Advertisement

1ರಿಂದ ರುದ್ರಮುನಿ ಶಿವಯೋಗೀಶ್ವರ ಪುಣ್ಯ ಸ್ಮರಣೋತ್ಸವ

12:47 PM Dec 30, 2019 | Suhan S |

ಗುತ್ತಲ: ಲಿಂ| ರುದ್ರಮುನಿ ಶಿವಯೋಗೀಶ್ವರ 60ನೇ ಪುಣ್ಯ ಸ್ಮರಣೋತ್ಸವ ಹಾಗೂ ಗುರುಸಿದ್ಧ ಸ್ವಾಮೀಜಿಯವರ ಪಟ್ಟಾ ಧಿಕಾರದ ಸವಿನೆನಹು ನಿಮಿತ್ತ ಅಗಡಿ ಗ್ರಾಮದಲ್ಲಿ ಜ.1 ರಿಂದ 12ರ ವರೆಗೆ ವಿಶೇಷವಾದ ಕಾರ್ಯಕ್ರಮಗಳೂಂದಿಗೆ ಆಚರಿಸಲಾಗುವುದು ಎಂದು ಪ್ರಭುಸ್ವಾಮಿಮಠ ಅಗಡಿ ಹಾಗೂ ಕಲ್ಮಠ ಗುತ್ತಲದ ಪೀಠಾಧ್ಯಕ್ಷ ಗುರುಸಿದ್ಧ ಸ್ವಾಮೀಜಿ ಹೇಳಿದರು.

Advertisement

ಪಟ್ಟಣದ ಕಲ್ಮಠದಲ್ಲಿ ಕಾರ್ಯಕ್ರಮ ಮಾಹಿತಿಯುಳ್ಳ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಪ್ರತಿ ವರ್ಷದಂತೆ ಭಕ್ತರು ಬಯಸಿದ ಇಷ್ಟಾರ್ಥ ಈಡೇರಿಸಿ ಶ್ರೇಷ್ಠ ಜಂಗಮರಾಗಿ ಭಕ್ತರಲ್ಲಿನ ಕ್ಷುದ್ರ ನಡೆಗಳನ್ನು ತೊಡಗಿಸಿದ ಮಹಾನ್‌ ತಪಸ್ವಿ ರುದ್ರಮುನಿ ಶ್ರೀಗಳ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮವನ್ನು ಜ.1ರಂದು ಶರಣ ಚರಿತಾಮೃತ ಪುರಾಣ ಪ್ರಾರಂಭೋತ್ಸವವನ್ನು ಗೋಲಗೇರಿಯ ಸಿದ್ಧಲಿಂಗ ಸ್ವಾಮೀಜಿ ಉದ್ಘಾಟಿಸುವರು.

ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಗುಡ್ಡದ ಆನ್ವೇರಿಯ ಶಿವಯೋಗೀಶ್ವರ ಸ್ವಾಮೀಜಿ, ಹಡಗಲಿ ಗವಿಮಠದ ಹಿರೇಶಾಂತವೀರ ಸ್ವಾಮೀಜಿ, ಅಗಡಿ ಅಕ್ಕಿಮಠದ ಡಾ| ಗುರುಲಿಂಗ ಸ್ವಾಮೀಜಿ ಹಾಗೂ ಆನಂದವನ ಗುರುದತ್ತಮೂರ್ತಿ ಸ್ವಾಮೀಜಿ ಸಮ್ಮುಖ ವಹಿಸಲಿದ್ದಾರೆ.

ಪುರಾಣ ಪ್ರವಚನಕಾರರಾಗಿ ಅನುಭವ ಮಂಟಪ ಬಸವಕಲ್ಯಾಣದ ಸಂಗಮೇಶ್ವರ ದೇವರು ಹಾಗೂ ಸಂಗೀತ ಹದಲಿಯ ಬಸಯ್ಯ ಗವಾಯಿಗಳು ಹಾಗೂ ಚಂದ್ರಶೇಖರ ಹೂಮಠ  ನಡೆಸುವರು.

