Advertisement

ರಬ್ಬರ್‌ ಬೆಲೆ ಅಲ್ಪ ಇಳಿಕೆ

10:10 PM Feb 01, 2020 | Sriram |

ಹೊಸ ಅಡಿಕೆ ಬೆಲೆಯಲ್ಲಿ ಈ ವಾರ ಯಾವುದೇ ವ್ಯತ್ಯಾಸವಾಗಿಲ್ಲ. ಹೊಸ ಅಡಿಕೆ 252 ರೂ. ಗೆ ಹಾಗೂ ಹಳೆಯ ಅಡಿಕೆಯಲ್ಲಿ ಮತ್ತೆ 3 ರೂ. ಏರಿಕೆಯಾಗಿದೆ. (ಸಿಂಗಲ್‌ ಚೋಲ್‌) 260 -295 ರೂ. ತನಕ ಖರೀದಿಯಾಗಿದೆ.

Advertisement

ಕಳೆದ ವರ್ಷಕ್ಕೆ ಹೋಲಿಸಿದರೆ ಅಡಿಕೆ ಬೆಲೆ ಸ್ಥಿರತೆಯನ್ನು ಕಾಯ್ದುಕೊಂಡಿದೆ. ಪಠೊರಾ 200-210 ಖರೀದಿ ನಡೆಸುತ್ತಿದೆ. ಉಳ್ಳಿಗಡ್ಡೆ 90-110 ರೂ., ಕರಿಕೋಟು 80-100 ರೂ. ಧಾರಣೆ ಪಡೆಯುತ್ತಿವೆ.

ಕಾಳುಮೆಣಸು ಯಥಾಸ್ಥಿತಿ
ಕಾಳುಮೆಣಸಿನ ಧಾರಣೆಯಲ್ಲಿ ಯಾವುದೇ ಏರಿಕೆ ಕಾಣದೆ ಯಥಾಸ್ಥಿತಿ ಇದೆ. ಕೆ.ಜಿ.ಗೆ 320 ರೂ. ತನಕ ಖರೀದಿಯಾಗಿದೆ. ಕೆಲವು ಸಮಯಗಳ ಧಾರಣೆಯನ್ನೇ ಗಮನಿಸಿದರೆ, ಕಾಳುಮೆಣಸು ದೊಡ್ಡ ಮಟ್ಟಿನ ಧಾರಣೆ ಪಡೆದುಕೊಳ್ಳದೇ ಇರುವುದನ್ನು ಗಮನಿಸಬಹುದು. ಕಳೆದ ಎರಡು ವರ್ಷಗಳಿಂದ ಇಳಿಕೆಯ ಧಾರಣೆ ಮುಂದುವರಿದಿದೆ.

ರಬ್ಬರ್‌ ಬೆಲೆ ಇಳಿಕೆ
ರಬ್ಬರ್‌ ಧಾರಣೆಯಲ್ಲಿ ಕಳೆದ ವಾರ 134 ರೂ.ಗೆ ಖರೀದಿಯಾಗಿತ್ತು. ಈ ವಾರ 2 ರೂ. ಇಳಿಕೆ ಕಂಡಿದೆ. ಕರಾವಳಿ ಭಾಗದ ಬೆಳೆಗಾರರ ಪ್ರಮುಖ ವಾಣಿಜ್ಯ ಬೆಳೆ ಎಣಿಸಿಕೊಂಡಿರುವ ರಬ್ಬರ್‌ ಕೆಲವು ಸಮಯದ ಹಿಂದೆ ಚೇತೋಹಾರಿ ಏರಿಕೆಯನ್ನು ಕಂಡು ಬೆಳೆಗಾರರಲ್ಲಿ ಖುಷಿಯನ್ನು ತಂದಿತ್ತು. ರಬ್ಬರ್‌ ಬೆಲೆ ವರ್ಷಗಳ ಬಳಿಕ 150 ರೂ.ಗೆ ತಲುಪಿತ್ತು. ಆದರೆ ಕೆಲವು ವಾರಗಳಿಂದ ಇಳಿಕೆಯ ಹಾದಿಯಲ್ಲಿ ಸಾಗಿತ್ತು. ಈಗ ಮತ್ತೆ ಏರಿಕೆಯ ಹಾದಿಯಲ್ಲಿ ಸಾಗಿದೆ. ಆರ್‌ಎಸ್‌ಎಸ್‌ 4- 132 ರೂ., ಆರ್‌ಎಸ್‌ಎಸ್‌ 5 – 124 ರೂ.ಗೆ ಖರೀದಿಯಾಗಿದೆ.

ಕೊಕ್ಕೋ ಯಥಾಸ್ಥಿತಿ
ಈ ವಾರ ಕೊಕ್ಕೋ 53-55 ರೂ. ತನಕ ಖರೀದಿಯಾಗಿದೆ. ಕೃಷಿ ಉತ್ಪನ್ನಗಳ ಪೈಕಿ ಸ್ಥಿರತೆ ಸಾಧಿಸಿದ ಏಕೈಕ ಉತ್ಪನ್ನವೆಂದರೆ ಅದು ಕೊಕ್ಕೋ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಕೆಲವು ವರ್ಷಗಳಿಂದ ಕೊಕ್ಕೋ ಬೆಳೆಯುವ ಪ್ರಮಾಣವೂ ಧಾರಣೆಯ ಸ್ಥಿರತೆಯ ಕಾರಣದಿಂದ ಹೆಚ್ಚಾಗಿದೆ.

Advertisement

ತೆಂಗು ಧಾರಣೆ
ಈ ವಾರ ತೆಂಗಿನ ಕಾಯಿ ಧಾರಣೆಯಲ್ಲಿ ಯಥಾಸ್ಥಿತಿ ಇದೆ. ತೆಂಗಿನಕಾಯಿ ಸಣ್ಣ ಗಾತ್ರ (ಕೆ. ಜಿ.ಗೆ) 20 -24 ರೂ., ತೆಂಗಿನಕಾಯಿ ಮಧ್ಯಮ ಗಾತ್ರ (ಕೆ.ಜಿ.ಗೆ) 25-29 ರೂ., ತೆಂಗಿನಕಾಯಿ ದೊಡ್ಡ ಗಾತ್ರ (ಕೆ. ಜಿ. ಗೆ) 30-36 ರೂ. ಗೆ ಖರೀದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next