Advertisement
ನಗರ ಎ. 26: ಉಪನೋಂದಣಿ ಕಚೇರಿ ಹಳೇ ಕಟ್ಟಡವೀಗ ಪಾಳುಬಿದ್ದಿದೆ. ಸರಕಾರಿ ಸೇವೆಗಳನ್ನು ನೀಡುವ ಇಲಾಖೆ ಗಳನ್ನು ಒಂದೇ ಸೂರಿನಡಿ ತರುವ ಉದ್ದೇಶ ದಿಂದ ಪುತ್ತೂರು ಉಪನೋಂದಣಿ ಕಚೇರಿ ಯನ್ನು ಮಿನಿ ವಿಧಾನಸೌಧಕ್ಕೆ ಸ್ಥಳಾಂತರಿಸಿದ ಅನಂತರ ಹಳೆ ಉಪನೋಂದಣಿ ಕಚೇರಿ ಕಟ್ಟಡ ಭಿಕ್ಷುಕರ, ಕುಡುಕರ ಅಡ್ಡೆಯಾಗಿ ಪರಿಣಮಿಸಿದೆ.
Related Articles
Advertisement
ಕಟ್ಟಡ ನಿರ್ಮಾಣ ಕಷ್ಟ:
ಎ.ಬಿ. ಇಬ್ರಾಹಿಂ ಅವರು ಜಿಲ್ಲಾಧಿಕಾರಿಯಾಗಿದ್ದ ಸಂದರ್ಭ ಉಪನೋಂದಣಿ ಕಚೇರಿಯನ್ನು ಮಿನಿ ವಿಧಾನಸೌಧಕ್ಕೆ ಸ್ಥಳಾಂತರಿಸುವ ಪ್ರಕ್ರಿಯೆಗೆ ವೇಗ ಸಿಕ್ಕಿತು. ಇದರ ಮೊದಲ ಹಂತವಾಗಿ ಉಪನೋಂದಣಿ ಕಚೇರಿ ಜಾಗ ಪಹಣಿ ತಿದ್ದುಪಡಿ ಮಾಡಲಾಯಿತು. ಆರ್‌ಟಿಸಿ ಕಲಂ 9ರಲ್ಲಿದ್ದ ಉಪನೋಂದಣಿ ಕಚೇರಿ ಹೆಸರನ್ನು ತೆಗೆದು ಹಾಕಿ ಸರಕಾರ ಎಂದು ನಮೂದಿಸಲಾಯಿತು. ಕಲಂ 11ರಲ್ಲಿ ಸರಕಾರ ಎಂದೇ ಇತ್ತು. ಆದ್ದರಿಂದ ಉಪನೋಂದಣಿ ಕಚೇರಿಗೆ ಜಾಗವನ್ನು ಹಸ್ತಾಂತರ ಮಾಡಿಲ್ಲ ಎಂದು ಪರಿಗಣಿಸಿ, ಸರಕಾರಕ್ಕೆ ಮತ್ತೆ ಪಡೆದುಕೊಳ್ಳಲಾಯಿತು. ಬಳಿಕ ಪುತ್ತೂರು ಸರಕಾರಿ ಆಸ್ಪತ್ರೆಯಿಂದ ಅರ್ಜಿ ಆಹ್ವಾನಿಸಿ ಈ ಜಾಗವನ್ನು ಆಸ್ಪತ್ರೆ ಹೆಸರಿಗೆ ವರ್ಗಾಯಿಸಲಾಯಿತು.
ಪಾಳುಬಿದ್ದ ಕಟ್ಟಡ:
ಪ್ರಸ್ತುತ ಉಪನೋಂದಣಿ ಕಚೇರಿ ಇರುವ ಜಾಗ ಆಸ್ಪತ್ರೆಯ ಹೆಸರಿನಲ್ಲಿದೆ. ಹಾಗಿರುವಾಗ, ಉಪನೋಂದಣಿ ಕಚೇರಿ ಕಟ್ಟಡವನ್ನು ವಿಸ್ತರಿಸುವುದು ಹೇಗೆ? ಇದಕ್ಕೆ ಇಲಾಖೆಯಿಂದ ಅನುಮತಿ ಸಿಗುತ್ತದೆಯೇ? ಒಂದು ವೇಳೆ ಕಟ್ಟಡ ನಿರ್ಮಿಸಿದರೂ, ಮುಂದೊಂದು ದಿನ ಕಚೇರಿ ಶಿಫ್ಟ್ ಆದಾಗ ಕಟ್ಟಡ ಪಾಳು ಬೀಳುವುದಿಲ್ಲವೇ? ಎನ್ನುವ ಪ್ರಶ್ನೆಗಳು ಮೂಡಿವೆ.
ಈ ಕಟ್ಟಡಕ್ಕೆ ಅಂದಾಜು 15.40 ಲಕ್ಷ ರೂ. ಅನುದಾನದ ಅಗತ್ಯವಿದೆ ಎಂದು ತಿಳಿಸಲಾಗಿದೆ. ಆದರೆ ಹಳೇ ಉಪನೋಂದಣಿ ಕಚೇರಿಯಿರುವ ಜಾಗ ಪುತ್ತೂರು ಸರಕಾರಿ ಆಸ್ಪತ್ರೆಗೆ ಸೇರಿದ್ದು ಎನ್ನುವ ತಕರಾರು ಬಂದ ಕಾರಣ ತತ್‌ಕ್ಷಣದಲ್ಲಿ ಯೋಜನೆ ಕೈಬಿಟ್ಟು ಮಿನಿ ವಿಧಾನಸೌಧಕ್ಕೆ ಸ್ಥಳಾಂತರಿಸಲಾಯಿತು.
ಆಸ್ಪತ್ರೆಯ ಸುಪರ್ದಿಯಲ್ಲಿದೆ:
ಉಪನೋಂದಣಿ ಕಚೇರಿ ಹಳೆಯ ಕಟ್ಟಡ ಪುತ್ತೂರು ಸರಕಾರಿ ಆಸ್ಪತ್ರೆ ಸುಪರ್ದಿಯಲ್ಲಿದೆ. ಅದರ ನಿರ್ವಹಣೆಯನ್ನು ಅವರೇ ನೋಡಿಕೊಳ್ಳಬೇಕು. -ಎಚ್.ಕೆ.ಕೃಷ್ಣಮೂರ್ತಿ ಪುತ್ತೂರು ಉಪವಿಭಾಗಾಧಿಕಾರಿ
.ಪ್ರವೀಣ್ ಚೆನ್ನಾವರ