ಮೈಸೂರು: ಮೈಸೂರು ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಸಮತಿಹಮ್ಮಿಕೊಂಡಿರುವ ಸೀಲ್‌ಡೌನ್ ಹಳ್ಳಿಗಳಿಗೆ-ಕಾಂಗ್ರೆಸ್ ಆಸರೆ ಎಂಬಕಾರ್ಯಕ್ರಮಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ಚಾಲನೆ ನೀಡಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಶನಿವಾರ ಕಾರ್ಯಕ್ರಮಕ್ಕೆ ಚಾಲನೆನೀಡಿ ಮಾತನಾಡಿದ ಅವರು, ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿಕೋವಿಡ್ 2ನೇ ಅಲೆಯಲ್ಲಿ ಸೋಂಕು ಹೆಚ್ಚಾಗಿ ಸೀಲ್‌ಡೌನ್‌ಆಗಿರುವ ಹಳ್ಳಿಗಳಲ್ಲಿ ಸೋಂಕಿತರಿಗೆ ನೆರವಾಗುವ ಉದ್ದೇಶದಿಂದಸೀಲ್‌ಡೌನ್ ಹಳ್ಳಿಗಳಿಗೆ-ಕಾಂಗ್ರೆಸ್ ಆಸರೆ ಅಡಿಯಲ್ಲಿ ಸೋಂಕಿತರಿಗೆಮೆಡಿಷನ್ ಕಿಟ್ ಹಾಗೂ ನಿರ್ಗತಿಕರಿಗೆ ಆಹಾರ ವಿತರಣೆಮಾಡಲಾಗುವುದು ಎಂದು ತಿಳಿಸಿದರು.
ಮೈಸೂರಿನ ಗ್ರಾಮಾಂತರ ಎಂಟು ವಿಧಾನ ಸಭಾ ಕ್ಷೇತ್ರಗಳಲ್ಲಿ 1ಕೋಟಿ ಮೌಲ್ಯದ ವೈದ್ಯಕೀಯ ಹಾಗೂ ಔಷಧ ನೆರವು ನೀಡಲಾಗಿದೆ.40 ಸಾವಿರ ಮಂದಿಗೆ ಬೇಕಾಗುವಷ್ಟು ಕೋವಿಡ್‌ಗೆ ಸಂಬಂಧಿಸಿದಔಷಧಿ ನೀಡಲಾಗಿದೆ. ಅಲ್ಲದೆ ಪಕ್ಷದಿಂದ ಜಿಲ್ಲೆಯಲ್ಲಿ 12 ಆಂಬುಲೇನ್Õಗಳು ಸಾರ್ವಜನಿಕರಿಗೆ ಉಚಿತವಾಗಿ ನೆರವು ನೀಡುತ್ತಿವೆ ಎಂದರು.
ಕಾಂಗ್ರೆಸ್‌ನಿಂದ ಇಡೀ ರಾಜ್ಯದ 224 ಕ್ಷೇತ್ರಗಳಲ್ಲೂ ಮೊದಲನೇಅಲೆಯಂತೇ 2ನೇ ಅಲೆಯಲ್ಲೂ ಜನರ ಸಂಕಷ್ಟಗಳಿಗೆ ಸ್ಪಂದಿಸಿಶಾಸಕರು, ಮಾಜಿ ಶಾಸಕರು, ಸಂಸದರು, ಜಿಲ್ಲಾ ಅಧ್ಯಕ್ಷರು, ಪಕ್ಷದಮುಖಂಡರು ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ.ಕಾಂಗ್ರೆಸ್ ಶಾಸಕರ ಪ್ರದೇಶ ಅಭಿವೃದ್ಧಿ ಅನುದಾನ ಬಳಸಿ 100ಕೋಟಿ ರೂ. ಮೌಲ್ಯದ ಲಸಿಕೆ ಖರೀದಿಸಿ ಜನರಿಗೆ ನೀಡಲುಮುಂದಾಗಿದೆ.
ಆದರೆ ಬಿಜೆಪಿ ಸರಕಾರ ಅನುಮತಿ ನೀಡುತ್ತಿಲ್ಲ, ತಮ್ಮರಾಜಕೀಯ ಸಂಕುಚಿತ ಮನೋಭಾವನೆ ಲಸಿಕೆ ಖರೀದಿಗೆ ಅವಕಾಶಮಾಡಿಕೊಡಿ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಶಾಸಕರಾದ ಡಾ.ಯತೀಂದ್ರ, ಅನಿಲ್‌ಚಿಕ್ಕಮಾಧು, ಆರ್.ಧರ್ಮಸೇನಾ, ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್‌ಅಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್, ಮಾಜಿ ಶಾಸಕ ಕಳಲೆ ಎನ್,ಕೇಶವಮೂರ್ತಿ, ಕಾಂಗ್ರೆಸ್ ಮುಖಂಡ ಹರೀಶ್‌ಗೌಡ, ಪಾಲಿಕೆಸದಸ್ಯ ಜೆ.ಗೋಪಿ. ಜಿಲ್ಲಾ ಮಾಧ್ಯಮ ವಕ್ತಾರ ಕೆ.ಮಹೇಶ್ ಸೇರಿದಂತೆಮತ್ತಿತರರು ಉಪಸ್ಥಿತರಿದ್ದರು.