Advertisement

20 ರಿಂದ ಆರ್‌ಟಿಇ ಅರ್ಜಿ ಸಲ್ಲಿಕೆ 

12:30 AM Mar 03, 2019 | |

ಬೆಂಗಳೂರು: ಖಾಸಗಿ ಶಾಲೆಗಳಿಗೆ ಆರ್‌ಟಿಇ ಅಡಿ ಅರ್ಜಿ ಸಲ್ಲಿಸಲು ಹಲವು ತಿದ್ದುಪಡಿ ಮಾಡಿ ಸಾರ್ವಜನಿಕ ಶಿಕ್ಷಣ ಇಲಾಖೆ ಮಾರ್ಗಸೂಚಿ ಹೊರಡಿಸಿದೆ. ಮಾರ್ಚ್‌ 20ರಿಂದ ಏ.15ರವರೆಗೆ ಆನ್‌ ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ನೆರೆಹೊರೆ ಶಾಲೆಗಳ ಪಟ್ಟಿಯನ್ನು ಹೊಸದಾಗಿ ಸಿದ್ಧಪಡಿಸಲಾಗಿದೆ. ಅದರ ಪರಿಶೀಲನಾ ಕಾರ್ಯವನ್ನು ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ವಹಿಸಲಾಗಿದೆ.

Advertisement

ಸರ್ಕಾರಿ ಅಥವಾ ಅನುದಾನಿತ ಶಾಲೆಗಳು ಇರುವ ಕಡೆಗಳಲ್ಲಿ ಖಾಸಗಿ ಶಾಲೆಗೆ ಆರ್‌ಟಿಇ ಅಡಿಯಲ್ಲಿ ಮಕ್ಕಳನ್ನು ಸೇರಿಸಲು ಅವಕಾಶ ಇಲ್ಲ. ಸರ್ಕಾರಿ ಅಥವಾ ಅನುದಾನಿತ ಶಾಲೆ ಇಲ್ಲದ ಕಡೆಗಳಲ್ಲಿ ಮಾತ್ರ ಆರ್‌ಟಿಇಗೆ ಅವಕಾಶವಿದೆ. ಹಾಗೆಯೇ ದುರ್ಬಲ ವರ್ಗದ ಮಕ್ಕಳಿಗೆ ವಿಶೇಷ ಸೌಲಭ್ಯವನ್ನು ಕಲ್ಪಿಸಲಾಗಿದೆ. ಅರ್ಜಿ ಹಾಗೂ ಮಾರ್ಗಸೂಚಿಗೆ ಸಂಬಂಧಿಸಿದ ಎಲ್ಲ ಮಾಹಿತಿ www.schooleducation.kar.nic.in/ ನಲ್ಲಿ ಲಭ್ಯವಿದೆ.

2019-20ನೇ ಸಾಲಿನಲ್ಲಿ ಶಿಕ್ಷಣ ಹಕ್ಕು ಕಾಯ್ದೆಯ ಸೆಕ್ಷನ್‌12(1)(ಬಿ) ಮತ್ತು 12(1)(ಸಿ) ಅಡಿಯಲ್ಲಿ ಪ್ರವೇಶ ಪ್ರಕ್ರಿಯೆ ನಡೆಸಲು ನೆರೆಹೊರೆ ಶಾಲೆ, ಅರ್ಜಿ ಸಲ್ಲಿಸುವ ಕ್ರಮ ಮತ್ತು ಪರಿಶೀಲನೆ, ದುರ್ಬಲ ವರ್ಗದ ಮಕ್ಕಳಿಗೆ ಆಗಬೇಕಾದ ಅನುಕೂಲ, ಪೋಷಕರಿಗೆ ಎಸ್‌ ಎಂಎಸ್‌ ಕಳಿಸುವುದು, ಕುಂದುಕೊರತೆ ವಿಲೇವಾರಿ ಇತ್ಯಾದಿ ಎಲ್ಲ ಅಂಶಗಳನ್ನು ಸ್ಪಷ್ಟವಾಗಿ ತಿಳಿಸಿದೆ.

ವೇಳಾಪಟ್ಟಿ: ಆನ್‌ಲೈನ್‌ ಮೂಲಕ ಅರ್ಜಿ ಸ್ವೀಕಾರ ಹಾಗೂ ಸೀಟು ಹಂಚಿಕೆ ನಡೆಯಲಿದೆ. ಮಾ.5ರಂದು ತಂತ್ರಾಂಶದ ಡೆಮೊ ಇರಲಿದೆ. ಮಾ.6ರಂದು ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳು ಸೇರಿ ನೆರೆಹೊರೆ ಶಾಲೆಗಳ ತಾತ್ಕಾಲಿಕ ಪಟ್ಟಿ ಪ್ರಕಟಿಸಲಾಗುತ್ತದೆ. ಮಾ.8ರಂದು ಪರಿಷ್ಕೃತ ತಂತ್ರಾಂಶದ ಡೆಮೊ ನಡೆಯಲಿದೆ. ನೆರೆಹೊರೆ ಶಾಲೆಗೆ ಆಕ್ಷೇಪಣೆ ಸಲ್ಲಿಸಲು ಮಾ.12ರ ವರೆಗೂ ಅವಕಾಶ ಇದೆ. ಮಾ.15ರಂದು ನೆರೆಹೊರೆ ಶಾಲೆಗಳ ಅಂತಿಮ ಪಟ್ಟಿ ಹಾಗೂ ಶಾಲಾವಾರು ಸೀಟುಗಳನ್ನು ಪ್ರಕಟಿಸಲಾಗುತ್ತದೆ. ಮಾ.18 ಮತ್ತು 19ರಂದು ಅರ್ಜಿ ಸಲ್ಲಿಸಲು ಪರೀಕ್ಷಾರ್ಥ ಅವಧಿ ಇರುತ್ತದೆ. ಮಾ.20ರಿಂದ ಏ.15ರವರೆಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಮಾ.21ರಿಂದ ಏ.20ರವರೆಗೆ ಅರ್ಜಿಗಳ ಪರಿಶೀಲನೆ ನಡೆಯಲಿದೆ. ಏ.25ಕ್ಕೆ ಲಾಟರಿ ಮೂಲಕ ಅರ್ಹ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟ. ಮೇ 1ರಂದು ಆನ್‌ಲೈನ್‌ ತಂತ್ರಾಂಶದ ಮೂಲಕ ಮೊದಲ ಸುತ್ತಿನ ಸೀಟು ಹಂಚಿಕೆ ನಡೆಯಲಿದೆ. ಮೇ 2ರಿಂದ 8ರವರೆಗೆ ಪ್ರವೇಶ ಪ್ರಕ್ರಿಯೆ, ಮೇ 25ರಂದು ಎರಡನೇ ಸುತ್ತಿನ ಸೀಟು ಹಂಚಿಕೆ ನಡೆಯಲಿದ್ದು, ಮೇ 31ರೊಳಗೆ ಸಂಪೂರ್ಣ ಪ್ರಕ್ರಿಯೆ ಮುಗಿಯಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟಣೆ ತಿಳಿಸಿದೆ. 

