ದೇವದುರ್ಗ: ತಾಲೂಕಿನ ಅಮರಾಪುರು ಕ್ರಾಸ್ ಹತ್ತಿರದಲ್ಲಿರುವ ಮರಳು ದಾಸ್ತಾನು ಘಟಕ ನಿರ್ವಹಣೆ ಕೊರತೆ ಹಿನ್ನೆಲೆ ಪಾಳುಬಿದ್ದಿದೆ. ಆದರೆ, ದಾಸ್ತಾನ ಘಟಕದಿಂದಲೇ ಮರಳು ಸಾಗಣೆ ಮಾಡಬೇಕು ಎಂಬ ನಿಯಮ ಪಾಲನೆ ಆಗದ ಹಿನ್ನೆಲೆಯಲ್ಲಿಕೃಷ್ಣಾ ನದಿಯಿಂದಲೇ ಅಕ್ರಮ ಮರಳು ಸಾಗಣೆ ದಂಧೆ ಎಗ್ಗಿಲ್ಲದೇ ಸಾಗಿದೆ.
ಆರ್‌ಟಿಐ ಕಾರ್ಯಕರ್ತಯೊಬ್ಬರು ಅಕ್ರಮ ಮರಳು ಸಾಗಣೆ ಕುರಿತು ಕೋರ್ಟ್‌ನಲ್ಲಿಪ್ರಕರಣ ದಾವೆ ಹೊಡಿದ ಹಿನ್ನೆಲೆ ಅಧಿಕೃತ ರಾಯಲ್ಟಿ ಪಡೆದು ಮರಳು ಸಾಗಣಿಕೆಗೆ ನಿರ್ಬಂಧ ಹೇರಲಾಗಿದೆ. ಹೀಗಾಗಿ ಕೃಷ್ಣಾನದಿ ತೀರದ ವ್ಯಾಪ್ತಿಯಿಂದ ಟ್ರ್ಯಕ್ಟರ್ ಮೂಲಕ ಅಕ್ರಮ ಮರಳು ಸಾಗಣೆ ಅವ್ಯಾಹತವಾಗಿದೆ.
ನಿಯಮ ಉಲ್ಲಂಘನೆ: ತಾಲೂಕಿನ ಹೇರುಂಡಿ, ನಿಲವಂಜಿ, ಲಿಂಗದಹಳ್ಳಿ ಗ್ರಾಮದ ಕೃಷ್ಣಾ ನದಿಯಿಂದ ಮರಳು ಸಾಗಣಿಕೆ ಮಾಡದೇ ಅಮರಾಪುರು ಕ್ರಾಸ್ ಹತ್ತಿರದ ಮರಳು ದಾಸ್ತಾನು ಘಟಕದಿಂದ ಪರವಾನಗಿ ಪಡೆದು ಮರಳು ಸಾಗಣೆ ಮಾಡಬೇಕು ಎಂದು ಜಿಲ್ಲಾಡಳಿತ ನಿಯಮ ಜಾರಿಗೆ ತರಲಾಗಿದೆ. ಹಿಂದಿನ ಜಿಲ್ಲಾಧಿಕಾರಿ ದಾಸ್ತಾನ ಘಟಕದಿಂದಲೇ ಮರಳು ಸಾಗಣೆ ಮಾಡಬೇಕು ಎಂದು ಎಚ್ಚರಿಕೆ ನೀಡಿದರು. ಬದಲಾದ ಅಧಿಕಾರಿಗಳ ನಡೆಯಿಂದಾಗಿ ಮರಳು ದಾಸ್ತಾನು ಘಟಕ ಕೇಳುವವರು ಇಲ್ಲದೇ ಕಾರಣ ಪಾಳು ಬಿದ್ದಿದೆ.
ಇದನ್ನೂ ಓದಿ:ತನ್ನ ಸಹೋದರನ ಸಾವಿಗೆ ಪತಿ ಮಾಡಿದ ಮಾಟವೇ ಕಾರಣ ಎಂದು ಗಂಡನನ್ನೇ ಬೆಂಕಿ ಹಚ್ಚಿ ಕೊಂದ ಪತ್ನಿ
ಎಗ್ಗಿಲ್ಲದೇ ಮರಳು: ಅಕ್ರಮ ಮರಳು ಸಾಗಣೆ ಕುರಿತು ಆರ್‌ಟಿಐ ಕಾರ್ಯಕರ್ತಯೊಬ್ಬರು ಕೋರ್ಟ್‌ನಲ್ಲಿ ಪ್ರಕರಣ ದಾವೆ ಹೊಡಿದ ಹಿನ್ನೆಲೆ ಅ ಧಿಕೃತ ಮರಳು ಸಾಗಣಿಕೆ ಮಾಡಲು ರಾಯಲ್ಟಿ ಪರವಾನಿ ಬಂದ್ ಆಗಿದೆ. ಹೀಗಾಗಿ ಕೋಟ್ಯಂತರ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿ, ಮನೆಗಳ ನಿರ್ಮಾಣಕ್ಕೆ ಮರಳು ಬೇಡಿಕೆ ಹೆಚ್ಚಿದೆ. ನದಿತೀರದ ಗ್ರಾಮದಲ್ಲಿ ಎಲ್ಲೆಂದರಲ್ಲಿ ಜಮೀನಿನಲ್ಲಿ ಸಂಗ್ರಹಿಸಿದ ಅಕ್ರಮ ಮರಳು ಹಗಲು ರಾತ್ರಿ ಎನ್ನದೇ ಎಗ್ಗಿಲ್ಲದೇ ಸಾಗಣಿಕೆ ನಡೆದಿದೆ.