Advertisement

“ನಮ್ಮ ಶಾಲೆಗೆ ಶೇ.100 ಫಲಿತಾಂಶ’ಯೋಜನೆಗೆ ಚಾಲನೆ

02:05 PM Aug 17, 2017 | |

ಬಳ್ಳಾರಿ: ಕಳೆದ ಸಾಲಿಗಿಂತ ಈ ಶೈಕ್ಷಣಿಕ ಸಾಲಿನಲ್ಲಿ ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಿಸಲು “ನಮ್ಮ ಶಾಲೆ ಶೇ.100ರಷ್ಟು ಫಲಿತಾಂಶ’ ಎಂಬ ವಿಶೇಷ ಯೋಜನೆಯನ್ನು ಬೆಂಗಳೂರಿನ ಕ್ರಿಯೆಟೀವ್‌ ಕ್ಲಾಸ್‌ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್‌ ತಿಳಿಸಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಯೋಜನೆಯಡಿ 8, 9 ಮತ್ತು 10ನೇ ತರಗತಿಗಳ ವಿದ್ಯಾರ್ಥಿಗಳಿಗೆ ನಿರ್ದಿಷ್ಟ ವಿಷಯಗಳಲ್ಲಿ ವಿಶೇಷ ತರಬೇತಿ ನೀಡಲು ಜಿಲ್ಲಾಡಳಿತ ನಿರ್ಧರಿಸಿದೆ ಎಂದು ತಿಳಿಸಿದರು. ವಿದ್ಯಾರ್ಥಿಗಳು ಕಷ್ಟದ ವಿಷಯ ಎಂದೇ ಭಾವಿಸಿರುವ ಗಣಿತ, ವಿಜ್ಞಾನ ಹಾಗೂ ಇಂಗ್ಲಿಷ್‌ ಪಠ್ಯಕ್ರಮಕ್ಕೆ ಸಂಬಂಧಿ ಸಿದಂತೆ ವಿದ್ಯಾರ್ಥಿಗಳಿಗೆ ಇರುವ ಅನುಮಾನ ಪರಿಹರಿಸಲು ಹಾಗೂ ಈ ಪಠ್ಯವನ್ನು ಮಕ್ಕಳಿಗೆ ಹೇಗೆ ಪರಿಣಾಮಕಾರಿಯಾಗಿ ಬೋಧನೆ ಮಾಡಬೇಕು ಎಂಬ ಅಂಶಗಳ ಕುರಿತು ಶಿಕ್ಷಕರಿಗೆ ಕ್ರಿಯೇಟಿವ್‌ ಕ್ಲಾಸೆಸ್‌ ಸಂಸ್ಥೆಯ ತಜ್ಞರು ತರಬೇತಿ ನೀಡಲಿದ್ದಾರೆ. ಸಂಸ್ಥೆಯು ಕಳೆದ ಏಳು ವರ್ಷಗಳಿಂದ ಫಲಿತಾಂಶ ಹೆಚ್ಚಳ ಕುರಿತ ತರಬೇತಿ ಸಂಬಂಧಿಸಿದಂತೆ ಸಂಶೋಧನೆ ನಡೆಸಿ, ತರಬೇತಿ ಕಾರ್ಯಕ್ರಮ ಹಮ್ಮಿಕೊಂಡು ಉತ್ತಮ ಫಲಿತಾಂಶ ದೊರೆಯುವಂತೆ ಶಾಲೆಗಳನ್ನು ತರಬೇತುಗೊಳಿಸಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಈ ಸಂಸ್ಥೆ ನೀಡಿದ ತರಬೇತಿ ಪಡೆದ ಶಾಲೆಗಳಲ್ಲಿ ಉತ್ತಮ ಫಲಿತಾಂಶ ಬಂದಿದೆ.

