Advertisement

ಆರ್‌ಟಿಇ:ಎರಡನೇ ಸುತ್ತಿನ ಲಾಟರಿ

06:00 AM May 12, 2018 | Team Udayavani |

ಬೆಂಗಳೂರು: ಖಾಸಗಿ ಶಾಲೆಯಲ್ಲಿ ಲಭ್ಯವಿರುವ 2018-19ನೇ ಸಾಲಿನ ಆರ್‌ಟಿಇ ಸೀಟುಗಳಿಗೆ ಮೊದಲ ಸುತ್ತಿನ ಲಾಟರಿ ಪ್ರಕ್ರಿಯೆಯಲ್ಲಿ ಆಯ್ಕೆಯಾಗಿರುವ ಮಕ್ಕಳು ಶಾಲೆಗೆ ದಾಖಲಾದ ನಂತರ ಎರಡನೇ ಸುತ್ತಿನ ಆನ್‌ಲೈನ್‌ ಲಾಟರಿ ನಡೆಯಲಿದೆ. 

Advertisement

2ನೇ ಸುತ್ತಿನ ಲಾಟರಿ ಪ್ರಕ್ರಿಯೆಗೂ ಮುನ್ನ ಮತ್ತೂಮ್ಮೆ ಶಾಲೆಗಳನ್ನು ಬದಲಾಯಿಸಿಕೊಳ್ಳಲು ಶಿಕ್ಷಣ ಇಲಾಖೆ ಅವಕಾಶ ಕಲ್ಪಿಸಿದೆ. ಆಸಕ್ತ ಪೋಷಕರು ತಮ್ಮ ಮಕ್ಕಳ ಅರ್ಜಿ ಸಂಖ್ಯೆ ಮತ್ತು ಮೊಬೈಲ್‌ ಸಂಖ್ಯೆಯನ್ನು ಆನ್‌ಲೈನ್‌ ಮೂಲಕ ತಂತ್ರಾಂಶದಲ್ಲಿ ಅಳವಡಿಸಿದರೆ, ಅವರ ಮೊಬೈಲ್‌ಗೆ ಒಟಿಪಿ ಸಂಖ್ಯೆ ಬರಲಿದೆ. ಈ ಒಟಿಪಿ ಬಳಸಿ ಶಾಲೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಆರ್‌ಟಿಇ ಸೀಟುಗಳಿಗೆ ಒಟ್ಟು 2.38 ಲಕ್ಷ ಅರ್ಜಿ ಬಂದಿದ್ದು, ಮೊದಲ ಸುತ್ತಿನಲ್ಲಿ 1.11 ಲಕ್ಷ ಮಕ್ಕಳು ಸೀಟು ಪಡೆದಿದ್ದರು.

ರಾಷ್ಟ್ರೀಯ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಆಯೋಗ ನೀಡಿರುವ ಇತ್ತೀಚಿನ ತೀರ್ಪಿನ ಪ್ರಕಾರ ರಾಜ್ಯದಲ್ಲಿ 31 ಶಾಲೆಗಳನ್ನು ಹೆಚ್ಚುವರಿಯಾಗಿ ಆರ್‌ಟಿಇ ಕಾಯ್ದೆಗೆ ಒಳಪಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next