ನಾಗ್ಪುರ: ರಾಷ್ಟ್ರ ನಿರ್ಮಾಣದಲ್ಲಿ ಆರ್‌ಎಸ್‌ಎಸ್ ಪಾತ್ರ ಹಾಗೂ ಆರೆಸ್ಸೆಸ್‌ನ ಇತಿಹಾಸ ಕುರಿತ ವಿವರಣೆಗಳನ್ನು ನಾಗ್ಪುರದ ವಿಶ್ವವಿದ್ಯಾಲಯವೊಂದರ ಪಠ್ಯದಲ್ಲಿ ಸೇರಿಸಲಾಗಿದೆ. ‘ದ ರಾಷ್ಟ್ರಸಂತ ತುಕಾದೋಜಿ ಮಹ ರಾಜ್ ನಾಗ್ಪುರ ವಿವಿ’ಯ ದ್ವಿತೀಯ ವರ್ಷದ ಬಿಎ ಕೋರ್ಸ್‌ನ ಇತಿಹಾಸ ಪಠ್ಯದಲ್ಲಿ ಇದನ್ನು ಅಳವಡಿಸ ಲಾಗಿದೆ. ಇದರಲ್ಲಿ ರಾಷ್ಟ್ರನಿರ್ಮಾಣಕ್ಕಾಗಿ ಆರ್‌ಎಸ್‌ಎಸ್ ನೀಡಿದ ಕೊಡುಗೆಗಳನ್ನು ವಿವರಿಸಲಾಗಿದೆ. ಪಠ್ಯದ ಮೊದಲ ಭಾಗದಲ್ಲಿ ಕಾಂಗ್ರೆಸ್ ಪಕ್ಷದ ಸ್ಥಾಪನೆ, ಜವಾ ಹರ್ ಲಾಲ್ ನೆಹರು ಆಗಮನ ಮುಂತಾದವುಗಳ ಬಗ್ಗೆ ಬೆಳಕು ಚೆಲ್ಲಲಾಗಿದೆ. 3ನೇ ಭಾಗದಲ್ಲಿ ಆರ್‌ಎಸ್‌ಎಸ್ ಜನಾಂದೋಲನದ ಬಗ್ಗೆ ವಿವರಿಸಲಾಗಿದೆ. ಇತಿಹಾಸ ದಲ್ಲಿನ ಹೊಸ ಟ್ರೆಂಡ್‌ಗಳನ್ನು ವಿದ್ಯಾರ್ಥಿಗಳಿಗೆ ತಿಳಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಎಂಎ ಇತಿಹಾಸ ಪಠ್ಯದಲ್ಲಿ ಆರ್‌ಎಸ್‌ಎಸ್ ಕುರಿತ ಪಠ್ಯ ಇದೆ ಎಂದು ವಿವಿ ಆಡಳಿತ ತಿಳಿಸಿದೆ.