Advertisement

ಸಿಇಟಿಗೆ ಎರಡು ಲಕ್ಷ ನೊಂದಣಿ 

ಬೆಂಗಳೂರು: ಎಂಜಿನಿಯರಿಂಗ್‌ ಮೊದಲಾದ ವೃತ್ತಿಪರ ಕೋರ್ಸ್‌ನ ಸರ್ಕಾರಿ ಕೋಟಾದ ಸೀಟುಗಳ ಹಂಚಿಕೆಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಗೆ ಸುಮಾರು ಎರಡು ಲಕ್ಷ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಏ.23, 24 ಮತ್ತು 25ರಂದು ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯಲಿದೆ. ಇದಕ್ಕೆ ಅಗತ್ಯ ಸಿದಟಛಿತೆಯನ್ನು ಪ್ರಾಧಿಕಾರ ಮಾಡಿಕೊಂಡಿದೆ. ಈಗಾಗಲೇ ದ್ವಿತೀಯ ಪಿಯು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು 2019-20ನೇ ಸಾಲಿನ ಎಂಜಿನಿಯರಿಂಗ್‌ ಕೋರ್ಸ್‌ಗಳಿಗೆ ಸರ್ಕಾರಿ ಕೋಟಾದಡಿ ಸೀಟು ಪಡೆಯಲು ಸಿಇಟಿಗೆ ನೋಂದಣಿ ಮಾಡಿಕೊಳ್ಳಲು ಸೂಚಿಸಲಾಗಿತ್ತು. ನೋಂದಣಿಗೆ ಫೆ.28 ಹಾಗೂ ಶುಲ್ಕ ಪಾವತಿಸಲು ಮಾ.6ರವರೆಗೂ ಅವಕಾಶ ನೀಡಲಾಗಿತ್ತು. ಈವರೆಗೂ ನೋಂದಣಿ ಮಾಡಿಕೊಂಡಿರುವ ಸುಮಾರು ಎರಡು ಲಕ್ಷ ವಿದ್ಯಾರ್ಥಿಗಳಲ್ಲಿ 1,80,547 ವಿದ್ಯಾರ್ಥಿಗಳು ಶುಲ್ಕ ಪಾವತಿ ಮಾಡಿದ್ದಾರೆಂದು ಪ್ರಾಧಿಕಾರದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಎಂಜಿನಿಯರಿಂಗ್‌ ಕೋಸ್‌ ìಗಳಿಗೆ ಮಾತ್ರ ಸಿಇಟಿ ನಡೆಯಲಿದೆ. ವೈದ್ಯಕೀಯ, ದಂತ ವೈದ್ಯಕೀಯ ಹಾಗೂ ಆಯುಷ್‌ ಕೋರ್ಸ್‌ಗಳಿಗೆ ನೀಟ್‌ ಕಡ್ಡಾಯವಾಗಿರುವುದರಿಂದ ನೀಟ್‌ ರ್‍ಯಾಂಕ್‌ನ್ನು ಮಾತ್ರ ಪರಿಗಣನೆಗೆ ತೆಗೆದುಕೊಳ್ಳುತ್ತೇವೆ. ಪಿಯು ಫ‌ಲಿತಾಂಶದ ನಂತರ ಸಿಇಟಿ ಫ‌ಲಿತಾಂಶ ಪ್ರಕಟಿಸಲಾಗುತ್ತದೆ ಎಂದು ವಿವರಿಸಿದರು.ಸಿಇಟಿಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಫೆ.28 ಹಾಗೂ ಶುಲ್ಕ ಪಾವತಿಗೆ ಮಾ.6ರವರೆಗೂ ಅವಕಾಶ ನೀಡಲಾಗಿತ್ತು. ವಿದ್ಯಾರ್ಥಿಗಳು ಮತ್ತು ಪೋಷಕರ ಒತ್ತಾಯದ ಮೇರೆಗೆ ಅರ್ಜಿ ಸಲ್ಲಿಸುವ ದಿನಾಂಕವನ್ನು ಮಾ.5ರಿಂದ ಮಾ.20ರವರೆಗೂವಿಸ್ತರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next