ಚನ್ನರಾಯಪಟ್ಟಣ: ಮಕ್ಕಳ ಕಡ್ಡಾಯ ಶಿಕ್ಷಣ ಹಕ್ಕನ್ನು ಜಾರಿಗೆ ತರುವ ನಿಟ್ಟಿನಲ್ಲಿ ಸರ್ಕಾರ 2012-13ರಲ್ಲಿ ಅನುಷ್ಠಾನ ಮಾಡಿದ ಆರ್‌ಟಿಇ, ಖಾಸಗಿ ಶಾಲೆಗಳ ಪ್ರೋತ್ಸಾಹಹಿಸುತ್ತಿದೆ ಎಂಬ ಆರೋಪ ತಡವಾಗಿ ಇಲಾಖೆಗೆ ಮನವರಿಕೆಯಾಗಿದ್ದು, ಇದೀಗ ಆರ್‌ಟಿಇ ಪರಿಷ್ಕರಣೆಗೊಂಡಿದ್ದು ಕನ್ನಡ ಶಾಲೆಗಳ ಉಳಿವಿಗೆ ಹೊಸ ಪ್ರಯತ್ನ ಸಾಗಿದೆ.
ಪ್ರಸ್ತುತ ಶೈಕ್ಷಣಿಕ ಸಾಲಿನಿಂದ ಆರ್‌ಟಿಇ ನಿಯಮ ಬದಲಾಗಿ ಕಂದಾಯ ಗ್ರಾಮದಲ್ಲಿ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಸರ್ಕಾರಿ ಅಥವಾ ಅನುದಾನಿತ ಶಾಲೆಗಳು ಇದ್ದಲ್ಲಿ ಅಂತಹ ಶಾಲೆಯಲ್ಲಿ ವಿದ್ಯಾರ್ಥಿ ಗಳಿಗೆ ಉಚಿತ ಪ್ರವೇಶ ದೊರೆಯುವುದು. ಒಂದು ವೇಳೆ ಸರ್ಕಾರಿ ಅನುದಾನಿತ ಶಾಲೆಗಳಿಲ್ಲದ್ದರೆ ಅಲ್ಲಿನ ಮಕ್ಕಳಿಗೆ ಪ್ರಸ್ತುತ ಸಾಲಿನಿಂದ ಆರ್‌ಟಿಇ ಯೋಜನೆ ಅಡಿ ಖಾಸಗಿ ಶಾಲೆಗಳಿಗೆ ಉಚಿತವಾಗಿ ಪ್ರವೇಶ ದೊರಕಿಸಲಾಗುತ್ತಿದೆ ಎಂಬ ಹೊಸ ನಿಯಮ ಜಾರಿಗೆ ತರಲಾಗಿದೆ.
ಸರ್ಕಾರಿ ಶಾಲೆಗೆ ಮಾರಕವಾದ ನಿಯಮ: 2009- 10ರಲ್ಲಿ ಕಡ್ಡಾಯ ಶಿಕ್ಷಣದ ಹಕ್ಕು ಅಧಿನಿಯಮ ಸಂಸತ್‌ನಲ್ಲಿ ಆನುಮೋದನೆಗೊಂಡರೂ ಅದು ಜಾರಿಗೆ ಬಂದಿದ್ದು 2012-13ರಲ್ಲಿ. ಅದು ಸರ್ಕಾರವೇ ಹಣ ನೀಡಿ ಸರ್ಕಾರಿ ಶಾಲೆಗಳಿಗೆ ಮಾರಕವಾಗಿ ಖಾಸಗಿ ಶಾಲೆಗಳ ಪಾಲಿಗೆ ವರವಾಗುವ ಮೂಲಕ ಸರ್ಕಾರಿ ಶಾಲೆಗಳ ಬಾಗಿಲು ಹಾಕಿಸಿತು ಎಂದರೆ ತಪ್ಪಾ ಗಲಾರದು. ದುಬಾರಿ ಹಣ ಕೊಟ್ಟು ಗ್ರಾಮೀಣ ಭಾಗದ ಮಕ್ಕಳಿಗೆ ಆಂಗ್ಲಮಾಧ್ಯಮ ಖಾಸಗಿ ಶಾಲೆ ಗಳಿಗೆ ಪ್ರವೇಶ ದೊರಿಕಿಸಿ ಕನ್ನಡ ಶಾಲೆಗಳ ಅವನತಿಗೆ ಕಾರಣವಾಗಿತ್ತು.