ಕಳೆದ ವರ್ಷವೂ ಕೂಡ ಬಳ್ಳಾರಿ ಜಿಲ್ಲೆಯಲ್ಲಿ ಇದೇ ಸಂಸ್ಥೆ ತರಬೇತಿ ನೀಡಿದ್ದು, ರಾಜ್ಯ ಮಟ್ಟದಲ್ಲಿ ಕೊನೆಯ ಸ್ಥಾನ ಗಳಿಸಿದ್ದ ಜಿಲ್ಲೆ 17ನೇ ಸ್ಥಾನಕ್ಕೇರಿದೆ. ಜಿಲ್ಲೆಯ ಶಿಕ್ಷಣಾಧಿಕಾರಿಗಳು, ಶಿಕ್ಷಕರು ಹಾಗೂ ಮಕ್ಕಳ ಸಹಭಾಗಿತ್ವದಿಂದಾಗಿಯೇ ಉತ್ತಮ ಫಲಿತಾಂಶ ಬರಲು ಸಾಧ್ಯವಾಯಿತು. ಕಳೆದ ವರ್ಷದ ಪ್ರಯತ್ನವನ್ನು ಈ ಬಾರಿಯೂ ಮುಂದುವರಿಸಲಾಗುವುದು. ಈ ಬಾರಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಜೊತೆಗೆ 8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳಿಗೆ ಸಹ ತರಬೇತಿ ನೀಡಲಾಗುತ್ತಿದೆ. ಈ ಯೋಜನೆ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯವಾಗಲಿದೆ. ನೇರ ಎಸ್ಸೆಸ್ಸೆಲ್ಸಿ
ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಬದಲು 8ನೇ ತರಗತಿಯಿಂದಲೇ ಮಕ್ಕಳನ್ನು ಪರೀಕ್ಷೆಗೆ  ಸಜ್ಜುಗೊಳಿಸಬೇಕು. ಶೈಕ್ಷಣಿಕ ಪ್ರಗತಿಗೆ ಅಗತ್ಯ 
ಸೌಲಭ್ಯ ಕಲ್ಪಿಸಿಕೊಡಬೇಕು ಎಂಬ ಉದ್ದೇಶದಿಂದ ಈ ಶೈಕ್ಷಣಿಕ ವರ್ಷದಿಂದ 8, 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡಲು ಜಿಲ್ಲಾಡಳಿತ ನಿರ್ಧರಿಸಿದೆ ಎಂದರು.

ಜಿಲ್ಲಾಧಿಕಾರಿ ಡಾ| ರಾಮ್‌ಪ್ರಸಾತ್‌ ಮನೋಹರ್‌ ಮಾತನಾಡಿ, ಕಳೆದ ವರ್ಷ ಅತ್ಯಂತ ಕಡಿಮೆ ವೆಚ್ಚದಲ್ಲಿ ಶಿಕ್ಷಕರು ಹಾಗೂ ಮಕ್ಕಳಿಗೆ ತರಬೇತಿ ನೀಡಲಾಗಿತ್ತು. ಬರೀ 4 ಲಕ್ಷ ರೂ. ವೆಚ್ಚದಲ್ಲಿ ತರಬೇತಿ ಮತ್ತಿತರ ಫಲಿತಾಂಶ ಹೆಚ್ಚಿಸುವ ಪೂರಕ ಚಟುವಟಿಕೆಗಳು ನಡೆದವು. ಬೆಂಗಳೂರಿನ ಇಂಜಿನಿಯರ್‌ ಜೆ.ಜಿ.ಅನಂತ್‌ ಅವರು ಸ್ವಯಂ ಆಸಕ್ತಿಯಿಂದ ಇಂತಹದೊಂದು ಮಹತ್ವದ ಕಾರ್ಯಕ್ಕೆ ಮುಂದಾಗಿದ್ದಾರೆ. ಅವರಿಗೆ ಜಿಲ್ಲಾಡಳಿತ ಸಹಕಾರ ನೀಡುತ್ತಿದೆ ಎಂದರು.

