Advertisement

ಜಗತ್ತಿಗೇ ಭಾರತ “ಮಾದರಿ’ಯಾಗಬೇಕೆಂಬುದು ಆರೆಸ್ಸೆಸ್‌ ಗುರಿ: ಭಾಗವತ್‌

08:49 PM Aug 21, 2022 | Team Udayavani |

ನವದೆಹಲಿ:“ಸಮಾಜವನ್ನು ಜಾಗೃತಗೊಳಿಸುವ ಮತ್ತು ಒಂದುಗೂಡಿಸುವ ಕೆಲಸವನ್ನು ಆರೆಸ್ಸೆಸ್‌ ಮಾಡುತ್ತಿದ್ದು, ಆ ಮೂಲಕ ಭಾರತವನ್ನು ಇಡೀ ಜಗತ್ತಿಗೆ “ಮಾದರಿ’ಯನ್ನಾಗಿ ಮಾಡಲಾಗುತ್ತಿದೆ’ ಎಂದು ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದ್ದಾರೆ.

Advertisement

ಆರ್‌ಎಸ್‌ಎಸ್‌ನ ದೆಹಲಿ ಘಟಕವು ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಭಾನುವಾರ ಮಾತನಾಡಿದ ಅವರು, “ಜನರು ಒಬ್ಬ ವ್ಯಕ್ತಿಯಾಗಿ ಬರದೇ, ಒಂದು ಸಮುದಾಯವಾಗಿ ಮುಂದೆ ಬಂದು ಸಮಾಜದ ಸೇವೆಗೆ ಪಣ ತೊಡಬೇಕು ಎಂದು ಕರೆ ನೀಡಿದ್ದಾರೆ.

“ಸಂಘವು ಸಮಾಜವನ್ನು ಜಾಗೃತಗೊಳಿಸುವ, ಎಲ್ಲರನ್ನೂ ಒಂದುಗೂಡಿಸುವ ಕೆಲಸ ಮಾಡುತ್ತಿದೆ. ಹಲವು ವ್ಯಕ್ತಿಗಳು, ಹಲವು ವಲಯಗಳು ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಮಾಡಿದ್ದಾರೆ. ಆದರೆ, ಒಂದು ಸಮಾಜವಾಗಿ ಹೊರಹೊಮ್ಮಲು ನಮಗೆ ಸಾಕಷ್ಟು ಸಮಯ ಬೇಕಾಯಿತು. ಒಬ್ಬ ವ್ಯಕ್ತಿಯಾಗಿ ಯೋಚಿಸದೇ, ಒಂದು ಸಮಾಜವಾಗಿ ಯೋಚಿಸುವ ಗುಣ ಭಾರತೀಯರ ಡಿಎನ್‌ಎಯಲ್ಲೇ ಬಂದಿದೆ. ಅದಕ್ಕೆ ನಾವು ಇನ್ನಷ್ಟು ಉತ್ತೇಜನ ನೀಡಬೇಕು. ಕ್ಷೇಮಾಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳುವಾಗ “ನಾನು, ನನ್ನದು’ ಎನ್ನುವ ಬದಲು “ನಾವು, ನಮ್ಮದು’ ಎಂಬ ಭಾವನೆ ಮೂಡಬೇಕು’ ಎಂದೂ ಭಾಗವತ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next