ಸರ್ಕಾರಿ ಶಾಲೆಗಳಿಗೆ ಮಾರಕ: ತಾಲೂಕಿನಲ್ಲಿ 2012-13 ರಲ್ಲಿ 162 ಎಲ್ಪಿಎಸ್ ಮತ್ತು 228 ಎಚ್ಪಿಎಸ್ ಸರ್ಕಾರಿ ಶಾಲೆಗಳಿದ್ದು, ಆರ್‌ಟಿಇ ಜಾರಿ ಗೊಂಡ 8 ವರ್ಷದ ಅಂತರದಲ್ಲಿ ಸುಮರು 25 ಶಾಲೆಗಳು ಬಾಗಿಲು ಹಾಕುವಂತಾಯಿತು. ಇದಲ್ಲದೇ ಹಲವು ಶಾಲೆಗಳಲ್ಲಿ ಇಬ್ಬರು ಮೂರು ಮಕ್ಕಳಿಗೆ ಇಬ್ಬರು ಶಿಕ್ಷಕರು ಪಾಠ ಮಾಡುತ್ತಿದ್ದಾರೆ. ಅವುಗಳ ಅಂಕಿ ಅಂಶಗಳನ್ನು ನೋಡಿದರೆ ಸುಮಾರು 50 ಕ್ಕೂ ಹೆಚ್ಚು ಶಾಲೆಗಳು ಕುಸಿದಿದೆ, ಈಗಾಗಿ 8 ವರ್ಷದ ಅವಧಿಯಲ್ಲಿ ಆರ್‌ಟಿಇ ಸೇರಿದಂತೆ ಹಲವು ಕಾರಣಗಳಿಂದ ಖಾಸಗಿ ಶಾಲೆಗಳು ತಮ್ಮ ಹಾಜರಾತಿ ಹೆಚ್ಚಿಸಿಕೊಂಡು ವೈಭವೀಕರಿಸಿಕೊಂಡರೆ ತಾಲೂಕಿನಲ್ಲಿ 2012-13ರಲ್ಲಿ 143 ಇದ್ದ ಆರ್‌ಟಿಇ ಫನಾನುಭವಿಗಳ ಸಂಖ್ಯೆ 2018-19ರಲ್ಲಿ 412ಕ್ಕೆ ಏರಿದೆ. ಇದು ಒಂದು ತಾಲೂಕಿನ ಉದಾಹರ ಣೆಯಾದರೆ ರಾಜ್ಯದ ಎಷ್ಟು ಕನ್ನಡ ಶಾಲೆಗಳಿಗೆ ಈ ನೀತಿ ಮಾರಕವಾಗಿತ್ತು ಎಂಬುದನ್ನು ಊಹಿಸಬೇಕಿದೆ.
ಒಂದು ಖಾಸಗಿ ಶಾಲೆಗೆ ಆರ್‌ಟಿಇ: ಒಟ್ಟಾರೆ ಪ್ರಸ್ತುತ 8 ವರ್ಷಗಳ ನಂತರ ರಾಜ್ಯ ಸರ್ಕಾರ ಹಾಗೂ ಶಿಕ್ಷಣ ಇಲಾಖೆಗೆ ಮನವರಿಕೆಯಾಗಿ ಈ ಶೈಕ್ಷಣಿಕ ಸಾಲಿನಿಂದ ಈ ಹಿಂದಿನ 41 ಆರ್‌ಟಿಇ ಪ್ರವೇಶ ಪಡೆದಿದ್ದ ಖಾಸಗಿ ಶಾಲೆಗಳು ರದ್ದಾಗಿದೆ.
Advertisement
ಸರಿಯಾಗಿ ಅನುಷ್ಠಾನ ಆಗಲಿಲ್ಲ: ಈ ಹಿಂದೆ ಎಲ್ಲಾ ಅನುದಾನರಹಿತ ಶಾಲೆಗಳಿಗೆ ಶೇ.25 ರಷ್ಟು ಆರ್‌ಟಿಇ ಪ್ರವೇಶ ನೀಡಿತ್ತು. ಈ ದಿಸೆಯಲ್ಲಿ ತಾಲೂಕಿನ ಸುಮಾರು 44 ಖಾಸಗಿ ಶಾಲೆಯಿಂದ 412 ಮಕ್ಕಳಿಗೆ ಉಚಿತ ಶಿಕ್ಷಣಕ್ಕೆ ಅವಕಾಶ ಕಲ್ಪಿಸಿ ಸರ್ಕಾರವೇ ಖಾಸಗಿ ಶಾಲೆಗೆ ಆ ವೆಚ್ಚ ಭರಿಸುತ್ತಿತ್ತು. ಬಡ ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂಬ ಸದುದ್ದೇಶ ದಿಂದ ಜಾರಿಗೆ ತಂದ ಈ ಆರ್‌ಟಿಇ ನಿಯಮವನ್ನು ಜನತೆ ಸಾಕಷ್ಟು ದುರುಯಯೋಗ ಪಡಿಸಿಕೊಂಡಿದ್ದು ಉಂಟು. ನಗರ ಪ್ರದೇಶದ ಶಾಲಾ ವ್ಯಾಪ್ತಿಯಲ್ಲಿ ವಾಸವಿರುವುದಾಗಿ ತಾತ್ಕಾಲಿಕ ದಾಖಲೆಯನ್ನು ಸೃಷ್ಟಿಸಿ ಅಲ್ಲಿನ ಬಡ ಫಲಾನುಭವಿಗಳನ್ನು ವಂಚಿಸಿ ಸೀಟು ಪಡೆದ ಹಲವು ಉದಾಹರಣೆಗಳು ಇವೆ.
Related Articles
Advertisement
ದಂಡಿಗನ ಹಳ್ಳಿ ಹೋಬಳಿ ಅರಳ ಬರಗೂರು ವ್ಯಾಪ್ತಿಯಲ್ಲಿನ ವೆಸ್ಟ್‌ಹಿಲ್ ಖಾಸಗಿ ಶಾಲೆ, ಅನುದಾನಿತ ಶಾಲೆಗಳಾದ ದಿಡಗ ವ್ಯಾಪ್ತಿಯ ಹೊಯ್ಸಳ, ಹಿರೀಸಾವೆಯ ಜಯ ಪ್ರಕಾಶ ಹಾಗೂ ಚನ್ನರಾಯಪಟ್ಟಣ ನವೋದಯ ಶಾಲೆಗಳು ಮಾತ್ರ ಆರ್‌ಟಿಇಗೆ ಒಳಪಟ್ಟಿವೆ.