Advertisement

ಉದ್ಯೋಗ ಖಾತ್ರಿ ನೀಡುವವರಿಗೆ ಓಟು

10:57 AM Feb 12, 2018 | Team Udayavani |

ರಾಮನಗರ: ಹಣ, ಜಾತಿ, ಧರ್ಮದ ಆಮಿಷ ಬೇಡ. ಸುಭದ್ರ ಉದ್ಯೋಗ ಖಾತ್ರಿ ಮಾಡುವ ಯುವಜನರ ಪ್ರಣಾಳಿಕೆ ಒಪ್ಪಿಕೊಳ್ಳುವವರಿಗೆ ಮಾತ್ರ ನಮ್ಮ ಓಟು ಎಂದು ರಾಮನಗರದ  ಯುವಕರು  ಪ್ರತಿಜ್ಞೆ ಮಾಡಿದ್ದಾರೆ.

Advertisement

“ಉದ್ಯೋಗಕ್ಕಾಗಿ ಯುವಜನರು’ ಸಂಘಟನೆಯು ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮ ಆಯೋಜಿಸಿತ್ತು. ಈ ವೇಳೆ, ಸಂಘಟ ನೆಯ ಸ್ಪೂರ್ತಿ ಮಾತನಾಡಿ, ಉದ್ಯೋಗ ಹೊಂದುವ ಹಕ್ಕು ಗಳಿಸಲು ಸಾಧ್ಯವಾಗುವ ರೀತಿಯಲ್ಲಿ ರಾಜಕಾರಣಿಗಳು ನೀತಿ ರೂಪಿಸಬೇಕು. ಎಂದರು.

2018ರ ಚುನಾವಣೆಗೆ ಎಲ್ಲಾ ರಾಜಕೀಯ ಪಕ್ಷಗಳು ಉದ್ಯೋಗ ಸೃಷ್ಟಿ ಮತ್ತು ಉದ್ಯೋಗ ಭದ್ರತೆಯ ವಿಚಾರವನ್ನು ತಮ್ಮ ಚುನಾವಣಾ ಪ್ರಣಾಳಿಕೆಯ ಪ್ರಧಾನ ವಿಚಾರವನ್ನಾಗಿಸಿಕೊಳ್ಳಬೇಕು. ಸಮಾನ ವೇತನದ ಹಕ್ಕನ್ನು ಜಾರಿಗೊಳಿಸುವ, ಉದ್ಯಮ ಶೀಲತೆ  ಪ್ರೋತ್ಸಾಹಿಸುವ, ಕೌಶಲ್ಯ ಭಾರತದ ಜೊತೆಗೆ ಉದ್ಯೋಗಸ್ಥ ಭಾರತ ಸೃಷ್ಟಿ, ಸ್ಥಳೀಯರಿಗೆ ಉದ್ಯೋಗ, ಶಿಕ್ಷಣ ಕ್ರಮದ ಸುಧಾರಣೆಯ ಅಂಶಗಳು ಪ್ರಣಾಳಿಕೆಯಲ್ಲಿರಬೇಕು ಎಂದು ಆಗ್ರಹಿಸಿದರು.

ಫೆ.18ರಂದು ಯುವ ಅಧಿವೇಶನ: ಸೋಮವಾರ ತಮ್ಮ ಸಂಘಟನೆ ಸಿದ್ದಪಡಿಸಿರುವ ಪ್ರಣಾಳಿಕೆಯ ವಿಸ್ತೃತ ರೂಪವನ್ನು 3 ಪ್ರಮುಖ ರಾಜಕೀಯ ಪಕ್ಷಗಳಿಗೆ ನೀಡುವುದಾಗಿ ತಿಳಿಸಿದರು. ಇದೇ ಫೆ.18ರಂದು ಬೆಂಗಳೂರಿನಲ್ಲಿ ಯುವ ಅಧಿವೇಶನವನ್ನು ಆಯೋಜಸಿದ್ದು, ರಾಜಕೀಯ ಪಕ್ಷಗಳ ಮುಖಂಡರು ಅಲ್ಲಿಗೆ ಬಂದು ಅವರ ಪ್ರತಿಕ್ರಿಯೆ ನೀಡಬೇಕು ಎಂದು ಒತ್ತಾಯಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next