Advertisement
“ಕ್ರಿಕೆಟ್‌ನಲ್ಲಿ ಬ್ಯಾಟರ್ ಬಂದು ತನ್ನ ತಂಡಕ್ಕಾಗಿ ರನ್‌ಗಳನ್ನು ಸ್ಕೋರ್ ಮಾಡುತ್ತಾನೆ. ರಾಜಸ್ಥಾನ ಕಾಂಗ್ರೆಸ್ ಕೂಡ ಒಂದು ಕ್ರಿಕೆಟ್ ಟೀಂ ಇದ್ದಂತೆ. ಆದರೆ, ಕಾಂಗ್ರೆಸ್‌ನಲ್ಲಿ ಎಷ್ಟೊಂದು ಒಳಜಗಳ ಇದೆಯೆಂದರೆ, ರನ್‌ಗಳನ್ನು ಗಳಿಸುವ ಬದಲು ಕಾಂಗ್ರೆಸ್‌ನ ನಾಯಕರು ಪರಸ್ಪರರನ್ನು ರನೌಟ್ ಮಾಡಲು ಯತ್ನಿಸುತ್ತಲೇ ಕಳೆದ 5 ವರ್ಷಗಳನ್ನು ಕಳೆದರು’ ಎನ್ನುತ್ತಾ ಪ್ರಧಾನಿ ಮೋದಿಯವರು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಮಾಜಿ ಡಿಸಿಎಂ ಸಚಿನ್ ಪೈಲಟ್ ನಡುವಿನ ಅಧಿಕಾರಕ್ಕಾಗಿ ಕಿತ್ತಾಟವನ್ನು ಪರೋಕ್ಷವಾಗಿ ಉಲ್ಲೇಖಿಸಿ ಕಾಂಗ್ರೆಸ್‌ನ ಕಾಲೆಳೆದಿದ್ದಾರೆ.
Related Articles
ಪ್ರಧಾನಿ ಮೋದಿ ಯವರು ಎರಡು ಹಿಂದೂಸ್ಥಾನವನ್ನು ರೂಪಿಸಲು ಬಯಸಿದ್ದಾರೆ. ಒಂದು ಅದಾನಿಗೆ, ಮತ್ತೊಂದು ಬಡವರಿಗೆ. ಮೋದಿಯವರು ಕೋಟ್ಯಧಿಪತಿ ಉದ್ಯಮಿ ಗೌತಮ್ ಅದಾನಿ ಯವರಿಗೋಸ್ಕರ ಕೆಲಸ ಮಾಡು ತ್ತಿದ್ದಾರೆ. ಹೀಗಾಗಿ ಅವರು “ಭಾರತ್ ಮಾತಾ ಕೀ ಜೈ’ ಎನ್ನುವ ಬದಲು “ಅದಾನಿ ಜೀ ಕಿ ಜೈ’ ಎನ್ನಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ರಾಜಸ್ಥಾನದ ಬುಂದಿ ಮತ್ತು ದೌಸಾದಲ್ಲಿ ರಾಹುಲ್ ಪ್ರಚಾರ ನಡೆಸಿದ್ದಾರೆ.
