Advertisement
ಬೆಳಕಿಗೆ ಬಂದಿದ್ದು ಹೇಗೆ?: ಕೆಲ ಕಾಮಗಾರಿಗಳನ್ನು ಸ್ಮಾರ್ಟ್‌ಸಿಟಿ ಯೋಜನೆಯಡಿ ಕೈಗೆತ್ತಿಕೊಳ್ಳಲು ಅವಕಾಶ ಇರದಿದ್ದರೂ ಸಭೆಯಲ್ಲಿ ಪಾಸ್ ಮಾಡಿರುವ ಬಗ್ಗೆ ಜಿಲ್ಲೆಯ ಕೆಲ ಜನಪ್ರತಿನಿಧಿಗಳು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು. ಇದೀಗ ಡೀಮ್ಡ್ ಹಸ್ತಾಂತರದ ಪ್ರಕ್ರಿಯೆ ಮೂಲಕ ಸ್ಮಾರ್ಟ್‌ಸಿಟಿ ಕಂಪನಿ ಕೈ ತೊಳೆದುಕೊಂಡಿದೆ. ಈ ವಿಚಾರದಲ್ಲಿ ಅಧಿಕಾರಿಗಳದ್ದು ಒಂದು ನಡೆಯಾದರೆ, ಪಾಲಿಕೆ ಜನಪ್ರತಿನಿಧಿಗಳು ಇದಕ್ಕೆ ಪ್ರತಿಯಾಗಿ ಪರಿಶೀಲನೆಯಾಗದ ಹೊರತು ಹಸ್ತಾಂತರ ಅಸಾಧ್ಯ ಎನ್ನುವ ಪಟ್ಟು ಹಿಡಿದಿದ್ದಾರೆ. ಪಾಲಿಕೆಯಿಂದ ರಚಿಸಿದ್ದ ತಾಂತ್ರಿಕ ತಜ್ಞರ ಸಮಿತಿಯು ಯೋಜನೆಯಿಡಿ ನಿರ್ಮಾಣಗೊಂಡಿರುವ ಕಟ್ಟಡಗಳಲ್ಲಿ ಮಳೆನೀರು ಕೊಯ್ಲು ಹಾಗೂ ಸೌರಶಕ್ತಿ ಅಳವಡಿಸಿಲ್ಲ ಎಂಬುವುದನ್ನು ಗುರುತಿಸಿದೆ.
ಸ್ಮಾರ್ಟ್‌ಸಿಟಿ ಯೋಜನೆಗಳನ್ನು ಕೈಗೆತ್ತಿಕೊಂಡ ಸಂದರ್ಭದಲ್ಲಿ ಇಲ್ಲಿನ ಚಿಟಗುಪ್ಪಿ ಪಾರ್ಕ್, ಚಿಟಗುಪ್ಪಿ ಆಸ್ಪತ್ರೆ ಬಳಿಯ ವಸತಿ ಗೃಹ ಸೇರಿದಂತೆ ಕೆಲವೆಡೆ ಮಳೆನೀರು ಕೊಯ್ಲಿಗೆ ಪೂರಕವಾಗಿ ಗಟಾರು ಮಾದರಿಯಲ್ಲಿ ಸಿಮೆಂಟ್, ಜಲ್ಲಿ, ಮರಳು ಹಾಕಿ ಸಿದ್ಧಪಡಿಸಿದರು. ಅಂದು ಸಿದ್ಧಪಡಿಸಿದ್ದನ್ನು ಬಿಟ್ಟರೆ ಇದುವರೆಗೂ ಮಾಡಿದ ಕಾಮಗಾರಿ ಯೋಗ್ಯವಾಗಿದೆಯೇ ಎಂದು ಕಾಲ ಕಾಲಕ್ಕೆ ಪರಿಶೀಲಿಸುವ ಕೆಲಸ ಆಗಿಲ್ಲ. ಹೀಗಾಗಿ ವ್ರಥಾ ಹಣ ಸುರಿದಂತಾಗಿದೆ. ಸ್ಮಾರ್ಟ್‌ಸಿಟಿಯಲ್ಲಿ ನೈಸರ್ಗಿಕ ಸಂಪನ್ಮೂಲ ಸದ್ಬಳಕೆಗೆ ಒತ್ತು ನೀಡಲಾಗಿದೆ ಎನ್ನುವ ದಾಖಲೆಗಾಗಿ ಮಾಡಿದ್ದಾರೆ ಎಂಬುದನ್ನು ಅಲ್ಲಿನ ಅವಸ್ಥೆ ಸ್ಪಷ್ಟಪಡಿಸುತ್ತಿದೆ. ಎಲ್ಲೆಲ್ಲಿ ಉಲ್ಲಂಘನೆ?
