ಹಾವೇರಿ: ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಮಾಳಾಪುರ ಹಾಗೂ ಭೂವೀರಾಪುರ ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ರುದ್ರಪ್ಪ ಲಮಾಣಿ ಬುಧವಾರ ಮತಯಾಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಶಾಸಕನಾಗಿ ಐದು ವರ್ಷ ಪ್ರಾಮಾಣಿಕ ಸೇವೆ ಮಾಡಿದ್ದೇನೆ. ಗ್ರಾಮದ ಸಿಸಿ ರಸ್ತೆ, ದೇವಾಲಯಗಳಿಗೆ ಅನುದಾನ ಒದಗಿಸಿದ್ದೇನೆ. ಈ ಹಿನ್ನೆಲೆಯಲ್ಲಿ ಮೇ 12ರಂದು ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಹಸ್ತದ ಗುರುತಿಗೆ ಮತ ನೀಡಬೇಕು. ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಮತ ನೀಡಿ ಬೆಂಬಲಿಸಬೇಕೆಂದು ಲಮಾಣಿ ಮನವಿ ಮಾಡಿದರು.
ಜಿಪಂ ಅಧ್ಯಕ್ಷ ಕೊಟ್ರೇಶ ಬಸೇಗಣ್ಣಿ, ಕಾಂಗ್ರೆಸ್ ಮುಖಂಡ ಸಂಜೀವಕುಮಾರ ನೀರಲಗಿ, ಎಂ.ಎಂ. ಹಿರೇಮಠ, ಮಾಳಾಪುರ ಗ್ರಾಮದ ಅಶೋಕಪ್ಪ ಸುಣಗಾರ, ದಾನಪ್ಪ ಚೂರಿ, ಹನುಮಂತಪ್ಪ, ನಿಂಗಪ್ಪ ಚಳ್ಳಮರದ, ದೊಡ್ಡಗುಡ್ಡಪ್ಪ ಗುಳ್ಳೆಮ್ಮನವರ, ಚನ್ನವೀರಪ್ಪ ಭಜ್ಜಿ ಹಾಗೂ ಭೂ. ವೀರಾಪುರ ಗ್ರಾಮದ ನಿಂಬವ್ವ ಜಂಪಣ್ಣವರ, ರಾಮಣ್ಣ ಗಾಣಿಗೇರ, ಸುರೇಶ ಓಲೇಕಾರ, ಮಲ್ಲಯ್ಯ ಹಿರೇಮಠ, ಶಾಂತವ್ವ ಬಾರ್ಕಿ, ಗುಡ್ಡಪ್ಪ ಬಿಜಾಪುರ ಇದ್ದರು.
ಕೋಣನತಂಬಗಿ ಭಾಗದಲ್ಲಿ: ವಿಧಾನಸಭೆ ಚುನಾವಣೆಯಲ್ಲಿ ಮರು ಆಯ್ಕೆ ಬಯಸಿ ಸ್ಪರ್ಧಿಸಿರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರುದ್ರಪ್ಪ ಲಮಾಣಿ ಮಂಗಳವಾರ ಕೋಣನತಂಬಿಗಿ, ಶಿರಮಾಪುರ, ಚನ್ನೂರ, ಅಗಸನಮಟ್ಟಿ ಹಾಗೂ ರಾಮಾಪುರ ಗ್ರಾಮಗಳಲ್ಲಿ ಬಿರುಸಿನ ಮತಪ್ರಚಾರ ನಡೆಸಿದರು.
ಕೋಣನತಂಬಿಗಿ ಗ್ರಾಮದಲ್ಲಿ ಮಾತನಾಡಿದ ರುದ್ರಪ್ಪ ಲಮಾಣಿ, ಬಿಜೆಪಿ ಮುಖಂಡರು ಹಾಗೂ ಆ ಪಕ್ಷದ ಅಭ್ಯರ್ಥಿ ನೆಹರೂ ಓಲೇಕಾರ ಮತ ಪಡೆಯಲು ಜನರಿಗೆ ಸುಳ್ಳು ಆಶ್ವಾಸನೆ ನೀಡುತ್ತಿದ್ದಾರೆ. ಆದರೆ ಪ್ರಜ್ಞಾವಂತ ಮತದಾರರು ಸುಳ್ಳು ಯಾವುದು? ಸತ್ಯ ಯಾವುದು? ಎಂಬುದನ್ನು ಅರಿತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ನೀಡಿದ ಭರವಸೆಗಳನ್ನು ಈಡೇರಿಸಿದೆ. ಈ ಮೂಲಕ ನುಡಿದಂತೆ ನಡೆದ ಸರ್ಕಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.
ಮುಖಂಡರಾದ ಸಂಜೀವಕುಮಾರ ನೀರಲಗಿ, ಎಸ್.ಎಫ್.ಎನ್ ಗಾಜಿಗೌಡ್ರ, ಎಂ.ಎಂ. ಹಿರೇಮಠ, ಜಿಪಂ ಸದಸ್ಯ ನಾಗಪ್ಪ ಚವ್ಹಾಣ, ತಾಪಂ ಅಧ್ಯಕ್ಷ ಯಲ್ಲಪ್ಪ ಮಣ್ಣೂರ, ಸದಸ್ಯರಾದ ಸಾವಿತ್ರೆವ್ವ ರಿತ್ತಿಕುರುಬರ, ವೀರಣ್ಣ ಕುಲಕರ್ಣಿ, ಗ್ರಾಮದ ನಾಗನಗೌಡ ಪಾಟೀಲ, ಪರಸಪ್ಪ ಹುಳಿಕೆಲ್ಲಪ್ಪನವರ, ಹೊನ್ನಪ್ಪ ಕಳ್ಳಿಮನಿ, ಕುರುವತ್ತೆಪ್ಪ ಗಾಣಿಗೇರ, ಸರೋಜವ್ವ ಅಂಬಿಗೇರ, ಪರಮೇಶಪ್ಪ ಬಣಕಾರ, ದೇವೇಂದ್ರಪ್ಪ ಕಳ್ಳಿಮನಿ, ಟೋಪಣ್ಣ ಗೋವಿಂದಪ್ಪನವರ, ಪರಸಪ್ಪ ಮೈಲಾರಪ್ಪನವರ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.