ಹಾವೇರಿ: ನಗರದ ಮೈಲಾರ ಮಹದೇವಪ್ಪ ವೃತ್ತದಲ್ಲಿ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಶನಿವಾರ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಚಾಲನೆ ನೀಡಿದರು.
ಸದಸ್ಯತ್ವ ನೋಂದಣಿ ಪುಸ್ತಕದಲ್ಲಿ ಭಾವಚಿತ್ರದೊಂದಿಗೆ ಸ್ವ-ವಿವರ ಬರೆದು ಸಹಿ ಮಾಡಿದ ಸಲೀಂ ಅಹ್ಮದ್ ನೋಂದಣಿ ಶುಲ್ಕ 5 ರೂ. ಪಾವತಿಸಿ, ಸದಸ್ಯತ್ವದ ಅರ್ಜಿಯನ್ನು ಜಿಲ್ಲಾಧ್ಯಕ್ಷಎಂ.ಎಂ. ಹಿರೇಮಠ ಅವರಿಗೆ ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಕಳೆದ ತಿಂಗಳ 14ರಂದು ಸದಸ್ಯತ್ವ ಅಭಿಯಾನ ಆರಂಭಿಸಿದ್ದೆವು. ಇಂದು ಬೂತ್ ಮಟ್ಟದಲ್ಲಿ ಸದಸ್ಯತ್ವ ಅಭಿಯಾನಹಮ್ಮಿಕೊಳ್ಳಲಾಗಿದ್ದು, ಪಕ್ಷದ ಎಲ್ಲ ನಾಯಕರು ಸಹ ಇದರಲ್ಲಿ ಭಾಗಿಯಾಗಿದ್ದಾರೆ. ನಾನೂ ಸಹ ನನ್ನ ಬೂತ್‌ನಲ್ಲಿ ಸದಸ್ಯತ್ವ ಮಾಡಿದ್ದೇನೆ. ನಮ್ಮ ಪಕ್ಷದ ಎಷ್ಟೇ ದೊಡ್ಡ ನಾಯಕರಿದ್ದರೂ ಅವರ ಬೂತ್ ಗಳಲ್ಲಿ ಅವರು ಸದಸ್ಯತ್ವ ಹೊಂದುವುದನ್ನು ಪಕ್ಷ ಕಡ್ಡಾಯಗೊಳಿಸಿದೆ ಎಂದರು.
ಪಕÒವನ್ನು ತಳ ಮಟ್ಟದಲ್ಲಿ ಸಂಘಟನೆ ಮಾಡುವ ಉದ್ದೇಶದಿಂದ ಬೂತ್ ಮಟ್ಟದಲ್ಲಿನಕಾರ್ಯಕರ್ತರು ಕ್ರಿಯಾಶೀಲವಾಗಿ ಕೆಲಸಮಾಡಲು ಪ್ರೇರಣಾ ಶಕ್ತಿಯಾಗಿ ಈ ಸದಸ್ಯತ್ವಅಭಿಯಾನ ಬುನಾದಿಯಾಗಲಿದೆ ಎಂದರು.
ಇಡೀ ರಾಜ್ಯದಲ್ಲಿ 50ಲಕ್ಷ ಸದಸ್ಯತ್ವ ಮಾಡುವ ಗುರಿ ಹೊಂದಿದ್ದೇವೆ. ಆ ಮೂಲಕ ಪಕ್ಷದಕಾರ್ಯಕರ್ತರು ಮನೆ, ಮನೆಗೆ ಹೋಗಿ ಪಕ್ಷದ ತತ್ವ,ಸಿದ್ಧಾಂತ ಹಾಗೂ ಕಾರ್ಯಕ್ರಮಗಳನ್ನು ತಲುಪಿಸಿಸದಸ್ಯತ್ವ ಮಾಡಿಸುತ್ತಿದ್ದಾರೆ. ಆಂದೋಲನದ ರೀತಿಯಲ್ಲಿ ಸದಸ್ಯತ್ವ ಅಭಿಯಾನ ಮಾಡುತ್ತಿದ್ದು, ಸದಸ್ಯತ್ವದೊಂದಿಗೆ ಪಕ್ಷ ಸಂಘಟಿಸುತ್ತಿದ್ದೇವೆ. ಬೂತ್ ಕಮಿಟಿ ಸದಸ್ಯರಿಗೆ ತರಬೇತಿ
ನೀಡುತ್ತೇವೆ. ಮಹಿಳೆಯರಿಗೆ, ಯುವಕರಿಗೆ ಹೆಚ್ಚಿನ ಒತ್ತು ಕೊಟ್ಟು ಸದಸ್ಯತ್ವ ಮಾಡಿಸುತ್ತಿದ್ದೇವೆ. ಪಕ್ಷದಸದಸ್ಯರು ಕೇಂದ್ರ, ರಾಜ್ಯ ಸರ್ಕಾರ ವೈಫಲ್ಯಗಳನ್ನುಜನರಿಗೆ ತಲುಪಿಸುವ ಕೆಲಸ ಮಾಡಲಿದ್ದಾರೆ ಎಂದರು.
ಈ ವೇಳೆ ಮಾಜಿ ಸಚಿವರಾದ ಬಸವರಾಜಶಿವಣ್ಣನವರ, ರುದ್ರಪ್ಪ ಲಮಾಣಿ, ಕೆಪಿಸಿಸಿ ವಕ್ತಾರ ಡಿ. ಬಸವರಾಜ, ಆರ್.ಎಂ. ಕುಬೇರಪ್ಪ, ಶ್ರೀನಿವಾಸ ಹಳ್ಳಳ್ಳಿ, ಬಸವರಾಜ ಬಳ್ಳಾರಿ ಇತರರು ಇದ್ದರು.