Advertisement

ಸಂಸತ್ ಮುಂಗಾರು ಅಧಿವೇಶನ: ಕೋಲಾಹಲ-ಲೋಕಸಭೆ ಕಲಾಪ ಮಧ್ಯಾಹ್ನ 2ಗಂಟೆಗೆ ಮುಂದೂಡಿಕೆ

12:40 PM Jul 19, 2021 | Team Udayavani |

ನವದೆಹಲಿ:ಲೋಕಸಭೆಯಲ್ಲಿ ಮುಂಗಾರು ಅಧಿವೇಶನ ಸೋಮವಾರ(ಜುಲೈ19)ದಿಂದ ಆರಂಭಗೊಂಡಿದ್ದು, ಕಲಾಪದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಾತನಾಡಿದ ಸಂದರ್ಭದಲ್ಲಿ ವಿಪಕ್ಷಗಳು ತೀವ್ರ ಕೋಲಾಹಲ ಎಬ್ಬಿಸಿದ ಪರಿಣಾಮ ಲೋಕಸಭೆ ಕಲಾಪವನ್ನು ಮಧ್ಯಾಹ್ನ 2ಗಂಟೆವರೆಗೆ ಮುಂದೂಡಲಾಗಿದೆ.

Advertisement

ಇದನ್ನೂ ಓದಿ:ಮುಂಗಾರು ಅಧಿವೇಶನ :  ಕೋವಿಡ್ ಬಗ್ಗೆ ಹೆಚ್ಚಿನ ಚರ್ಚೆಗೆ ಆದ್ಯತೆ : ಪ್ರಧಾನಿ ಮೋದಿ

ನೂತನ ಸದಸ್ಯರಾಗಿ ಆಯ್ಕೆಯಾದ ಹೊಸ ಸಂಸದರು ಪ್ರಮಾಣವಚನ ಸ್ವೀಕರಿಸಿದರು. ಸದನ ಆರಂಭವಾದಾಗ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಯಿತು. ಕಲಾಪದಲ್ಲಿ ನೂತನ ಸಚಿವರ ಆಯ್ಕೆ ಕುರಿತು ಪ್ರಧಾನಿ ಮೋದಿ ಅವರು ಮಾತನಾಡಿದ ವೇಳೆ, ವಿರೋಧ ಪಕ್ಷಗಳು ಗದ್ದಲವೆಬ್ಬಿಸಿದವು.

ದೇಶದ ಮಹಿಳೆಯರು, ಹಿಂದುಳಿದ ವರ್ಗದ ಹಾಗೂ ರೈತರ ಮಕ್ಕಳು ಸಚಿವರಾಗಿರುವುದು ಒಂದು ವೇಳೆ ಕೆಲವು ಜನರಿಗೆ ಅಸಮಾಧಾನವಾಗಿರಬಹುದು. ಆ ಕಾರಣದಿಂದಾಗಿಯೇ ಅವರ ಪರಿಚಯವನ್ನು ಮಾಡಲು ಕೂಡಾ ವಿಪಕ್ಷಗಳು ಅವಕಾಶ ನೀಡುತ್ತಿಲ್ಲ ಎಂದು ತಿರುಗೇಟು ನೀಡಿದರು.

ವಿಪಕ್ಷಗಳು ಸರ್ಕಾರಕ್ಕೆ ಕಠಿಣ ಪ್ರಶ್ನೆಗಳನ್ನು ಕಲಾಪದಲ್ಲಿ ಕೇಳಬಹುದಾಗಿದೆ. ಆದರೆ ಸದನದಲ್ಲಿ ಸರ್ಕಾರ ಉತ್ತರ ನೀಡಲು ವಿಪಕ್ಷಗಳು ಯಾವುದೇ ಗದ್ದಲಕ್ಕೆ ಅವಕಾಶ ನೀಡಬಾರದು ಎಂದು ಪ್ರಧಾನಿ ಮೋದಿ ಕಲಾಪ ಆರಂಭಕ್ಕೂ ಮುನ್ನ ಮನವಿ ಮಾಡಿಕೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next