Advertisement
ಕೇವಲ ರಾಜಕೀಯ ದೃಷ್ಟಿ ಕೋನವನ್ನಿಟ್ಟುಕೊಂಡು ಇಡೀ ಬಂಜಾರ ಸಮುದಾಯವನ್ನು ಗುರಿಯಾಗಿಸಿ ಕೊಂಡು ಅವರ ಗೌರವಕ್ಕೆ ಚ್ಯುತಿ ತರುವ ಹಾಗೂ ಚಾರಿತ್ರ್ಯ ವಧೆ ಮಾಡುವ ದುರುದ್ದೇಶದಿಂದ ಆಧಾರರಹಿತ ಆರೋಪ ಮಾಡಿದ್ದಾರೆ. ಇದು ಶಾಸಕರಿಗೆ ಶೋಭೆ ತರುವಂತಹುದಲ್ಲ. ಮುಖ್ಯಮಂತ್ರಿಗಳು ಸಾಂವಿಧಾನಿಕವಾಗಿ ಹಾಗೂ ಕಾನೂನಾತ್ಮಕವಾಗಿ ಶಾಸಕ ನೆಹರು ಓಲೇಕಾರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಬಂಜಾರ ಸಮುದಾಯವು ತಮ್ಮನ್ನು ಒತ್ತಾಯಿಸುತ್ತದೆ ಎಂದುಮನವಿಯಲ್ಲಿ ತಿಳಿಸಿದ್ದಾರೆ. ಜಿಲ್ಲಾ ಬಂಜಾರ ಸಮುದಾಯದ ಮುಖಂಡರಾದ ಪೀರಸ್ವಾಮಿ ಲಮಾಣಿ, ಸಿ.ಸಿ. ಲಮಾಣಿ,
ಸುರೇಶ ಲಮಾಣಿ, ಹನುಮಂತ ಲಮಾಣಿ ಇದ್ದರು.
ರಾಣೆಬೆನ್ನೂರು: ಶಾಸಕ ನೆಹರು ಓಲೇಕಾರ ಅವರು ಮಾಜಿ ಸಚಿವ ರುದ್ರಪ್ಪ ಲಮಾಣಿ ಕುರಿತು ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ಬಂಜಾರ ಸಮುದಾಯ ಮುಖಂಡ ಹಾಗೂ ರೈತ ಮುಖಂಡ ಕೃಷ್ಣಮೂರ್ತಿ ಲಮಾಣಿ ತಿಳಿಸಿದ್ದಾರೆ. ಈ ಕುರಿತು
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರುದ್ರಪ್ಪ ಲಮಾಣಿ ಅವರು ಸಭ್ಯ ರಾಜಕಾರಣಿಯಾಗಿದ್ದು, ಗ್ರಾಪಂ ಮಟ್ಟದಿಂದ ರಾಜಕೀಯಕ್ಕೆ ಧುಮುಕಿ ಶಾಸಕರಾಗಿ, ಸಚಿವರಾಗಿ, ಶಿಕ್ಷಣ ಸಂಸ್ಥೆ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಾ ಜನಪ್ರಿಯತೆ ಗಳಿಸಿದ್ದಾರೆ. ನೆಹರು ಓಲೇಕಾರ ಅವರು ಈ ರೀತಿ ಇಲ್ಲಸಲ್ಲದ ಆಪಾದನೆ ಮಾಡುತ್ತಿರುವುದು ಸರಿಯಲ್ಲ. ರಾಜಕೀಯದಲ್ಲಿ ಏಳು-ಬೀಳುಗಳು ಸಹಜ.
ಒಂದು ವೇಳೆ ರುದ್ರಪ್ಪ ಲಮಾಣಿ ಅವರ ಮಗ ತಪ್ಪು ಮಾಡಿದ್ದಲ್ಲಿ ಅವರ ಮೇಲೆ ಕಾನೂನು ಪ್ರಕಾರ ಶಿಕ್ಷೆ ಆಗುತ್ತದೆ. ಅದಕ್ಕಾಗಿ
ರುದ್ರಪ್ಪ ಲಮಾಣಿ ತೇಜೋವಧೆ ಮಾಡುವುದು ಸರಿಯಲ್ಲ. ಇದೇ ರೀತಿ ಮುಂದುವರೆದರೆ ಬಂಜಾರ ಸಮುದಾಯವು
ಜಿಲ್ಲೆಯಾದ್ಯಂತ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.