ಕ್ರಿಯೆಟೀವ್‌ ಕ್ಲಾಸ್‌ ಸಂಸ್ಥೆ ಮುಖ್ಯಸ್ಥ ಜೆ.ಜಿ.ಅನಂತ್‌ ಮಾತನಾಡಿ, ಈ ಹಿಂದೆ ದಾವಣಗೆರೆ, ಹಾವೇರಿ ಹಾಗೂ ಶಿವಮೊಗ್ಗ ಜಿಲ್ಲೆಗಳ ಕೆಲವೊಂದು ಶಾಲೆಗಳಲ್ಲಿ ಹೊಸ ಪದ್ಧತಿಯ ತರಬೇತಿ ಹಮ್ಮಿಕೊಳ್ಳಲಾಗಿತ್ತು. ಇದರಿಂದ ಉತ್ತಮ ಫಲಿತಾಂಶ ಬಂತು. ಕಳೆದ ವರ್ಷ ಬಳ್ಳಾರಿ ಜಿಲ್ಲೆಯಲ್ಲಿ ಆರಂಭಿಸಿದೆವು. ಶಿಕ್ಷಣ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳ ಸಹಕಾರದಿಂದಾಗಿಯೇ ಜಿಲ್ಲೆಗೆ ಉತ್ತಮ ಫಲಿತಾಂಶ ದೊರೆಯಿತು. ಈ ಬಾರಿ ಜಿಲ್ಲೆಯ ಎಲ್ಲ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಉದ್ದೇಶಿಸಿದ್ದೇವೆ. ಶಿಕ್ಷಕರು ಹಾಗೂ ಮಕ್ಕಳಿಗೆ ಸಹ ತರಬೇತಿ
ನೀಡಲಾಗುವುದು. ಬೋಧನಾ ಪದ್ಧತಿ ಹೇಳಿಕೊಡಲಾಗುವುದು. ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಕಡೆ ವಿಶೇಷವಾಗಿ ಗಮನ ಹರಿಸಲಾಗುವುದು. ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪಠ್ಯದಲ್ಲಿ ಭಾಗವಹಿಸುವಿಕೆಯ ಸೂತ್ರಗಳನ್ನು ಹೇಳಿಕೊಡಲಾಗುವುದು ಎಂದು ತಿಳಿಸಿದರು.

Advertisement

ಡಿಡಿಪಿಐ ಶ್ರೀಧರನ್‌ ಮಾತನಾಡಿ, ಜಿಲ್ಲೆಯ 197 ಸರ್ಕಾರಿ ಶಾಲೆಗಳಲ್ಲಿ 8, 9 ಮತ್ತು 10 ನೇ ತರಗತಿಯಲ್ಲಿ ಒಟ್ಟು 54,729 ವಿದ್ಯಾರ್ಥಿಗಳು ಓದುತ್ತಿದ್ದಾರೆ ಎಂದು ಮಾಹಿತಿ ನೀಡಿದರು. ಎಸ್ಪಿ ಆರ್‌.ಚೇತನ್‌ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಿಗೆ ಗಣಿತ, ವಿಜ್ಞಾನ ಹಾಗೂ ಇಂಗ್ಲಿಷ್‌ ಪಠ್ಯಕ್ರಮಕ್ಕೆ ಸಂಬಂಧಿಸಿದಂತೆ ಇರುವ ಅನುಮಾನ ಪರಿಹರಿಸಲು ಹಾಗೂ ಈ ಪಠ್ಯವನ್ನು ಮಕ್ಕಳಿಗೆ ಹೇಗೆ ಪರಿಣಾಮಕಾರಿಯಾಗಿ ಬೋಧನೆ ಮಾಡಬೇಕು ಎಂಬ ಅಂಶಗಳ ಕುರಿತು ಶಿಕ್ಷಕರಿಗೆ ಕ್ರಿಯೇಟಿವ್‌ ಕ್ಲಾಸೆಸ್‌ ಸಂಸ್ಥೆಯ ತಜ್ಞರು ತರಬೇತಿ ನೀಡಲಿದೆ. 
ಸಂತೋಷ ಲಾಡ್‌, ಸಚಿವ

Advertisement

Udayavani is now on Telegram. Click here to join our channel and stay updated with the latest news.

Next