Advertisement

ಆರ್‌ಎಸ್‌ಎಸ್‌ ಹಿಂದೂಗಳಿಗೆ ಸೀಮಿತವಲ್ಲ

07:00 AM Jun 08, 2018 | Team Udayavani |

ಬೆಂಗಳೂರು: ಆರ್‌ಎಸ್‌ಎಸ್‌ ಸಂಘಟನೆ ಹಿಂದುಗಳಿಗಷ್ಟೇ ಸೀಮಿತವಲ್ಲ, ಬದಲಿಗೆ ಇಡೀ ಸಮಾಜಕ್ಕೆ ಸೀಮಿತವಾದುದು ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಸಿ.ಕೆ.ಜಾಫ‌ರ್‌ ಷರೀಫ್ ಹೇಳಿದ್ದಾರೆ.

Advertisement

ನಾಗ್ಪುರದಲ್ಲಿ ನಡೆದ ಆರ್‌ಎಸ್‌ಎಸ್‌ ಕಾರ್ಯಕ್ರಮದಲ್ಲಿ ಪ್ರಣಬ್‌ ಮುಖರ್ಜಿ ಮತ್ತು ಮೋಹನ್‌ ಭಾಗವತ್‌ ಭಾಷಣದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮೋಹನ್‌ ಭಾಗವತ್‌ ಅವರು ನಮ್ಮ ಅನುಮಾನಗಳನ್ನು ಬಗೆಹರಿಸಿದ್ದಾರೆ. ಮೊದಲಿಗೆ ನಮಗೆ ಆರ್‌ಎಸ್‌ಎಸ್‌ ಮೇಲಿದ್ದ ಅನುಮಾನಗಳಿಗೆ ಸ್ಪಷ್ಟ ಉತ್ತರ ಸಿಕ್ಕಿದೆ. ಅಲ್ಲದೆ, ಆರ್‌ ಎಸ್‌ಎಸ್‌ ಹಿಂದೂಗಳಿಗೆ ಮಾತ್ರ ಸೀಮಿತವಲ್ಲ. ಎಲ್ಲ ಸಮುದಾಯ ಮತ್ತು ಸಮಾಜಕ್ಕೆ ಸೀಮಿತವಾಗಿದೆ ಎಂದು ತಿಳಿಸಿದರು.

ಪ್ರಣಬ್‌ ಮುಖರ್ಜಿ ಅವರು ಆರ್‌ಎಸ್‌ಎಸ್‌ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಕ್ಕೆ ಈ ಹಿಂದೆ ವಿರೋಧ ವ್ಯಕ್ತಪಡಿಸಿದ್ದ ಜಾಫ‌ರ್‌ ಷರೀಫ್, ಜಾತ್ಯತೀತ ಮೌಲ್ಯಗಳನ್ನು ಗೌರವಿಸುವ ಪ್ರಣಬ್‌ ಮುಖರ್ಜಿ ಅವರು ಅದಕ್ಕೆ ತದ್ವಿರುದಟಛಿವಾದ ಮೌಲ್ಯಗಳನ್ನು ಅಳವಡಿಸಿಕೊಂಡಿರುವ ಆರ್‌ಎಸ್‌ಎಸ್‌ ಕಚೇರಿಗೆ ಭೇಟಿ ನೀಡುತ್ತಿರುವುದು ನಮಗೆ ಆಶ್ಚರ್ಯ ಮೂಡಿಸಿದೆ ಎಂದು ಹೇಳಿದ್ದರು.ನಿರ್ಧಾರ ಮರು ಪರಿಶೀಲಿಸುವಂತೆ ಪತ್ರದ ಮೂಲಕ ಮನವಿ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next