ಜ.9 ರಂದು ದೇಶಿ ಆಕಳುಗಳ ಪ್ರದರ್ಶನ, ಜ.10ರಂದು ಚೌಡೇಶ್ವರಿ ದೇವಿಗೆ ಹಾಗೂ ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಶ್ರೀ ಸಂಗನಬಸವ ಆಂಗ್ಲ ಮಾಧ್ಯಮ ಶಾಲೆಯ ನೂತನ ಕೊಠಡಿಗಳ ಉದ್ಘಾಟನೆ, ಪ್ರಾಥಃಕಾಲ ಷಟಸ್ಥಲ ಧ್ವಜಾರೋಹಣವನ್ನು ಚಿಕ್ಕೇರೂರಿನ ಚಂದ್ರಶೇಖರ ಸ್ವಾಮೀಜಿ ನೆರವೇರಿಸುವರು, ಕಂಪ್ಲಿಯ ಅಭಿನವ ಪ್ರಭು ಸ್ವಾಮೀಜಿಯವರಿಂದ ಉದ್ಘಾಟನೆ. ಸಂಜೆ ಜನಪದ ಸಂಗೀತ ಧರ್ಮಸಭೆ

Advertisement

ಸಾನ್ನಿಧ್ಯವನ್ನು ಶಿರಹಟ್ಟಿಯ ಜಗದ್ಗುರು ಫಕ್ಕೀರ ಸಿದ್ಧರಾಮ ಸ್ವಾಮೀಜಿ, ಹತ್ತಿಮತ್ತೂರ ನಿಜಗುಣ ಸ್ವಾಮೀಜಿ, ಲಿಂಗನಾಯಕನಹಳ್ಳಿ ಚೆನ್ನವೀರ ಸ್ವಾಮೀಜಿ, ನೆಗಳೂರ ಗುರುಶಾಂತ ಶಿವಾಚಾರ್ಯರು, ದಳವಾಯಿಮಠ ಹಾವನೂರ, ವಿರಕ್ತಮಠ ಶಿಗ್ಲಿ, ಜಪದಕಟ್ಟಿಮಠ ಶ್ರೀಗಳು ಸಮ್ಮುಖವಹಿಸುವರು. ಅತಿಥಿಗಳಾಗಿ ಶಾಸಕರಾದ ನೆಹರು ಓಲೇಕಾರ, ವಿರುಪಾಕ್ಷಪ್ಪ ಬಳ್ಳಾರಿ, ಪಿಎಸ್‌ಐ ಶಂಕರಗೌಡ ಪಾಟೀಲ ಹಾಗೂ ಜನಪದ ಕಲಾತಂಡ ಭಾಗವಹಿಸಲಿದೆ.

ಜ.11 ಸಂಜೆ ಆಶೀರ್ವಚನ ಮಹಾಮಂಗಲ ಹಾಗೂ ಅನುಭಾವಗೋಷ್ಠಿ, ಜ.12 ಲಿಂ. ರುದ್ರಮುನಿ ಸ್ವಾಮೀಜಿಯ ಪುಷ್ಪ ರಥೋತ್ಸವ ನಡೆಯಲಿದ್ದು, ವರ್ತಕರಾದ ಕೊಟ್ರಯ್ಯಸ್ವಾಮಿ ಕೋವಳ್ಳಿಮಠ, ಮೃತ್ಯುಂಜಯ ರಿತ್ತಿಮಠ, ಚಂದ್ರಶೇಖರ ಕೋವಳ್ಳಿಮಠ, ನಿಂಬಣ್ಣ ಅಂಗಡಿ, ಗಂಗಯ್ಯ ಬೂಸನೂರಮಠ, ರಾಜು ಹೂಗಾರ, ಆನಂದ ಇಟಗಿ, ಪ್ರಸಾದ ಹಂಚಾಟೆ, ದಾದಾಪೀರ, ಸಂದೀಪ ವಟ್ನಳ್ಳಿ, ಶೇಖಯ್ಯ, ನಾಗರಾಜ ಹಾವೇರಿ, ರಿಯಾಜ್‌ ರಾಣೆಬೆನ್ನೂರ, ಅರುಣ ಕೆಂಚಮಲ್ಲ, ಸಿದ್ದಪ್ಪ ಕಾಗಿನೆಲ್ಲಿ ಸೇರಿದಂತೆ ಅನೇಕರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next