಿದೆ. ಯೋಗಿ ರನ್ ಸ್ಪರ್ಧಿಗಳು ಬೆಳಿಗ್ಗೆ ಆರಕ್ಕೆ ಭೋಗ ನಂದೀಶ್ವರ ದೇವಸ್ಥಾನದಲ್ಲಿ ಯೋಗಾಸನ ಮಾಡಲಿದ್ದಾರೆ. ನಂತರ ಓಟ ಪ್ರಾರಂಭವಾಗುತ್ತದೆ. ಹೆಸರು ನೊಂದಾಯಿಸುವ ಮೊದಲ 1000 ಸ್ಪರ್ಧಿಗಳಿಗೆ ಮಾತ್ರ ಅವಕಾಶ ಸಿಗಲಿದೆ.
ಮೂರು ವಿಭಾಗಗಳು: ಯೋಗಿ ರನ್ ಕಾರ್ಯಕ್ರಮ ಮೂರು ವಿಭಾಗಗಳಲ್ಲಿ ನಡೆಯಲಿದೆ. ಓಪನ್(ಪುರುಷ ಮತ್ತು ಮಹಿಳೆಯರು), ಮಾಸ್ಟರ್(45- 55 ವಯೋಮಾನದವರಿಗಾಗಿ) ಮತ್ತು ಸೀನಿಯರ್(55 ವರ್ಷ ಮೇಲ್ಪಟ್ಟವರಿಗಾಗಿ)
– 21ಕೆ ಬೆಳಗ್ಗೆ 6.30ಕ್ಕೆ
– 10ಕೆ ಬೆಳಗ್ಗೆ 6.45ಕ್ಕೆ
– 5ಕೆ 7:15ಕ್ಕೆ
ಓಟದ ಹಾದಿ: ಭೋಗ ನಂದೀಶ್ವರ ದೇವಸ್ಥಾನದಲ್ಲೇ ಓಟ ಶುರು. ಅಲ್ಲಿಂದ ಸುಲ್ತಾನಪೇಟೆಯ ಮುಂಭಾಗ ಹಾದು, ಓಟಗಾರರು ಮೆಟ್ಟಿಲು ದಾರಿಯಿಂದ ನಂದಿ ಬೆಟ್ಟವನ್ನು ಹತ್ತುತ್ತಾರೆ. ಮತ್ತೆ ಬೆಟ್ಟವನ್ನು ಇಳಿದು ಭೋಗ ನಂದೀಶ್ವರದಲ್ಲಿ ಕೊನೆಗೊಳ್ಳಲಿದೆ.
ಎಲ್ಲಿ?: ಭೋಗ ನಂದೀಶ್ವರ ದೇವಸ್ಥಾನ, ನಂದಿ ಹಿಲ್ಸ್
ಯಾವಾಗ?: ಜೂನ್ 9, ಬೆಳಗ್ಗೆ 5.30
ಪ್ರವೇಶ:
499ರು.(5ಕೆ)
599 ರು. (10ಕೆ)
699 ರು. (21ಕೆ)
299 ರೂ.(18 ವರ್ಷ ಕೆಳಗಿನವರಿಗೆ)
ನೋಂದಣಿ: tinyurl.com/y6rlufkz
ಹೆಚ್ಚಿನ ಮಾಹಿತಿಗೆ: YOGI.RUN