Advertisement
ಗುರುವಾರ ಸಂಜೆ 6 ಗಂಟೆಯೊಳಗೆ 10 ಅತೃಪ್ತ ಶಾಸಕರಿಂದ ಮರಳಿ ರಾಜೀನಾಮೆ ಪಡೆಯುವಂತೆ ಸುಪ್ರೀಂ ಕೋರ್ಟ್, ಸ್ಪೀಕರ್ ಅವರಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಅತೃಪ್ತ ಶಾಸಕರೆಲ್ಲರೂ ಎದ್ದುಬಿದ್ದು ಬೆಂಗಳೂರಿಗೆಬಂದಿದ್ದರು. ಇದಷ್ಟೇ ಅಲ್ಲ, ಸುಪ್ರೀಂ ನಿರ್ದೇಶನದ ಮೇರೆಗೆ ಭಾರೀ ಪೊಲೀಸ್ ಬಂದೋಬಸ್ತ್ನಲ್ಲಿ ಬಂದ ಇವರೆಲ್ಲರೂ,ಏರ್‌ಪೋರ್ಟ್‌ನಲ್ಲೂ ಓಡೋಡಿ ವಾಹನ ಹತ್ತಿದವರು, ವಿಧಾನಸೌಧದ ಬಳಿಯೂ ಓಡೋಡಿ ಸ್ಪೀಕರ್ ಕಚೇರಿಗೆ ತೆರಳಿ ರಾಜೀನಾಮೆ ಸಲ್ಲಿಸಿದರು.
Related Articles
ಮುನಿರತ್ನ ಕೈ ಸನ್ನೆ ಸೂಚನೆ ನೀಡಿದ್ದು ಕಂಡುಬಂತು. ಇತರೆ ಶಾಸಕರು ಕೂಡ ಧಾವಂತದಲ್ಲೇ ನಿಲ್ದಾಣದ ಹೊರಗೆ ಬಂದು ವಾಹನಗಳನ್ನು ಏರಿದರು.
Advertisement
ಬಿಗಿ ಭದ್ರತೆಶಾಸಕರನ್ನು ಸುರಕ್ಷಿತವಾಗಿ ಕರೆದೊಯ್ಯಲು ಪೊಲೀಸ್ ಇಲಾಖೆ ಬಿಗಿ ಭದ್ರತೆ ವ್ಯವಸ್ಥೆ ಮಾಡಿಕೊಂಡಿತ್ತು.ಮೊದಲಿಗೆ ಡಿಸಿಪಿ ವಾಹನ. ಅದರ ಹಿಂದೆ ಒಂದು ಪೈಲಟ್, ಅದರ
ಹಿಂದೆ ಮತ್ತೂಂದು ಡಿಸಿಪಿ ವಾಹನ, ಅದನ್ನು ಹಿಂಬಾಲಿಸಿದ ಬೆಂಗಾವಲು ವಾಹನ. ಅದರ ಹಿಂದೆ ಶಾಸಕರು, ಆಪ್ತ ಸಹಾಯಕರಿದ್ದ ಮೂರು ಕಾರು, ಒಂದು ಮಿನಿ ಬಸ್, ಒಂದು ಟೆಂಪೊ ಟ್ರಾವೆಲ್ಲರ್. ಅದನ್ನು ಅನುಸರಿಸಿದ್ದ ಒಂದು ಬೆಂಗಾವಲು ವಾಹನ, ಅದನ್ನು ಹಿಂಬಾಲಿಸಿದ್ದ ಕೆಎಸ್‌ಆರ್‌ಪಿ ತುಕಡಿಯಿದ್ದ ವಾಹನಹಾಗೂ ಕೊನೆಯಲ್ಲಿ ಸಂಚಾರಿ ಪೊಲೀಸ್ ಜೀಪ್ ಸಾಗಿತ್ತು. ಕಾಂಗ್ರೆಸ್ ವಿಪ್
ಮೈತ್ರಿ ಸರ್ಕಾರ ಅತಂತ್ರ ಸ್ಥಿತಿಯಲ್ಲಿರುವ ಸಂದರ್ಭದಲ್ಲಿಯೇ ವಿಧಾನ ಮಂಡಲ ಅಧಿವೇಶನ ಆರಂಭವಾಗುತ್ತಿರುವುದರಿಂದ ಕಾಂಗ್ರೆಸ್ ಪಕ್ಷದ ಎಲ್ಲ ಶಾಸಕರಿಗೂ ಜುಲೈ 12 ರಿಂದ 26 ರ ವರೆಗೆ ಅಧಿವೇಶನದಲ್ಲಿ ಕಡ್ಡಾಯವಾಗಿ ಹಾಜರಿರುವಂತೆ ರಾಜ್ಯ ಸರ್ಕಾರದ ಮುಖ್ಯ ಸಚೇತಕ ಗಣೇಶ್ ಹುಕ್ಕೇರಿ ವಿಪ್ ಜಾರಿಗೊಳಿಸಿದ್ದಾರೆ. ಸ್ಪೀಕರ್ ರಮೇಶ್ ಕುಮಾರ್ ಕಲಾಪ ನಡೆಸುವ ಪ್ರತಿ ದಿನವೂ ಕಡ್ಡಾ ಯವಾಗಿ ಹಾಜರಿರಬೇಕು. ಯಾವುದೇ ಸಮಯದಲ್ಲಿ ಹಣಕಾಸು ಮಸೂದೆ ಹಾಗೂ ಪ್ರಮುಖ ಮಸೂದೆ ಗಳು ಮಂಡನೆಯಾಗಿ ಅಂಗೀಕಾರಗೊಳಿಸಬೇಕಾಗುತ್ತದೆ. ಹೀಗಾಗಿ ಜುಲೈ 12 ರಿಂದ 26 ರ ವರೆಗೆ ಆಡಳಿತ ಪಕ್ಷದ ಎಲ್ಲ ಶಾಸಕರು ಕಡ್ಡಾಯವಾಗಿ ಹಾಜರಿರು ವಂತೆ ವಿಪ್ ಜಾರಿಗೊಳಿಸಿದ್ದಾರೆ. ಒಂದು ವೇಳೆ ಶಾಸಕರು ಅಧಿ ವೇಶನಕ್ಕೆ ಹಾಜರಾಗದಿದ್ದರೆ ಸಂವಿಧಾ ನದ 10 ನೇ ಪರಿಚ್ಛೇದ ದನ್ವಯ ಪಕ್ಷ ವಿರೋಧಿ ಚಟುವಟಿಕೆ ಎಂದು ಪರಿಗಣಿಸಿ ಶಾಸಕ ಸ್ಥಾನದಿಂದ ಅನರ್ಹ ಗೊಳಿಸಲು ಸೂಚಿಸಲಾಗುವುದು ಎಂದು ವಿಪ್‌ನಲ್ಲಿ ಸ್ಪಷ್ಟಪಡಿಸಲಾಗಿದೆ. ಈಗಾಗಲೇ ರಾಜಿನಾಮೆ ನೀಡಿ ರುವ ಶಾಸಕರಿಗೂ ವಿಪ್ ಜಾರಿಗೊಳಿಸಲಾಗಿದ್ದು ಶಾಸಕರ ಭವನದಲ್ಲಿರುವ ಶಾಸಕರ ಕೊಠಡಿಗಳಿಗೆ ವಿಪ್ ಪ್ರತಿಯನ್ನುಅಂಟಿಸಲಾಗಿದೆ.