ಭೋಪಾಲ್: ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ನಲ್ಲಿ ಕಲಾವಿದರ ಗುಂಪೊಂದು ನಿರುಪಯೋಗಿ ವಸ್ತುಗಳನ್ನು ಉಪಯೋಗಿಸಿ ಬರೋಬ್ಬರಿ ಐದು ಟನ್ ಗಳಷ್ಟು ತೂಕದ “ರುದ್ರ ವೀಣೆ”ಯನ್ನು ತಯಾರಿಸಿದೆ. ಈ ವೀಣೆ 28 ಅಡಿ ಉದ್ದವಿದ್ದು, 10 ಅಡಿ ಅಗಲ ಹಾಗೂ 12 ಅಡಿ ಎತ್ತರ ಹೊಂದಿರುವುದಾಗಿ ಎಎನ್ ಐ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ಇದನ್ನೂ ಓದಿ:ಬಂಟ್ವಾಳ: ಖಾಸಗಿ ಬಸ್ ಗಳ ಮುಖಾಮುಖಿ ಢಿಕ್ಕಿ; 8 ಮಂದಿಗೆ ಗಾಯ
ಈ ರುದ್ರ ವೀಣೆ ತಯಾರಿಸಲು ಕಲಾವಿದರ ಗುಂಪು 10 ಲಕ್ಷ ರೂಪಾಯಿಯನ್ನು ವ್ಯಯಿಸಿದ್ದು, ಆರು ತಿಂಗಳಲ್ಲಿ ವೀಣೆಯ ಕೆಲಸವನ್ನು ಪೂರ್ಣಗೊಳಿಸಿರುವುದಾಗಿ ವರದಿ ವಿವರಿಸಿದೆ.
ವಾಹನಗಳ ನಿರುಪಯುಕ್ತ ವಸ್ತುಗಳಾದ ವಯರ್, ಚೈನು, ಗಿಯರ್ ಮತ್ತು ಬಾಲ್ ಬೇರಿಂಗ್ ಗಳನ್ನು ಉಪಯೋಗಿಸಿ ರುದ್ರ ವೀಣೆಯನ್ನು ತಯಾರಿಸಲಾಗಿದೆ. ಸುಮಾರು 15 ಮಂದಿ ಕಲಾವಿದರು ನಿರುಪಯುಕ್ತ ವಸ್ತುಗಳನ್ನು ಉಪಯೋಗಿಸಿ ಈ ಬೃಹತ್ ವೀಣೆಯನ್ನು ನಿರ್ಮಿಸಿದೆ.
ಗುಜರಿ ವಸ್ತು ಉಪಯೋಗಿಸಿಕೊಂಡು 15 ಜನರ ತಂಡ ರುದ್ರ ವೀಣೆಯ ವಿನ್ಯಾಸವನ್ನು ತಯಾರಿಸಿತ್ತು ಎಂದು ಕಲಾವಿದರಲ್ಲಿ ಒಬ್ಬರಾದ ಪವನ್ ದೇಶಪಾಂಡೆ ಎಎನ್ ಐಗೆ ತಿಳಿಸಿದ್ದಾರೆ. ದೇಶದ ಮುಂದಿನ ಪೀಳಿಗೆ ಭಾರತದ ಸಂಸ್ಕೃತಿ ಮತ್ತು ಪರಂಪರೆಯನ್ನು ತಿಳಿದುಕೊಳ್ಳಬೇಕಾಗಿದೆ ಎಂಬುದೇ ನಮ್ಮ ಬಯಕೆಯಾಗಿದೆ.
ರುದ್ರ ವೀಣೆ ತನ್ನದೇ ಆದ ವೈಶಿಷ್ಟ್ಯ ಹೊಂದಿದೆ. ನಾವು ಈ ವೀಣೆಯನ್ನು ಜನರಿಗೆ ಸೆಲ್ಫಿ ತೆಗೆದುಕೊಳ್ಳಲು ಅನುಕೂಲವಾಗುವಂತೆ ನಗರದಲ್ಲಿ ಸ್ಥಾಪಿಸುತ್ತೇವೆ. ನಾವು ಈ ಸ್ಥಳ ಇನ್ನಷ್ಟು ಸುಂದರವಾಗಿ ಕಾಣಲು ಬೆಳಕಿನ ವ್ಯವಸ್ಥೆಯನ್ನು ಮಾಡುವುದಾಗಿ ದೇಶಪಾಂಡೆ ಎಎನ್ ಐಗೆ ತಿಳಿಸಿದ್ದಾರೆ.