Advertisement

Kochi; ಆರೆಸ್ಸೆಸ್‌ ನಾಯಕನ ಕೊಲೆ ಕೇಸು: 17 ಪಿಎಫ್ಐ ಸದಸ್ಯರಿಗೆ ಕೇರಳ ಹೈಕೋರ್ಟ್‌ ಜಾಮೀನು

10:21 PM Jun 25, 2024 | Team Udayavani |

ತಿರುವನಂತಪುರ: ಆರ್‌ಎಸ್‌ಎಸ್‌ ನಾಯಕ ಶ್ರೀನಿವಾಸನ್‌ ಹತ್ಯೆ ಹಾಗೂ ಪಾಪ್ಯುಲರ್‌ ಫ್ರಂಟ್‌ ಆಫ್ ಇಂಡಿಯಾ (ಪಿಎಫ್ಐ) ನಿಷೇಧ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ದಾಖಲಿಸಿದ್ದ 2 ಪ್ರಕರಣಗಳಲ್ಲಿ 17 ಪಿಎಫ್ಐ ಕಾರ್ಯಕರ್ತರಿಗೆ ಕೇರಳ ಹೈಕೋರ್ಟ್‌ ಮಂಗಳವಾರ ಜಾಮೀನು ನೀಡಿದೆ.

Advertisement

2022ರ ಸೆ.28ರಂದು ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸಿದ್ದಕ್ಕಾಗಿ ಪಿಎಫ್ಐ ಅನ್ನು ನಿಷೇಧಿಸಲಾಗಿದ್ದು, ಅದರ 65 ಕಾರ್ಯಕರ್ತರ ವಿರುದ್ಧ ಎನ್‌ಐಎ ಕೇಸು ದಾಖಲಿಸಿತ್ತು. ಈ ಪೈಕಿ 6 ಆರೋಪಿಗಳು ಪಾಲಕ್ಕಾಡ್‌ನ‌ಲ್ಲಿ  ನಡೆದ ಆರ್‌ಎಸ್‌ಎಸ್‌ ನಾಯಕ ಶ್ರೀನಿವಾಸನ್‌ ಹತ್ಯೆಯಲ್ಲೂ ಭಾಗಿಯಾಗಿದ್ದ ಹಿನ್ನೆಲೆಯಲ್ಲಿ ಎರಡೂ ಪ್ರಕರಣಗಳ ಚಾರ್ಜ್‌ಶೀಟ್‌ಗಳನ್ನು ಎನ್‌ಐಎ ವಿಲೀನಗೊಳಿಸಿತ್ತು.

ಇದೀಗ ಪ್ರಕರಣದ 26 ಆರೋಪಿಗಳು ಜಾಮೀನು ಕೋರಿ ಹೈಕೋರ್ಟ್‌ ಮೊರೆ ಹೋಗಿದ್ದು, ನ್ಯಾಯಮೂರ್ತಿ ಎ.ಕೆ.ಜಯಶಂಕರನ್‌ ನಂಬಿಯಾರ್‌ ಹಾಗೂ ನ್ಯಾ.ಶ್ಯಾಮ್‌ಕುಮಾರ್‌ ಅವರ ವಿಭಾಗೀಯ ನ್ಯಾಯಪೀಠವು 17 ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ನೀಡಿದೆ. 9 ಆರೋಪಿಗಳ ಅರ್ಜಿಯನ್ನು ತಿರಸ್ಕರಿಸಿದೆ.

ಆರೋಪಿಗಳು ತಮ್ಮ ಮೊಬೈಲ್‌ ಫೋನ್‌ ಸಂಖ್ಯೆ ಹಾಗೂ ಅದರ ಜಿಪಿಎಸ್‌ ಲೊಕೇಷನ್‌ ಅನ್ನು ತನಿಖಾಧಿಕಾರಿಗಳೊಂದಿಗೆ ಹಂಚಿಕೊಳ್ಳಬೇಕು, ಕೇರಳ ಬಿಟ್ಟು ತೆರಳಬಾರದು, ಪಾಸ್‌ಪೋರ್ಟ್‌ ಸರೆಂಡರ್‌ ಮಾಡಬೇಕು, ಮೊಬೈಲ್‌ ಸದಾ ಚಾರ್ಜ್‌ನಲ್ಲೇ ಇರಬೇಕು ಎಂಬೆಲ್ಲ ಷರತ್ತುಗಳನ್ನು ವಿಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next