Advertisement

Sandalwood: ರಿಷಬ್‌ ಶೆಟ್ಟಿ ʼಕಾಂತಾರ-1ʼ ʼಸಪ್ತ ಸಾಗರದಾಚೆʼಯ ಬೆಡಗಿ ರುಕ್ಮಿಣಿ ನಾಯಕಿ?

03:07 PM Mar 19, 2024 | Team Udayavani |

ಬೆಂಗಳೂರು:  ರಿಷಬ್‌ ಶೆಟ್ಟಿ ಅವರ ʼಕಾಂತಾರ -1ʼ ಸಿನಿಮಾ ಸಟ್ಟೇರುವ ಮುನ್ನ ಒಂದಲ್ಲ ಒಂದು ವಿಚಾರದಲ್ಲಿ ಸದ್ದು ಮಾಡುತ್ತಿದೆ. ಕಳೆದ ವರ್ಷದ ನವೆಂಬರ್‌ ನಲ್ಲಿ ಟೀಸರ್‌ ವೊಂದನ್ನು ರಿಲೀಸ್‌ ಮಾಡಿದ ಚಿತ್ರತಂಡ ಆ ಬಳಿಕ ಯಾವ ಅಪ್ಡೇಟ್‌ ನ್ನು ನೀಡಿಲ್ಲ.

Advertisement

ಸದ್ಯಕ್ಕೆ ನಾನೇ ಹೀರೋ, ನಾಯಕಿ ಹಾಗೂ ಇತರ ಪಾತ್ರದ ಹುಡುಕಾಟ ಇನ್ನಷ್ಟೇ ನಡೆಯಬೇಕಿದೆ. ಕನ್ನಡದ ಕಲಾವಿದರಿಗೆ ಮೊದಲ ಆದ್ಯತೆ ಇರಲಿದೆ. ಸಿನಿಮಾದಲ್ಲಿ ನಟಿಸಲು ಹೊಸ ಕಲಾವಿದರ ಹುಡುಕಾಟ  ನಡೆಯುತ್ತಿದೆ ಎಂದರು. ಕರಾವಳಿ ಹಾಗೂ ಇತರೆ ಭಾಗದ ಕಲಾವಿದರು ಕೂಡ ಇರಲಿದ್ದಾರೆ ಎಂದು ರಿಷಬ್‌ ಈ ಹಿಂದೆ ಹೇಳಿದ್ದರು.

ಸಿನಿಮಾದ ನಾಯಕಿ ಯಾರೆನ್ನುವ ಬಗ್ಗೆ ಕುತೂಹಲ ಹೆಚ್ಚಾಗಿದೆ. ದಕ್ಷಿಣದ ಖ್ಯಾತ ನಟಿಯರ ಹೆಸರು ಸಿನಿಮಾದ ನಾಯಕಿಯರ ಪಟ್ಟಿಯಲ್ಲಿ ಕೇಳಿ ಬಂದಿದೆ. ಇದೀಗ ಮತ್ತೊಬ್ಬರ ಹೆಸರು ಕೇಳಿ ಬಂದಿದೆ.

ಈಗಾಗಲೇ ʼಸಪ್ತ ಸಾಗರದಾಚೆ ಎಲ್ಲೋʼ ಮೂಲಕ ಗಮನ ಸೆಳೆದಿರುವ ರುಕ್ಮಿಣಿ ವಸಂತ್‌ ʼಕಾಂತಾರ-1ʼ ಸಿನಿಮಾಕ್ಕೆ ನಾಯಕಿ ಆಗಿ ಆಯ್ಕೆ ಆಗಲಿದ್ದಾರೆ ಎನ್ನುವ ಮಾತುಗಳು ಹರಿದಾಡಿದೆ.

ಮೂಲಗಳ ಪ್ರಕಾರ ಹೊಂಬಾಳೆ ಫಿಲ್ಮ್ಸ್‌ ಸಾಯಿ ಪಲ್ಲವಿ, ಆಲಿಯಾ ಭಟ್, ಸಪ್ತಮಿಗೌಡ, ರುಕ್ಮಿಣಿ ವಸಂತ್ ಇವರಲ್ಲಿ ಒಬ್ಬರನ್ನು ಆಯ್ಕೆ ಮಾಡಲಿದೆ ಎಂದು ತಿಳಿದು ಬಂದಿದೆ. ಈ ಪೈಕಿ ರುಕ್ಮಿಣಿ ಅವರ ಹೆಸರು ಮುಂಚೂಣಿಯಲ್ಲಿದೆ ಎನ್ನಲಾಗುತ್ತಿದೆ.

Advertisement

ಆದರೆ ಚಿತ್ರತಂಡ ಈ ಬಗ್ಗೆ ಇನ್ನಷ್ಟೇ ಮಾಹಿತಿಯನ್ನು ನೀಡಬೇಕಿದೆ. ತನ್ನ ನಟನೆ ಮೂಲಕ ಮೋಡಿ ಮಾಡಿರುವ ರುಕ್ಮಿಣಿ ವಸಂತ್‌ ಇತ್ತೀಚೆಗೆ ಕಾಲಿವುಡ್‌ ನಟ ಶಿವಕಾರ್ತಿಕೇಯನ್ ಸಿನಿಮಾಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಇದಲ್ಲದೇ ಶ್ರೀಮುರಳಿ ಅವರ ʼಬಘೀರʼ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next