Advertisement

ಮೂಲ್ಕಿ: ಶೀಘ್ರ ಸ್ಥಾಪನೆಯಾಗಲಿ ಆರ್‌ಟಿಒ

03:25 PM Nov 08, 2022 | Team Udayavani |

ಮೂಲ್ಕಿ: ಬಹುನಿರೀಕ್ಷೆಯ ಮೂಲ್ಕಿ ತಾಲೂಕು ಈಗಾಗಲೇ ಆರಂಭಗೊಂಡಿದ್ದು, ವಿವಿಧ ಇಲಾಖೆಗಳು ಇಲ್ಲಿ ಕಾರ್ಯನಿರ್ವಹಿಸುತ್ತಿವೆ. ಆದರೆ (ಆರ್‌ಟಿಒ) ಪ್ರಾದೇಶಕ ಸಾರಿಗೆ ಅಧಿಕಾರಿಗಳ ಕಚೇರಿ ಇನ್ನೂ ಮೂಲ್ಕಿಗೆ ಬಂದಿಲ್ಲ. ಇಲ್ಲಿ ಆರಂಭವಾಗುವ ಲಕ್ಷಣವೂ ಕಾಣುತ್ತಿಲ್ಲ.

Advertisement

ಮಂಗಳೂರು ಆರ್‌ಟಿಒ ಕಚೇರಿಗೆ ತೆರಳಬೇಕು

ಮಂಗಳೂರಿನ ಆರ್‌ಟಿಒ ಕಚೇರಿಯ ಮೂಲಕ ಕೆಲವಷ್ಟೆ ಸೇವೆಗಳನ್ನು ವಾರಕ್ಕೊಮ್ಮೆ ಮೂಲ್ಕಿ ಕಾರ್ನಾಡು ಗಾಂಧಿ ಮೈದಾನದಲ್ಲಿ ಕ್ಯಾಂಪ್‌ ನಡೆಸುವ ಮೂಲಕ ಮೂಲ್ಕಿ ಹೊಬಳಿಯ ಜನರ ಕೆಲವೊಂದು ಸಮಸ್ಯೆಗಳಿಗೆ ಸ್ಪಂದಿಸುತ್ತಿದೆ. ಆದರೆ ಇಲ್ಲಿಯ ಜನರಿಗೆ ಬೇಕಾದ ಪೂರ್ಣಕಾಲಿಕಾ ಇಲಾಖಾ ಸೇವೆ ಇಲ್ಲಿ ಸಿಗುವುದು ಅತೀ ಅಗತ್ಯವಾಗಿದೆ. ಮೂಲ್ಕಿಯಿಂದ ಬರೋಬ್ಬರಿ 30ಕ್ಕೂ ಕೀ.ಮೀ. ಮಿಕ್ಕಿದ ದೂರ ಮಂಗಳೂರು ಆರ್‌ಟಿಒ ಕಚೇರಿಗೆ ತೆರಳಬೇಕಾಗಿದೆ. ಇದು ಸರಕಾರದ ವಿಕೇಂದ್ರಿಕರಣ ನಿಯಮದಂತೆ ಅದರಲ್ಲೂ ತಾಲೂಕು ಕೇಂದ್ರವಾಗಿರುವ ಮೂಲ್ಕಿಗೆ ಆರ್‌ಟಿಒ ಕಚೇರಿ ನ್ಯಾಯಯುತ ಬೇಡಿಕೆಯಾಗಿದೆ.

ಪ್ರತೀ ಶುಕ್ರವಾರ ಇಲ್ಲಿ ಕೆಲವು ಸೇವೆಗಳನ್ನು ಪಡೆಯಲು ಮೈದಾನದಲ್ಲಿ ಜನ ಸೇರಿ ಉರಿ ಬಿಸಿಲು ಹಾಗೂ ಮಳೆಯ ತೊಂದರೆ ಕೂಡ ಅನುಭ ವಿಸಬೇಕಾಗಿದೆ. ತತ್‌ಕ್ಷಣ ಮೂಲ್ಕಿಗೆ ಆರ್‌ಟಿಒ ಕಚೇರಿ ಸ್ಥಾಪನೆಗೆ ಸರಕಾರ ಮುಂದೆ ಬಂದು ಇಲ್ಲಿಯ ಜನರ ಸಮಸ್ಯೆಗೆ ಉತ್ತರಿಸಬೇಕಾಗಿದೆ.

ಸರಕಾರದ ಗಮನ ಸೆಳೆಯಲಾಗುವುದು: ತಾಲೂಕು ಆಗಿ ಮೊದಲ ಹಂತದಲ್ಲಿ ಮಿನಿ ವಿಧಾನ ಸೌಧ ಕಟ್ಟಡಕ್ಕೆ ಈಗಾಗಲೇ ಚಾಲನೆ ನೀಡಲಾಗಿದ್ದು, ಈ ಕಟ್ಟಡದಲ್ಲಿ ಸರಕಾರದ ವಿವಿಧ ಇಲಾಖೆಗಳನ್ನು ಪೂರ್ಣಪ್ರಮಾಣದಲ್ಲಿ ಆರಂಭಿಸಿಸಲಾಗಿದೆ. ಮುಂದೆ ಆರ್‌ಟಿಒ ಕಚೇರಿಯ ಅಗತ್ಯದ ಬಗ್ಗೆ ಸರಕಾರದ ಗಮನ ಸೆಳೆಯಲಾಗಿದೆ. ಜನರಿಗೆ ಅಗತ್ಯ ಇರುವ ಎಲ್ಲ ಸೌಲಭ್ಯಗಳನ್ನು ತಾಲೂಕು ಕೇಂದ್ರದಲ್ಲಿ ಸ್ಥಾಪಿಸುವಲ್ಲಿ ಸರಕಾರ ಬದ್ಧವಾಗಿದೆ. ಸಾರಿಗೆ ಇಲಾಖೆಯ ಕಚೇರಿಯು ಮೂಲ್ಕಿಗೆ ದೊರೆಯಲಿದೆ. –ಉಮಾನಾಥ ಕೋಟ್ಯಾನ್‌, ಶಾಸಕರು ಮೂಲ್ಕಿ-ಮೂಡುಬಿದಿರೆ

Advertisement

-ಸರ್ವೋತ್ತಮ ಅಂಚನ್‌

Advertisement

Udayavani is now on Telegram. Click here to join our channel and stay updated with the latest news.

Next