Advertisement

ಕಲ್ಲೆಸೆತ ನಿಯಂತ್ರಿಸಿದ ಕೇಂದ್ರ ಸರಕಾರಕ್ಕೆ ಆರೆಸ್ಸೆಸ್‌ ಶ್ಲಾಘನೆ

06:45 AM Sep 02, 2017 | Team Udayavani |

ಬೃಂದಾವನ: ಜಮ್ಮು ಮತ್ತು ಕಾಶ್ಮೀರದಲ್ಲಿ ಕಲ್ಲೆಸೆತಗಾರರ ನಿಯಂತ್ರಣಕ್ಕೆ ಕೇಂದ್ರ ಸರಕಾರ ಕೈಗೊಂಡಿರುವ ಕ್ರಮಗಳ ಕುರಿತು ಆರ್‌ಎಸ್‌ಎಸ್‌ ಮುಖಂಡರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಸಂಘ ಪರಿವಾರದ ಸಭೆಯಲ್ಲಿ ಈ ಮೆಚ್ಚುಗೆ ವ್ಯಕ್ತವಾಗಿದೆ.

Advertisement

ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಸೇರಿ ಸಂಘ ಪರಿವಾರದ ಪ್ರಮುಖರು ಹಾಗೂ ಸಹ ಸಂಘಟನೆಗಳು ಪಾಲ್ಗೊಂಡಿರುವ ಸಭೆ 3 ದಿನ ನಡೆಯಲಿದ್ದು, ಮೊದಲ ದಿನ ಜಮ್ಮು ಕಾಶ್ಮೀರದ ಸುರಕ್ಷತೆ ಕುರಿತು ಸುದೀರ್ಘ‌ ಚರ್ಚೆ ನಡೆದಿದೆ. ಸಭೆ ವೇಳೆ ಆರೆಸ್ಸೆಸ್‌ ಹಿರಿಯ ಕಾರ್ಯಕರ್ತ ಅನಿಲ್‌ ಕುಮಾರ್‌, ಜಮ್ಮು ಕಾಶ್ಮೀರದಲ್ಲಿನ ಸುರಕ್ಷತೆ ಹಾಗೂ ಕಲ್ಲೆಸೆತಗಾರರ ನಿಯಂತ್ರಣ ಕುರಿತು ಮಾತನಾಡಿದ್ದಾರೆ. “ಕಣಿವೆ ರಾಜ್ಯದ‌ಲ್ಲಿ ನಿರಂತರವಾಗಿ ನಡೆಯುತ್ತಿದ್ದ ಕಲ್ಲೆಸೆತಗಾರರ ಹಾವಳಿ ಮತ್ತು ಉಗ್ರರ ದಾಳಿಗೆ ಇತ್ತೀಚಿನ ದಿನಗಳಲ್ಲಿ ಕಡಿವಾಣ ಬಿದ್ದಿದೆ. ಈ ನಿಟ್ಟಿನಲ್ಲಿ ಕೇಂದ್ರದ ಕ್ರಮ ಅಭಿನಂದನಾರ್ಹ,’ ಎಂದಿದ್ದಾರೆ ಎಂದು ಸಂಘದ ಮೂಲಗಳಿಂದ ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next