Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಜನ, ರಾಜಕೀಯ ನಾಯಕರು ಬಹಳ ವಿಶ್ವಾಸ ಇಟ್ಟುಕೊಂಡು ಬಂದಿದ್ದಾರೆ. ಯಡಿಯೂರಪ್ಪ ಈಗಿನ ಪರಿಸ್ಥಿತಿಯಲ್ಲಿ ರಾಜ್ಯದ ಹಿತಕ್ಕಾಗಿ ದೆಹಲಿ ನಾಯಕರ ಮಾತು ಕೇಳಿ ಕೆಳಗಿಳಿಯುತ್ತೇನೆ ಎಂದಿರುವುದನ್ನು ನಾನು ಸ್ವಾಗತ ಮಾಡುವೆ ಎಂದಿದ್ದಾರೆ.
Related Articles
Advertisement
ಕ್ಯಾಪ್ಟನ್ ಬದಲಾಗುತ್ತಿದ್ದಾರೆ ಆಟಗಾರರು ಬದಲಾಗಬೇಕು. ಹೊಸ ಕ್ಯಾಪ್ಟನ್ ತನಗೆ ಬೇಕಾದ ಆಟಗಾರರನ್ನು ಅವರೇ ಆಯ್ಕೆ ಮಾಡಿಕೊಳ್ಳುತ್ತಾರೆ. ದೊಡ್ಡ ಬುದ್ದಿವಂತಿಕೆ, ಎಲ್ಲರನ್ನೂ ಪ್ರೀತಿಸುವ, ಸಾಮಾನ್ಯ ಜ್ಞಾನ ಇರುವ, ಅಧಿಕಾರಿಗಳಿಗೆ ಅಂಕುಶ ಹಾಕುವವರು, ರಾಜ್ಯದ ಅಭಿವೃದ್ಧಿ ಬಗ್ಗೆ ಗಮನಹರಿಸುವ ನಾಯಕ ಬೇಕು. ಸದ್ಯ ಪರಿಸ್ಥಿತಿ ಕ್ಲಿಷ್ಟಕರವಾಗಿದೆ. ಇದೆಲ್ಲವನ್ನೂ ನಿಭಾಯಿಸುವ ನಾಯಕ ಬೇಕು ಎಂದರು.
ಪರ್ಯಾಯ ನಾಯಕರು ಇದ್ದಾರೆ ಎನ್ನುವುದು ಬಹಳ ದೊಡ್ಡ ಮಾತು. ಈಗ ಎಲ್ಲರನ್ನೂ ಜೊತೆಗೆ ಸೇರಿಸಿಕೊಂಡು ಹೋಗುವ ನಾಯಕ ಬೇಕು. ಜಾತಿ ರಾಜಕಾರಣ ಇದ್ದೇ ಇದೆ. ಸಿದ್ದರಾಮಯ್ಯ ಕುರುಬ ಸಮುದಾಯದಿಂದ ಮೇಲೆ ಬಂದಿದ್ದಾರೆ. ದೇವೇಗೌಡರು ಒಕ್ಕಲಿಗ ಸಮುದಾಯದಿಂದ ಮೇಲೆ ಬಂದಂತೆ ಯಡಿಯೂರಪ್ಪ ಬಲಿಷ್ಠ ಸಮುದಾಯದಿಂದ ಮೇಲೆ ಬಂದಿದ್ದಾರೆ. ಈ ಬಾರಿ ಮುಖ್ಯಮಂತ್ರಿ ಮಾಡುವಾಗ ವೀರಶೈವ ಸಮುದಾಯಕ್ಕೆ ಮೊದಲ ಆದ್ಯತೆ ಕೊಡಬೇಕು. ವೀರಶೈವರಲ್ಲೂ ಪಂಚಮಸಾಲಿ ಲಿಂಗಾಯತರನ್ನು ಪರಿಗಣಿಸುವುದು ಒಳ್ಳೆಯದು ಎಂದು ವಿಶ್ವನಾಥ್ ಹೇಳಿದರು.
ಇದನ್ನೂ ಓದಿ: ಯಾವಾಗ ಕೇಳುತ್ತಾರೋ ಆಗ ರಾಜೀನಾಮೆ ಕೊಟ್ಟು ಹೋಗುತ್ತೇನೆ: ನಾಯಕತ್ವ ಬದಲಾವಣೆ ವಿಚಾರಕ್ಕೆ ಸಿಎಂ
ರಾಜ್ಯದಲ್ಲಿ ಇಡೀ ರಾಜ್ಯದ ಜನರನ್ನು ಮ್ಯಾನೇಜ್ ಮಾಡುವ ಸಾಮಾನ್ಯ ಜ್ಞಾನ ಇರುವವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕು. ಅಂತಹ ನಾಯಕರಲ್ಲಿ ಮುರುಗೇಶ್ ನಿರಾಣಿ ಇದ್ದಾರೆ. ನೇರ ಮಾತುಗಳನ್ನು ಆಡುವ ಬಸವನಗೌಡ ಪಾಟೀಲ್ ಯತ್ನಾಳ್ ಇದ್ದಾರೆ. ಅಂತಹವರಿಗೆ ಅವಕಾಶ ಕೊಡಬೇಕು ಎಂದು ವಿಶ್ವನಾಥ್ ಹೇಳಿದರು.
ಅಧಿಕಾರಿಗಳ ತಪ್ಪಿಲ್ಲ: ಮೈಸೂರು ಜಿಲ್ಲೆಯಲ್ಲಿ ಅಧಿಕಾರಿಗಳ ವರ್ಗಾವಣೆ ವಿಚಾರವಾಗಿ ಮಾತನಾಡಿ, ಈ ಪರಿಸ್ಥಿತಿಗೆ ಅವರಿಬ್ಬರು ಕಾರಣರಲ್ಲ. ನಾವು ರಾಜಕಾರಣಿಗಳೇ ಕಾರಣ. ಇಬ್ಬರು ಕಠಿಣ ಅಧಿಕಾರಿಗಳು, ದಕ್ಷ ಅಧಿಕಾರಿಗಳು. ಸರ್ಕಾರ ಮೃದವಾಗಿ ಸಮಸ್ಯೆ ಬಗೆಹರಿಸಿದೆ. ಯಡಿಯೂರಪ್ಪ ಅವರ ನಿರ್ಧಾರ ಸೂಕ್ತ ಸಮಯದ್ದಾಗಿದೆ ಎಂದರು.