ತಿರುವನಂತಪುರ: ಶಮರಿಮಲೆ ದೇಗುಲದೊಳಗೆ 10 ರಿಂದ 50 ವರ್ಷದೊಳಗಿನ ಮಹಿಳೆಯರ ಪ್ರವೇಶಕ್ಕೆ ತಡೆ ಒಡ್ಡಿದ್ದು ಆರ್‌ಎಸ್‌ಎಸ್ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಆಪಾದನೆ ಮಾಡಿದ್ದಾರೆ.
ಎಎನ್‌ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಸಿಎಂ ದೇಗುಲದ ಆವರಣದಲ್ಲಿ ಪ್ರತಿಭಟನೆಗಳು ಮತ್ತು ಆತಂಕದ ಸ್ಥಿತಿ ನಿರ್ಮಾಣ ಮಾಡಿದ್ದೆ ಆರ್‌ಎಸ್‌ಎಸ್ ಎಂದು ಅವರು ಕಿಡಿ ಕಾರಿದ್ದಾರೆ.
ಕೇರಳ ಸರ್ಕಾರ ಸುಪ್ರೀಂ ಕೋರ್ಟ್ ಆದೇಶ ಪಾಲಿಸಲು ಎಲ್ಲಾ ರೀತಿಯಲ್ಲಿ ಸಿದ್ದವಿತ್ತುಆದರೆ ಆರ್‌ಎಸ್‌ಎಸ್ ದೇಗುಲದ ಪ್ರಾಂಗಣವನ್ನು ರಣಾಂಗಣವನ್ನಾಗಿ ಪರಿವರ್ತನೆ ಮಾಡಿತು ಎಂದಿದ್ದಾರೆ.
ಸರ್ಕಾರ ಎಲ್ಲಾ ಭದ್ರತಾ ವ್ಯವಸ್ಥೆಯನ್ನು ಮಾಡಿತ್ತು, ಸರ್ಕಾರವಾಗಲಿ, ಪೊಲೀಸರಾಗಲಿ ಮಹಿಳೆಯರನ್ನು ತಡೆಯಲಿಲ್ಲ ಎಂದರು.
ಕೇರಳದಲ್ಲಿ ಇದೇ ಮೊದಲ ಬಾರಿಗೆ ಮಾಧ್ಯಮಗಳ ಮೇಲೆ ದಾಳಿ ಮಾಡಲಾಗಿದೆ ಎಂದ ಅವರು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸರ್ಕಾರ ವಿಫಲವಾಗಿಲ್ಲ ಎಂದರು.