Advertisement

ಸದನದಲ್ಲಿ ಮತ್ತೆ ಆರ್‌ಎಸ್‌ಎಸ್‌ “ಟಾಕ್‌ವಾರ್‌’

10:21 PM Mar 24, 2022 | Team Udayavani |

ಬೆಂಗಳೂರು: ಆರೆಸ್ಸೆಸ್‌ ಹೆಸರು ಪ್ರಸ್ತಾಪ ಸದನಲ್ಲಿ ಮಾತಿನ ಚಕಮಕಿಗೆ ಕಾರಣವಾದ ಪ್ರಸಂಗ ನಡೆಯಿತು.

Advertisement

ಸಿದ್ದರಾಮಯ್ಯ ಅವರು ಕಾನೂನು -ಸುವ್ಯವಸ್ಥೆ ಕುರಿತು ಮಾತನಾಡುತ್ತಾ, ವೈಯಕ್ತಿಕ ಸಂಬಂಧ ಬೇರೆ ರಾಜಕೀಯ ಬೇರೆ. ರಾಜಕೀಯವಾಗಿ ನೀವು ಬಿಜೆಪಿ, ಆರೆಸ್ಸೆಸ್‌, ನಾನು ಕಾಂಗ್ರೆಸ್‌ ಇರಬಹುದು ಎಂದು ಹೇಳಿದರು.

ಇದಕ್ಕೆ ಸ್ಪೀಕರ್‌ ಕಾಗೇರಿ ಅವರು, ಎಲ್‌ ಹೋದ್ರೂ ನಮ್‌ ಆರೆಸ್ಸೆಸ್‌ ಬಗ್ಗೆ ಯಾಕೆ ಬರಿ¤àರಿ ಎಂದರು. ಅದಕ್ಕೆ ಸಿದ್ದರಾಮಯ್ಯ, ಆರೆಸ್ಸೆಸ್‌ ಸಮಾಜಸೇವಾ ಸಂಘಟನೆ ಆದರೆ, ಮನುವಾದ ಬಿತ್ತಲು ನಮ್ಮ ವಿರೋಧವಿದೆ ಎಂದು ತಿಳಿಸಿದರು.

ಸ್ಪೀಕರ್‌ ಅವರು ಆರೆಸ್ಸೆಸ್‌ ರಾಷ್ಟ್ರೀಯ ಸ್ವಯಂ ಸೇವಾ ಸಂಘಟನೆ ಎಂದರು. ಜಮೀರ್‌ ಅಹಮದ್‌, ಸ್ಪೀಕರ್‌ ಅವರನ್ನು ಕುರಿತು, ನೀವು ಪೀಠದಲ್ಲಿದ್ದು ನಮ್ಮ ಆರೆಸ್ಸೆಸ್‌ ಎಂದು ಹೇಳಬಹುದಾ. ಸ್ಪೀಕರ್‌ ಯಾವುದೇ ಪಕ್ಷ, ಸಂಘಟನೆಗೆ ಸೇರಿದವರಲ್ಲ ಎಂದರು. ಆದರೆ, ಸ್ಪೀಕರ್‌ ಅವರು ನಮ್ಮ ಆರೆಸ್ಸೆಸ್‌ ಎಂದರೆ ತಪ್ಪೇನು ಎಂದು ಕೇಳಿದರು. ಅಷ್ಟೇ ಅಲ್ಲದೆ, ಎಂದಾದರೂ ಒಂದು ದಿನ ನೀವು ಆರೆಸ್ಸೆಸ್‌ ಆಗ್ತಿàರಿ ಎಂದರು. ಅದಕ್ಕೆ ಜಮೀರ್‌ ಅಹಮದ್‌ ಸಾಧ್ಯವೇ ಇಲ್ಲ ಎಂದು ಹೇಳಿದರು.

ಇದರ ನಡುವೆ ಕೆ.ಎಸ್‌. ಈಶ್ವರಪ್ಪ ಅವರು, ಹೀಗೆ ಹೇಳಿದವರೆಲ್ಲ ಆರೆಸ್ಸೆಸ್‌ಗೆ ಶರಣಾಗಿದ್ದಾರೆ ಎಂದರು. ಹಾಗಾದರೆ, ಬಿಜೆಪಿ ಹೆಸರು ತೆಗೆದುಬಿಟ್ಟು ಆರೆಸ್ಸೆಸ್‌ ಅನ್ನೇ ಪಕ್ಷ ಮಾಡಿಕೊಂಡು ಬಿಡಿ ಎಂದು ಜಮೀರ್‌ ಅಹಮದ್‌ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪ ಅವರು, ಮುಸ್ಲಿಂ ಹಾಗೂ ಕ್ರಿಶ್ಚಿಯನ್ನರು ಆರೆಸ್ಸೆಸ್‌ಗೆ ಸೇರುವ ದಿನ ದೂರವಿಲ್ಲ ಎಂದರು. ಇದಕ್ಕೆ ಕೆ.ಜೆ. ಜಾರ್ಜ್‌ ಆಕ್ಷೇಪ ವ್ಯಕ್ತಪಡಿಸಿ, ಕ್ರಿಶ್ಚಿಯನ್ನರು ಆರೆಸ್ಸೆಸ್‌ಗೆ ಸೇರುತ್ತಾರೆ ಎಂದು ಹೇಳಲು ಈಶ್ವರಪ್ಪ ಯಾರು ಎಂದರು. ಅಯ್ಯೋ ಅದು ನನ್ನ ಭರವಸೆ ಎಂದು ಈಶ್ವರಪ್ಪ ಹೇಳಿದರು.