Advertisement
ಪೈಲಟ್ ಓಟ್‌ಬ್ಯಾಂಕ್‌ಗೆ ಲಗ್ಗೆ ಹಾಕುತ್ತಾ ಬಿಜೆಪಿ?ರಾಜಸ್ಥಾನದ ಟೋಂಕ್ ವಿಧಾನಸಭೆ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿಯ “ಸ್ಥಳೀಯ ಅಭ್ಯರ್ಥಿ ವರ್ಸಸ್ ಬಾಹ್ಯ ಅಭ್ಯರ್ಥಿ’ ಅಸ್ತ್ರವು ಕಾಂಗ್ರೆಸ್ ಅಭ್ಯರ್ಥಿ ಸಚಿನ್ ಪೈಲಟ್‌ಗೆ ಸೋಲಿನ ರುಚಿ ತೋರಿಸಲಿದೆಯೇ? ಟೋಂಕ್ ಶಾಸಕ ಪೈಲಟ್‌ಗೆ ಪ್ರಭಾವಿ ಸಮುದಾಯಗಳ ಬೆಂಬಲವಿದೆ. ಜತೆಗೆ ಕಾಂಗ್ರೆಸ್‌ನ ರಾಷ್ಟ್ರಮಟ್ಟದ ನಾಯಕ ಎಂಬ ವರ್ಚಸ್ಸು ಇದೆ. ಪೈಲಟ್ ಪರ ಗಟ್ಟಿಯಾಗಿ ನಿಂತಿರುವ ಮುಸ್ಲಿಂ-ಗುರ್ಜರ್ ಓಟ್ ಬ್ಯಾಂಕ್ ಅನ್ನು ಅಷ್ಟು ಸುಲಭದಲ್ಲಿ ಒಡೆಯಲು ಸಾಧ್ಯವಿಲ್ಲ ಎನ್ನುವುದು ಬಿಜೆಪಿಗೂ ಗೊತ್ತು. ಆದರೂ ಕಮಲ ಪಕ್ಷ ತನ್ನ ಪ್ರಯತ್ನ ಮುಂದುವರಿಸಿದೆ. “ಹಿಂದುತ್ವ’ ಮತ್ತು “ಲೋಕಲ್ ವರ್ಸಸ್ ಔಟ್‌ಸೈಡರ್’ ಮಂತ್ರದೊಂದಿಗೆ ಬಿರುಸಿನ ಪ್ರಚಾರ ನಡೆಸುತ್ತಿದೆ. “ಕಳೆದ ಚುನಾವಣೆಯಲ್ಲಿ ಸಚಿನ್ ಪೈಲಟ್‌ರನ್ನು ಸಿಎಂ ಅಭ್ಯರ್ಥಿ ಎಂದೇ ಬಿಂಬಿಸಲಾಗಿತ್ತು. ಹಾಗಾಗಿ ಅವರು ಭರ್ಜರಿ ಗೆಲುವು ಸಾಧಿಸಿದ್ದರು. ಆದರೆ ಈ ಬಾರಿ ಅವರನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಿಯೂ ಇಲ್ಲ. ಅಲ್ಲದೇ ಅವರು ಹೊರಗಿನವರು. ಈ ಕ್ಷೇತ್ರದ ಮೂಲ ಸಮಸ್ಯೆಗಳ ಬಗ್ಗೆ ಅವರಿಗೆ ಅರಿವಿಲ್ಲ. ಕ್ಷೇತ್ರದ ಪ್ರತಿಯೊಂದು ಸಣ್ಣ ಸಣ್ಣ ಸಮಸ್ಯೆಯೂ ನನಗೆ ಗೊತ್ತು’ ಎನ್ನುತ್ತಾ ಪ್ರಚಾರ ಮಾಡುತ್ತಿದ್ದಾರೆ ಬಿಜೆಪಿ ಅಭ್ಯರ್ಥಿ ಅಜಿತ್ ಸಿಂಗ್ ಮೆಹ್ತಾ. ಇವರ ಮಾತುಗಳು ಕೆಲವು ಮತದಾರರ ಮನವೊಲಿಸುವಲ್ಲಿ ಯಶಸ್ವಿಯಾಗಬಹುದು. ಆದರೂ ಪೈಲಟ್ ಇಂದು ಸಿಎಂ ಆಗದಿದ್ದರೂ, ನಾಳೆ ಆಗಿಯೇ ಆಗುತ್ತಾರೆ. ಅವರಿಗೆ ನಮ್ಮ ಬೆಂಬಲ ಮುಂದುವರಿಯುತ್ತದೆ ಎನ್ನುವುದು ಇನ್ನು ಕೆಲವರ ಅಭಿಪ್ರಾಯ.