ಚಿಕ್ಕೋಡಿ: ದೇಶದಲ್ಲಿ ಕೋವಿಡ್ ನಿಯಂತ್ರಿಸಲು ಪ್ರಧಾನಿ ಮೋದಿ ಯವರು ಕಳೆದ ಎರಡು ವರ್ಷಗಳಿಂದ ಪ್ರಯತ್ನಿಸುತ್ತಿದ್ದು, ಅವರ ಪ್ರಯತ್ನ ಸಫಲವಾಗುತ್ತಿದೆ. ಮೂರನೇ ಅಲೆಯಲ್ಲಿ ಮಕ್ಕಳಿಗೆ ಕೊರೊನಾ ಸೋಂಕು ಬರಬಾರದು ಎಂಬ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರವು 15ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ ನೀಡುವ ಅಭಿಯಾನ ಪ್ರಾರಂಭಿಸಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಸೋಮವಾರ ನಿಪ್ಪಾಣಿ ತಾಲೂಕಿನ ಬೋರಗಾಂವ ಪಟ್ಟಣದ ಸರ್ಕಾರಿ ಪಿಯು ಕಾಲೇಜಿನಲ್ಲಿ ಆರೋಗ್ಯ ಇಲಾಖೆ ವತಿಯಿಂದ ಹಮ್ಮಿಕೊಂಡ ಕೋವಿಡ್ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರವು 15ರಿಂದ 18 ವರ್ಷದ ಎಲ್ಲ ಮಕ್ಕಳಿಗೆ ಕೋವಿಡ್ ಲಸಿಕೆ ನೀಡಲಿದೆ.
ಮಕ್ಕಳು ತಮ್ಮ ಆಧಾರ ನೋಂದಣಿ ಮಾಡಿ ಲಸಿಕೆ ಲಾಭ ಪಡೆದು ಸುರಕ್ಷಿತರಾಗಿರಬೇಕು. ಈ ಬಗ್ಗೆ ಎಲ್ಲರಲ್ಲಿ ಅರಿವು ಮೂಡಿಸಬೇಕೆಂದರು. ತಾಲೂಕಾ ಆರೋಗ್ಯಾಧಿ ಕಾರಿ ಡಾ| ವಿಠಲ ಶಿಂದೆ ಸ್ವಾಗತಿಸಿದರು. ಬಿಜೆಪಿ ಮುಖಂಡ ಸುನೀಲ ಪಾಟೀಲ, ಪಪಂ ಸದಸ್ಯ ಶರದ ಜಂಗಟೆ, ವಿಷ್ಣು ತೋಡಕರ, ಜಮೀಲ ಅತ್ತಾರ, ಬಾಬಾಸಾಬ ಚೌಗುಲೆ, ರಮೇಶ ಮಾಲಗಾಂವೆ, ದಾದಾ ಭಾದುಲೆ, ಅಜಿತ ತೇರದಾಳೆ, ರಾಣಿ ಬೇವಿನಕಟ್ಟಿ, ಪಿಂಟು ಬೇವಿನಕಟ್ಟಿ, ಅಯುಬ ಮಕಾಂದರ, ಶೇಸು ಐದಮಾಳೆ, ಮಹಪತಿ ಖೋತ, ಪಿ.ಎ. ಕಲ್ಯಾಣಶೇಟ್ಟಿ, ಆರೋಗ್ಯಾ ಧಿಕಾರಿ ವಿಲೋಲ ಜೋಶಿ, ರಾಜು ಕುಂಭಾರ, ಶಿವಾಜಿ ಭೋರೆ, ಆರ.ಎಚ್. ತಿಪ್ಪೆಮಣಿ, ಆರ್.ಆರ್. ಭೀಮನ್ನವರ ಇನ್ನಿತರರಿದ್ದರು.