Advertisement

ಸಂವಿಧಾನ ಸುಟ್ಟವರು ನೀವು :

ಪ್ರಿಯಾಂಕ್‌ ಖರ್ಗೆ ಮಾತನಾಡಿ, ಆರೆಸ್ಸೆಸ್‌ ರಾಷ್ಟ್ರೀಯ ಸ್ವಯಂ ಸೇವಾ ಸಂಘಟನೆ ಎಂದು ಹೇಳುತ್ತೀರಿ. ಇಲ್ಲಿ ಸಂವಿಧಾನದ ಬಗ್ಗೆ ಚರ್ಚೆ ಮಾಡಿಸಿ ಪುಸ್ತಕ ಮುದ್ರಣ ಮಾಡಿಸಿದ್ದೀರಿ. ದಿಲ್ಲಿಯ ರಾಮಲೀಲಾ ಮೈದಾನದಲ್ಲಿ ಸಂವಿಧಾನವನ್ನು ಸುಟ್ಟುವರು, ಮನುಸ್ಮತಿ ಪ್ರತಿಪಾದಿಸಿದವರು ಆರೆಸ್ಸೆಸ್‌ನವರು ಎಂದು ಟೀಕಿಸಿದರು. ಇದಕ್ಕೆ ಸ್ಪೀಕರ್‌ ಆಕ್ಷೇಪ ವ್ಯಕ್ತಪಡಿಸಿ, ವಿಷಯ ಎಲ್ಲೆಲ್ಲೋ ಹೋಗುತ್ತಿದೆ ಎಂದು ಸದನ ಭೋಜನ ವಿರಾಮಕ್ಕಾಗಿ ಮುಂದೂಡಿದರು.

ಪೆದ್‌ಪೆದ್ದಾಗಿ ಮಾತನಾಡುವ ಗೃಹ ಸಚಿವ :

ಗೃಹ ಸಚಿವರ ಆರಗ ಜ್ಞಾನೇಂದ್ರ ಅವರು ಪೆದ್‌ ಪೆದ್ದಾಗಿ ಮಾತಾಡ್ತಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ವಿಪಕ್ಷದವರು ನನ್ನನ್ನೇ ರೇಪ್‌ ಮಾಡ್ತಿದ್ದಾರೆ. ಆ ಹುಡುಗಿ ಅಷ್ಟು ಹೊತ್ತಲ್ಲಿ ಯಾಕೆ ಹೋಗಬೇಕಿತ್ತು ಎಂದರು. ಚಿಕ್ಕಮಗಳೂರಿನಲ್ಲಿ ಪೊಲೀಸರ ಬಗ್ಗೆ ಲಂಚ ತಿಂದು ನಾಯಿಗಳಂತೆ ಬಿದ್ದಿರುತ್ತಾರೆ ಎಂದರು. ಮತ್ತೂಂದು ಸಂದರ್ಭ ಗೃಹ ಇಲಾಖೆ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ ಎಂದರು ಎಂದು ಸಿದ್ದರಾಮಯ್ಯ ಕಾಲೆಳೆದರು. ಈ ನಡುವೆ ಈಶ್ವರಪ್ಪ ಮತ್ತು ಜಮೀರ್‌ ಕೆಲಹೊತ್ತು ವಾಕ್ಸಮರ ನಡೆಸಿದರು.

ಅಶೋಕ್‌ ಮೇಲೆ ಡಬ್ಬಲ್‌ ಪ್ರೀತಿ :

ರಾಜಕೀಯ ಬೇರೆ ವೈಯಕ್ತಿಕ ಸಂಬಂಧ ಬೇರೆ. ರಾಜಕಾರಣದಲ್ಲಿ ಭಿನ್ನಾಭಿಪ್ರಾಯ ಇರಬಹುದು. ಈಶ್ವರಪ್ಪ ಮೇಲೆ ನನಗೆ ಪ್ರೀತಿ ಇದೆ. ಅಶೋಕ್‌ ಮೇಲೆ ಡಬ್ಬಲ್‌ ಪ್ರೀತಿಯಿದೆ ಎಂದು ಸಿದ್ದರಾಮಯ್ಯ ಹೇಳಿದರು. ಅದಕ್ಕೆ ಈಶ್ವರಪ್ಪ ಅವರು, ಇದು ಸುಳ್ಳು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next