ಹು-ಧಾ ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ 1080 ಕೋಟಿ ರೂ. ವೆಚ್ಚದಲ್ಲಿ 63 ಯೋಜನೆಗಳನ್ನು ಕೈಗೊಳ್ಳಲಾಗಿದೆ. 51 ಕಾಮಗಾರಿಗಳು ಪೂರ್ಣಗೊಂಡಿದ್ದು, ಇನ್ನೂ 10 ಯೋಜನೆಗಳು ಪ್ರಗತಿಯಲ್ಲಿದ್ದು, 2 ಪಿಪಿಪಿ ಮಾದರಿಯಲ್ಲಿ ಸಿದ್ಧಪಡಿಸಲಾಗುತ್ತಿದೆ. ಆದರೆ ಕಟ್ಟಡದ ಯೋಜನೆಗಳಾದ ಜನತಾ ಬಜಾರ್, ಗಣೇಶ ನಗರ ಮೀನು ಮಾರುಕಟ್ಟೆ, ಮೇದಾರ ಓಣಿ ಆಸ್ಪತ್ರೆ, ಕಟ್ಟಡ ಗುಣಮಟ್ಟ ಪರೀಕ್ಷಾ ಕೇಂದ್ರ, ಇಂಟಿಗ್ರೇಟೆಡ್ ಕಮಾಂಡ್ ಕಂಟ್ರೋಲ್ ಸೆಂಟರ್, ಚಿಟಗುಪ್ಪಿ ಆಸ್ಪತ್ರೆ ಆವರಣದಲ್ಲಿ ಎರಡು ಕಟ್ಟಡಗಳನ್ನು ನಿರ್ಮಿಸಿದ್ದು, ಮಳೆನೀರು ಕೊಯ್ಲುಗೆ ಆದ್ಯತೆ ನೀಡಿಲ್ಲ. ಇದೇರೀತಿ ಸೌರಶಕ್ತಿ ಬಳಕೆಗೂ ಆದ್ಯತೆ ನೀಡದೆ ಕೇವಲ ಕಟ್ಟಡ ನಿರ್ಮಿಸಿರುವ ಗುತ್ತಿಗೆ ಸಂಸ್ಥೆಯಂತಾಗಿದೆ ಎಂಬುದು ಮಹಾನಗರದ ಜನತೆಯ ಅಸಮಾಧಾನವಾಗಿದೆ.
