ಹೊಸದಿಲ್ಲಿ : ಬ್ರಿಟನ್‌ನಲ್ಲಿ ಮಾಡಿದ ತನ್ನ ಭಾಷಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು (ಆರ್‌ಎಸ್‌ಎಸ್) ಕಟುವಾಗಿ ಟೀಕಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಇದೀಗ ಆರ್‌ಎಸ್‌ಎಸ್ ದಿಲ್ಲಿಯಲ್ಲಿ ತಾನು ಏರ್ಪಡಿಸಲಿರುವ ಕಾರ್ಯಕ್ರಮಕ್ಕೆ ಆಹ್ವಾನಿಸುವ ಸಾಧ್ಯತೆ ಇದೆ.
ಮುಂದಿನ ತಿಂಗಳು ಸೆ.17ರಿಂದ 19ರ ವರೆಗೆ ಆರ್‌ಎಸ್‌ಎಸ್ ದಿಲ್ಲಿಯಲ್ಲಿ ಮೂರು ದಿನಗಳ ಕಾಲ “ಭಾರತದ ಭವಿಷ್ಯ : ಆರ್ ಎಸ್ ಎಸ್ ದೃಷ್ಟಿಕೋನ’ ಎಂಬ ವಿಚಾರವಾಗಿ ಉಪನ್ಯಾಸ ಸರಣಿ ಕಾರ್ಯಕ್ರಮ ಏರ್ಪಡಿಸಿದೆ.
ಮೂಲಗಳ ಪ್ರಕಾರ ರಾಹುಲ್ ಗಾಂಧಿ ಅವರಿಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಆಹ್ವಾನಿಸಲಾಗುತ್ತದೆ; ಇದೇ ರೀತಿ ಸಿಪಿಎಂ ನಾಯಕ ಸೀತಾರಾಮ್ ಯೆಚೂರಿ ಅವರಿಗೆ ಆಹ್ವಾನ ಕಳುಹಿಸಲಾಗುತ್ತದೆ ಎಂದು ತಿಳಿದು ಬಂದಿದೆ.