Advertisement

ಆರ್‌ಟಿಇ: ಖಾಸಗಿ ಶಾಲೆಗಳಿಗೆ ಭರಪೂರ ಹಣ

03:50 AM Mar 02, 2017 | |

ಬೆಂಗಳೂರು: ಅಂತೂ ಖಾಸಗಿ ಶಾಲೆಗಳ ಶುಲ್ಕ ಏರಿಕೆಯ ಬೇಡಿಕೆಗೆ ರಾಜ್ಯ ಸರಕಾರ ಮಣಿದಿದೆ. ಉಚಿತ ಹಾಗೂ ಕಡ್ಡಾಯ ಶಿಕ್ಷಣ 
ಹಕ್ಕು (ಆರ್‌ಟಿಇ)ಕಾಯ್ದೆಯಡಿ ಖಾಸಗಿ ಶಾಲೆ ಗಳಲ್ಲಿ ಸೀಟು ಪಡೆಯುವ ಮಕ್ಕಳಿಗೆ ಸರಕಾರದ ವತಿಯಿಂದ ನೀಡಲಾಗು ತ್ತಿರುವ ಶುಲ್ಕ ಹೆಚ್ಚಿಸಲು ಸಂಪುಟ ಒಪ್ಪಿಗೆ ನೀಡಿದೆ. ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳಿಗೆ ಪ್ರಸ್ತುತ ನೀಡುತ್ತಿರುವ 5,924 ರೂ. ಶುಲ್ಕವನ್ನು 8 ಸಾವಿರಕ್ಕೆ ಹಾಗೂ ಪ್ರಾಥ ಮಿಕ ವಿದ್ಯಾರ್ಥಿಗಳಿಗೆ 11,848 ರೂ.ಗಳಿಂದ 16 ಸಾವಿರ ರೂ.ಗೆ ಏರಿಸಲು ತೀರ್ಮಾನಿಸಲಾಗಿದೆ.

Advertisement

ಸಂಪುಟ ಸಭೆಯ ಅನಂತರ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸ ದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ, ನಾಲ್ಕು ಲಕ್ಷ ಮಕ್ಕಳು ಈ ಯೋಜನೆಯಡಿ ಪ್ರತಿ ಷ್ಠಿತ ಶಾಲೆಗಳಲ್ಲಿ ವ್ಯಾಸಂಗ ಮಾಡುವ ಅವಕಾಶ ಪಡೆದಿದ್ದು, 425 ಕೋಟಿ ರೂ. ಸರಕಾರ ಪಾವತಿಸು ತ್ತಿದೆ ಎಂದು ತಿಳಿಸಿದರು. 

ಸರಕಾರಿ ಶಾಲೆಗಳ ಸುಧಾರಣೆ ಮತ್ತು  ಹೆತ್ತವರು ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಸೇರಿಸುವ ವಾತಾವರಣ ನಿರ್ಮಾಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವರದಿ ಕೊಡಲು ಶಿಕ್ಷಣ ಇಲಾಖೆಗೆ ಸೂಚಿಸಲು ನಿರ್ಧರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next