Related Articles
Advertisement
ಸಾಮಾನ್ಯ ಜನರು ಕಟ್ಟಡ ಪೂರ್ಣಗೊಳಿಸಿ ಪ್ರಮಾಣಪತ್ರ ಪಡೆಯಬೇಕಾದರೆಸೋಲಾರ್, ಮಳೆನೀರು ಕೊಯ್ಲು ವ್ಯವಸ್ಥೆಯನ್ನು ಕಡ್ಡಾಯವಾಗಿ ಕೇಳುತ್ತೇವೆ. ಹೀಗಿರುವಾಗ ಸ್ಮಾರ್ಟ್‌ಸಿಟಿ ನಿರ್ಮಿಸಿರುವ ಯಾವ ಕಟ್ಟಡಗಳಿಗೂ ಈ ವ್ಯವಸ್ಥೆಯಿಲ್ಲದಿರುವಾಗ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಬಹುತೇಕ ಕಾಮಗಾರಿಗಳು ಅಪೂರ್ಣ ಸ್ಥಿತಿಯಲ್ಲಿದ್ದು, ಅವುಗಳನ್ನು ಪಾಲಿಕೆ ಪಡೆದುಕೊಂಡು ಇನ್ನೊಂದಿಷ್ಟು ಹಣ ಖರ್ಚು ಮಾಡಲು ಸಿದ್ಧವಿಲ್ಲ. ಹೀಗಾಗಿ ಡೀಮ್ಡ್ ಹಸ್ತಾಂತರ ಎನ್ನುತ್ತಿದ್ದಾರೆ. ಇದನ್ನು ಒಪ್ಪಿಕೊಳ್ಳುವ ಪ್ರಶ್ನೆಯೇ ಇಲ್ಲ.
ಸ್ಮಾರ್ಟ್‌ಸಿಟಿಯಲ್ಲಿ ನಿಯಮಗಳಿಗೆ ಎಳ್ಳುನೀರು? ಎಲ್ಲೆಲ್ಲಿ ಉಲ್ಲಂಘನೆಸ್ಮಾರ್ಟ್‌ಸಿಟಿಯಲ್ಲಿ ನಿಯಮಗಳಿಗೆ ಎಳ್ಳುನೀರು? ಎಲ್ಲೆಲ್ಲಿ ಉಲ್ಲಂಘನೆಸ್ಮಾರ್ಟ್‌ಸಿಟಿಯಲ್ಲಿ ನಿಯಮಗಳಿಗೆ ಎಳ್ಳುನೀರು? ಎಲ್ಲೆಲ್ಲಿ ಉಲ್ಲಂಘನೆಸ್ಮಾರ್ಟ್‌ಸಿಟಿಯಲ್ಲಿ ನಿಯಮಗಳಿಗೆ ಎಳ್ಳುನೀರು? ಎಲ್ಲೆಲ್ಲಿ ಉಲ್ಲಂಘನೆ ವಲಯ ನಿಯಮಗಳು ಸರಕಾರಿ, ಖಾಸಗಿ ಕಟ್ಟಡಗಳಿಗೂ ಅನ್ವಯಿಸಲಿದೆ. ಹೀಗಿರುವಾಗ ಪ್ರತಿಯೊಂದು ಕಟ್ಟಡಗಳಿಗೆ ಸೌರಶಕ್ತಿ, ಮಳೆ ನೀರು ಕೋಯ್ಲು ಕಡ್ಡಾಯ. ಹೀಗಿರುವಾಗ ಸರಕಾರದ ಯೋಜನೆಗಳಲ್ಲಿ ಈ ನಿಮಯ ಉಲ್ಲಂಘನೆ ಎಷ್ಟು ಸರಿ. ಜನ ಸಾಮಾನ್ಯರಿಗೆ ಒಂದು ನ್ಯಾಯ, ಸರಕಾರದ ಯೋಜನೆಗೆ ಮತ್ತೂಂದು ನ್ಯಾಯ ಸರಿಯಲ್ಲ. ಇವುಗಳ ಬಗ್ಗೆ ಸಂಬಂಧಿಸಿದ ಇಲಾಖೆ ಹಾಗೂ ಅಧಿಕಾರಿಗಳು ಸೂಕ್ತ ಗಮನಿ ಹರಿಸಿ ಮಾದರಿ ಯೋಜನೆಯಾಗಿಸಬೇಕು.
ಸುರೇಶ ಕಿರೆಸೂರು, ಮಾಜಿ ಅಧ್ಯಕ್ಷ, ಎಂಜಿನಿಯರ್ ಅಸೋಸಿಯೇಶನ್ ಹೇಮರಡ್ಡಿ ಸೈದಾಪುರ