ವಿಜಯಪುರ: ಕರ್ನಾಟಕದಲ್ಲಿ ಮದರಸಾಗಳ ಸಮೀಕ್ಷೆ ನಡೆಸಲು ಮುಂದಾಗಿರುವ ಬಿಜೆಪಿ ಸರ್ಕಾರವು ಆರ್ ಎಸ್ಎಸ್ ಶಿಶುವಿಹಾರ ಕೇಂದ್ರಗಳ ಸಮೀಕ್ಷೆಯನ್ನೂ ಮಾಡಲಿ ಎಂದು ಎಐಎಂಐಎಂ ಪಕ್ಷದ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಆಗ್ರಹಿಸಿದರು.
ಮಂಗಳವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಶಿಕ್ಷಣ ಇಲಾಖೆ ಅಧೀನದಲ್ಲಿ ಯುಟಿಐಎಸ್ ಸಿ ಘಟಕವಿದ್ದು, ಅಲ್ಲಿ ಇಡೀ ದೇಶದ ಶಾಲೆಗಳ ಪಟ್ಡಿಯೇ ಇದೆ. ಕೇವಲ ಒಂದು ನಿರ್ದಿಷ್ಟ ಸಮುದಾಯ, ಧರ್ಮದ ವಿರುದ್ಧವೇ ಸಮೀಕ್ಷೆ ಮಾಡುವುದು ಯಾಕೆ ಎಂದು ಆಕ್ಷೇಪಿಸಿದ ಓವೈಸಿ, ಆರ್ ಎಸ್ಎಸ್ ಶಿಶುವಿಹಾರ, ಮಿಷನರಿ, ಖಾಸಗಿ ಶಾಲೆಗಳ ಸಮೀಕ್ಷೆಯನ್ನೂ ಮಾಡಲಿ ಎಂದು ಆಗ್ರಹಿಸಿದರು.
ಇದನ್ನೂ ಓದಿ:ಅರ್ಧ ಶತಮಾನ ಕಾಲ ಸ್ನಾನ ಮಾಡಿರದ ‘ವಿಶ್ವದ ಅತ್ಯಂತ ಕೊಳಕು ಮನುಷ್ಯ’ ನಿಧನ
ಜೊತೆಗೆ ಸರ್ಕಾರಿ ಬಾಲಕಿಯರ ಶಾಲೆಗಳಲ್ಲಿ ನೀರು, ಶೌಚಾಲಯ ಸೇರಿದಂತೆ ಮೂಲಭೂತ ಸೌಲಭ್ಯ ಇರುವ ಕುರಿತೂ ಸಮೀಕ್ಷೆ ಮಾಡಲಿ ಎಂದು ಎಂದು ಆಗ್ರಹಿಸಿದರು.
ಹಲಾಲ್ ಬಗ್ಗೆ ಮಾನಾಡುವ ಮೂಲಕ ಬಿಜೆಪಿ ತನ್ನ ಭ್ರಷ್ಟಾಚಾರದ ಹಾದಿಯ ಮೂಲಕ ಕಮಿಷನ್ ಮಾಡಿಕೊಳ್ಳುತ್ತಿದೆ ಎಂದು ವಾಗ್ದಾಳಿ ನಡೆಸಿದ ಓವೈಸಿ, ಹಿಜಾಬ್ ವಿಷಯವಾಗಿ ನಡೆಸಿದ ವರ್ತನೆಗೂ ಆ ಪಕ್ಷಕ್ಕೆ ಸೂಕ್ತ ಉತ್ತರ ಸಿಗಲಿದೆ ಎಂದು ಎಚ್ಚರಿಸಿದರು.