ಲಾರ್ಡ್ಸ್: ಏಕದಿನ ಕ್ರಿಕೆಟ್ ನ ಅತೀ ರೋಮಾಂಚನಕಾರಿ ಪಂದ್ಯಕ್ಕೆ ವಿಶ್ವಕಪ್ ಫೈನಲ್ ಪಂದ್ಯ ಸಾಕ್ಷಿಯಾಗಿದೆ. ಸೂಪರ್ ಓವರ್ ನಲ್ಲಿ ಫಲಿತಾಂಶ ಕಂಡ ಪಂದ್ಯದಲ್ಲಿ ಇಂಗ್ಲೆಂಡ್ ಮೊದಲ ಬಾರಿಗೆ ವಿಶ್ವಕಪ್ ಎತ್ತಿ ಹಿಡಿಯಿತು. ಸೂಪರ್ ಓವರ್ ಕೂಡಾ ಟೈ ಆದರೂ ನ್ಯೂಜಿಲ್ಯಾಂಡ್ ಸೋಲಬೇಕಾಯಿತು. ಈ ಟೈ-ವಿನ್ ಲೆಕ್ಕಾಚಾರ ಹಲವರಿಗೆ ಗೊಂದಲವುಂಟಾಗಿದೆ.
ಎರಡೂ ತಂಡಗಳು ಗಳಿಸಿದ್ದು 241 ರನ್. ಸೂಪರ್ ಓವರ್ ನಲ್ಲಿ ಗಳಸಿದ್ದು 15 ರನ್. ಆದರೂ ಜಯ ಗಳಿಸಿದ್ದು ಇಂಗ್ಲೆಂಡ್. ಅದು ಹೇಗೆ ? ಮುಂದೆ ಓದಿ.
ನಿಗದಿತ ಓವರ್ ಗಳಲ್ಲಿ ಎರಡೂ ತಂಡಗಳ ರನ್ ಸರಿಯಾಗಿ ಪಂದ್ಯ ಟೈ ಆದಾಗ, ಒಂದು ಓವರ್ ನ ಸೂಪರ್ ಓವರ್ ನಡೆಯಿತು. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ತಂಡ ಇಲ್ಲಿ ಮೊದಲು ಫೀಲ್ಡಿಂಗ್ ನಡೆಸಬೇಕು. ಒಂದು ಓವರ್ ನ ಅವಕಾಶ. ಮೂವರು ಆಟಗಾರರಿಗೆ ಮಾತ್ರ ಬ್ಯಾಟಿಂಗ್ ಅವಕಾಶ. ಹೀಗೆ ನಡೆಯುತ್ತದೆ ಸೂಪರ್ ಓವರ್.
ಒಂದು ವೇಳೆ ಸೂಪರ್ ಓವರ್ ಕೂಡಾ ಟೈ ಆದರೆ ? ನಿನ್ನೆಯ ಪಂದ್ಯದಲ್ಲಿ ನಡೆದಿದ್ದು ಕೂಡಾ ಇದೇ. ಸೂಪರ್ ಓವರ್ ಟೈ ಆದಾಗ, ಹೆಚ್ಚು ಬೌಂಡರಿ ಬಾರಿಸಿದ ತಂಡ ವಿಜಯಿಯಾಗುತ್ತದೆ. ಮೊದಲು 50 ಓವರ್ ಗಳಲ್ಲಿ ಬಾರಿಸಿದ ಫೋರ್, ಸಿಕ್ಸ್, ಮತ್ತು ಸೂಪರ್ ಓವರ್ ನಲ್ಲಿ ಬಾರಿಸಿದ ಫೋರ್, ಸಿಕ್ಸ್ ಕೂಡಾ ಇಲ್ಲಿ ಗಣನೆಗೆ ಪರಿಗಣಿಸಲಾಗುತ್ತದೆ. ಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ 17 ಬೌಂಡರಿ ಬಾರಿಸಿದ್ದರೆ, ಇಂಗ್ಲೆಂಡ್ 26 ಬೌಂಡರಿ ಬಾರಿಸಿ ಕಪ್ ತಮ್ಮದಾಗಿಸಿಕೊಂಡಿತು.
ಫೈನಲ್ ಪಂದ್ಯ ಟೈಯಲ್ಲಿ ಅಂತ್ಯಗೊಂಡ ನಂತರ ಸೂಪರ್ ಓವರ್ ಪ್ರಾರಂಭಕ್ಕೂ ಮೊದಲು ಐಸಿಸಿ ತನ್ನ ಅಧಿಕೃತ ಟ್ವಿಟ್ಟರ್ ಅಕೌಂಟ್ ನಲ್ಲಿ ಪ್ರಕಟಿಸಿದ ನಿಯಮ ಹೀಗಿದೆ.