ಚಾಮುಂಡಿಬೆಟ್ಟದ ನಂದಿ ಆವರಣದಲ್ಲಿ ಭಾನುವಾರ ನಡೆದ ಮಹಾರುದ್ರಾಭಿಷೇಕಕ್ಕೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಒಡೆಯರ್ ಚಾಲನೆ ನೀಡಿದರು. ಬೆಳಗ್ಗೆ 10.30ರಿಂದ ಆರಂಭವಾದ ಮಹಾರುದ್ರಾಭಿಷೇಕಕ್ಕೂ ಮುನ್ನ ನಂದಿ ಮೂರ್ತಿಯನ್ನು ನೀರಿನಿಂದ ಸ್ವತ್ಛಗೊಳಿಸಲಾಯಿತು. ಬಳಿಕ ಹೂ ಹಾಗೂ ಕುಂಕುಮಾರ್ಚನೆ ಸಲ್ಲಿಸಿ, ಅಘÂì, ಪಾದ್ಯ, ಆಚಮನ,ಮಧುಪರ್ಕ, ಹಾಲು, ಮೊಸರಿಂದ ನಂದಿಗೆ ಅಭಿಷೇಕ ಮಾಡಲಾಯಿತು. ಬಳಿಕ, ಅರಿಶಿನ, ಕುಂಕುಮ, ಹಾಲು, ತುಪ್ಪ,ಜೇನು, ನಾಣ್ಯ, ಸುಗಂಧ ತೈಲ, ವಿಭೂತಿ, ನೀರು, ಎಳೆನೀರು, ಹಾಲು, ಶ್ರೀಗಂಧ ಸೇರಿದಂತೆ 32 ವಿವಿಧ ಬಗೆಯ ದ್ರವ್ಯಗಳಿಂದ ಮಹಾರುದ್ರಾಭಿಷೇಕ ನೆರವೇರಿಸಲಾಯಿತು. ನಂತರ, ನಂದಿಗೆ ಪುಷ್ಪಾಲಂಕಾರ ಸಲ್ಲಿಸಿ, ಮಹಾಮಂಗಳಾರತಿ ಮಾಡಲಾಯಿತು.
Advertisement