Advertisement
ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಕರಾಟೆ ಆ್ಯಂಡ್ ಅಲೈಡ್ ಆರ್ಟ್ಸ್ ಆಶ್ರಯದಲ್ಲಿ ನಡೆದ ಅಂತರ್ ಶಾಲಾ- ಕಾಲೇಜು ರಾಜ್ಯಮಟ್ಟದ ಕರಾಟೆ ಚಾಂಪಿಯನ್‌ಶಿಪ್- 2018ನ್ನು ಉದ್ಘಾಟಿಸಿ ಅವರು ಮಾತನಾಡಿದರು.
Related Articles
ಸೇರ್ಪಡೆಗೊಂಡ ಕರಾಟೆಯನ್ನು ಬೆಳೆಸುವ ನಿಟ್ಟಿನಲ್ಲಿ ಪ್ರತಿ ವರ್ಷ ಸ್ಪರ್ಧಾ ಕೂಟವನ್ನು ಏರ್ಪಡಿಸಲಾಗುತ್ತಿದೆ ಎಂದರು.
Advertisement
ಫ್ಯಾಶನ್‌ಗೋಸ್ಕರ ಕಲಿಯುವ ಅಗತ್ಯವಿಲ್ಲಕರಾಟೆ ತರಬೇತು ಸಂಸ್ಥೆಯ ಸ್ಥಾಪಕ ಸೇಡಿಯಾಪು ಜನಾರ್ದನ ಭಟ್ ಮಾತನಾಡಿ, ಜನಪ್ರಿಯತೆ ಪಡೆಯುತ್ತಿರುವ ಕರಾಟೆಯನ್ನು ಕೇವಲ ಫ್ಯಾಶನ್‌ಗೋಸ್ಕರ ಕಲಿಯುವ ಅಗತ್ಯವಿಲ್ಲ. ಪ್ರಾಣಾಯಾಮದ ಮೂಲಕ ಅದರದ್ದೇ ಆದ ಚೌಕಟ್ಟಿನಡಿ ಶಿಸ್ತಿನಿಂದ ಅಭ್ಯಾಸ ಮಾಡಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ| ಕೆ.ಎಂ. ಕೃಷ್ಣ ಭಟ್ ಮಾತನಾಡಿ, ಸ್ವರಕ್ಷಣೆ ಇಲ್ಲದೆ ಇನ್ನೊಬ್ಬರ ರಕ್ಷಣೆ ಮಾಡಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಕರಾಟೆಯನ್ನು ಮೊದಲು ಮೈಗೂಡಿಸಿಕೊಂಡು ತಮ್ಮನ್ನು ರಕ್ಷಣೆ ಮಾಡುವ ಮೂಲಕ ಇತರರನ್ನೂ ರಕ್ಷಣೆ ಮಾಡಿಕೊಳ್ಳಬಹುದು ಎಂದರು. ವಿವೇಕಾನಂದ ಶಾಲಾ ಅಧ್ಯಕ್ಷ ವೆಂಕಟೇಶ್ವರ ಅಮೈ ಎ., ಆಡಳಿತ ಮಂಡಳಿ ಸಂಚಾಲಕ ಮುರಳೀಧರ ಕೆ., ಮುಖ್ಯಶಿಕ್ಷಕ ಸತೀಶ್ ಕುಮಾರ್ ರೈ, ಕರಾಟೆ ಶಿಕ್ಷಕ ಆನಂದ ದೇವಾಡಿಗ ಉಪಸ್ಥಿತರಿದ್ದರು. ಇನ್ಸಿಟ್ಯೂಟ್ ಆಫ್ ಕರಾಟೆ ಆಂಡ್ ಅಲೈಡ್ ಆರ್ಟ್ಸ್ ಪುತ್ತೂರು ಶಾಖೆಯ ಮುಖ್ಯ ಶಿಕ್ಷಕ ಶಿಹಾನ್ ಎಂ. ಸುರೇಶ್ ಪ್ರಾಸ್ತಾವಿಕವಾಗಿ ಸ್ವಾಗತಿಸಿದರು. ನಗರ ಬಿಇಎಂ ಶಾಲಾ ಮುಖ್ಯಶಿಕ್ಷಕ ಮನೋಹರ ಕುಮಾರ್, ಪಶು ವೈದ್ಯಾ ಧಿಕಾರಿ ಡಾ| ಉಷಾ ಎನ್. ನಿರೂಪಿಸಿದರು. ಇನ್ಸಿಟ್ಯೂಟ್ ಆಫ್
ಕರಾಟೆ ಆಂಡ್ ಅಲೈಡ್ ಆರ್ಟ್ಸ್ ಸದಸ್ಯ ಗೋಪಾಲ್ ವಂದಿಸಿದರು. ದೆಹಲಿಯ ನಿರ್ಭಯಾ ಹತ್ಯೆಯ ಬಳಿಕ ಇಂತಹ ಘಟನೆ ಮರುಕಳಿಸಬಾರದು ಎಂದು ಸರಕಾರ ಗಂಭೀರ ಚಿಂತನೆ ನಡೆಸಿದೆ. ಗ್ರಾಮೀಣ, ನಗರ ಪ್ರದೇಶದ ಶಾಲಾ- ಕಾಲೇಜುಗಳಲ್ಲಿ ಕರಾಟೆಯನ್ನು ಕಡ್ಡಾಯಗೊಳಿಸಿದೆ. ಹೆಣ್ಣು ಮಕ್ಕಳಿಗೆ ಇದರಲ್ಲಿ ಮೊದಲ ಆದ್ಯತೆ ನೀಡಲಾಗಿದೆ ಎಂದು ಜಿಲ್ಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಿವರಾಮಯ್ಯ ವೈ. ತಿಳಿಸಿದ್ದಾರೆ. 1,500 ಸ್ಪರ್ಧಿಗಳು
ರಾಜ್ಯಮಟ್ಟದ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ 200 ಶಾಲಾ- ಕಾಲೇಜುಗಳು ಭಾಗವಹಿಸಿವೆ. 1,500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ. ಎರಡು ದಿನಗಳ ಕಾಲ ನಡೆಯುವ ಪಂದ್ಯಕ್ಕಾಗಿ ಏಳು ಮ್ಯಾಟ್ ಅಂಕಣ ನಿರ್ಮಿಸಲಾಗಿದೆ. ಸ್ಪರ್ಧಾ ಫಲಿತಾಂಶಕ್ಕಾಗಿ ಎಲ್‌ಇಡಿ ಡಿಸ್‌ಪ್ಲೆ ಅಳವಡಿಸಲಾಗಿದೆ. ಪ್ರತಿ ಅಂಕಣದಲ್ಲೂ ಎಲ್‌ಇಡಿ ಮೂಲಕ ಸ್ಪರ್ಧೆಯ ಮಾಹಿತಿ ನೀಡುವ ವ್ಯವಸ್ಥೆ ಮಾಡಲಾಗಿದೆ.