ಬೆಂಗಳೂರು: ಆರೆಸ್ಸೆಸ್ ದೇಶ ಕಟ್ಟುವ ಸಂಘಟನೆ. ಅದು ಎಂದೂ ರಾಜಕೀಯ ಮಾಡುವುದಿಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಬುಧವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಮತ್ತು ರಾಜ್ಯಸಭೆ ವಿಪಕ್ಷ ನಾಯಕ ಎಚ್. ಡಿ. ಕುಮಾರಸ್ವಾಮಿ ಅವರು ಆರೆಸ್ಸೆಸ್ಸನ್ನು ಟೀಕಿಸುವುದು ಸರಿಯಲ್ಲ ಎಂದು ಹೇಳಿದರು.
ಆರೆಸ್ಸೆಸ್ ಒಂದು ದೇಶಭಕ್ತ ಸಂಘಟನೆ. ಸೇವೆಯೇ ಅದರ ಮೂಲಮಂತ್ರ. ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ಬಂಧಿತರಾದವರಲ್ಲಿ ಶೇ. 80ರಷ್ಟು ಮಂದಿ ಆರೆಸ್ಸೆಸ್‌ಗೆ ಸೇರಿದವರು. ಆ ಮೂಲಕ ಪ್ರಜಾಪ್ರಭುತ್ವವನ್ನು ಉಳಿಸುವಲ್ಲಿ ಮುಂಚೂಣಿಯಲ್ಲಿತ್ತು ಎಂದರು.
ಇದನ್ನೂ ಓದಿ:ಕೇಂದ್ರ ಸರಕಾರದಿಂದ ಸರ್ವಾಧಿಕಾರಿ ಧೋರಣೆ: ಖರ್ಗೆ ಆರೋಪ
ಎಚ್. ಡಿ. ಕುಮಾರಸ್ವಾಮಿ ಯಾವುದೋ ಕಲ್ಪನೆಯಲ್ಲಿದ್ದಾರೆ. ಆರೆಸ್ಸೆಸ್ ದೇಶ ಕಟ್ಟುವ ಸಂಸ್ಥೆಯಾಗಿದ್ದು, ಅದು ಎಂದೂ ರಾಜಕೀಯ ಮಾಡುವುದಿಲ್ಲ. ಯಾವುದೇ ಟೀಕೆಗೂ ಆರೆಸ್ಸೆಸ್ ಪ್ರತ್ಯುತ್ತರ ನೀಡುವುದಿಲ್ಲ. ಇದರ ಸಿದ್ಧಾಂತ, ಸೇವೆ, ದೇಶಭಕ್ತಿ ಮುಂತಾದವುಗಳ ಬಗ್ಗೆ ತಿಳಿದು ಮಾತನಾಡುವುದು ಉತ್ತಮ ಎಂದರು.