Advertisement

RSS ಬೈಠಕ್ ರದ್ದು; BJP ಭಿನ್ನಮತ ಶಮನಕ್ಕೆ ಬಿಎಸ್ ವೈ ಸರ್ಕಸ್

01:33 PM Jan 16, 2017 | Sharanya Alva |

ಬೆಂಗಳೂರು:ಬಿಜೆಪಿಯೊಳಗಿನ ಭಿನ್ನಮತ ಶಮನಕ್ಕೆ ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಜ.19ರಂದು ಸಭೆ ಕರೆದ ಹಿನ್ನೆಲೆಯಲ್ಲಿ ನಾಳೆಯ ಆರ್ಎಸ್ಎಸ್ ಬೈಠಕ್ ಅನ್ನು ರದ್ದುಗೊಳಿಸಿರುವುದಾಗಿ ಮಾಧ್ಯಮಗಳ ವರದಿ ತಿಳಿಸಿದೆ.

Advertisement

ತನ್ನ ಕಾರ್ಯವೈಖರಿ ಬಗ್ಗೆ ರಾಜ್ಯ ಬಿಜೆಪಿಯಲ್ಲಿ ಉದ್ಭವಿಸಿರುವ ಭಿನ್ನ ಮತಕ್ಕೆ ಪಕ್ಷದ ಕೆಲವು ನಿಷ್ಠಾವಂತರು ಬೆಂಬಲ ಸೂಚಿಸುತ್ತಿದ್ದಂತೆಯೇ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಎಚ್ಚೆತ್ತುಕೊಂಡಿದ್ದು, ಅಸಮಾಧಾನ ಶಮನಕ್ಕೆ ಮುಂದಾಗಿದ್ದರು. ಆ ಕಾರಣಕ್ಕಾಗಿ ಜನವರಿ 19ರಂದು ಬಿಜೆಪಿ ಕಚೇರಿಯಲ್ಲಿ ಸಭೆ ಕರೆದಿದ್ದರು. ಅತೃಪ್ತಿ ಹೊಂದಿರುವ 24 ಶಾಸಕರು ಹಾಗೂ ರಾಯಣ್ಣ ಬ್ರಿಗೇಡ್ ಗೆ ಸಂಬಂಧಿಸಿದಂತೆ ವೈಮನಸ್ಸು ಹೊಂದಿರುವ ಪಕ್ಷದ ಹಿರಿಯ ಮುಖಂಡ ಕೆಎಸ್ ಈಶ್ವರಪ್ಪನವರಿಗೂ ಯಡಿಯೂರಪ್ಪ ಆಹ್ವಾನ ನೀಡಿದ್ದರು.

ಬಿಜೆಪಿಯ ಹಿರಿಯ ಮುಖಂಡರಾದ ಬಿಎಸ್ ವೈ ಮತ್ತು ಕೆಎಸ್ ಈಶ್ವರಪ್ಪ ನಡುವಿನ ಜಗಳದಿಂದ ಮುಜುಗರಕ್ಕೀಡಾಗಿರುವ ನಿಟ್ಟಿನಲ್ಲಿ, ಭಿನ್ನಮತ ಶಮನಕ್ಕಾಗಿ ಆರ್ಎಸ್ಎಸ್ ಜನವರಿ 17ರಂದು ಬೈಠಕ್ ಕರೆದಿತ್ತು. ಸಭೆಗೆ ಆಗಮಿಸುವಂತೆ ಬಿಎಸ್ ವೈ ಮತ್ತು ಈಶ್ವರಪ್ಪಗೆ ಆಹ್ವಾನ ನೀಡಲಾಗಿತ್ತು. ಏತನ್ಮಧ್ಯೆ ಬಿಎಸ್ ಯಡಿಯೂರಪ್ಪನವರೇ ಭಿನ್ನಮತ ಶಮನಕ್ಕೆ ಜ.19ರಂದು ಸಭೆ ಕರೆದ ನಿಟ್ಟಿನಲ್ಲಿ ಆರ್ ಎಸ್ಎಸ್ ಬೈಠಕ್ ಅನ್ನು ರದ್ದುಪಡಿಸಲಾಗಿದೆ ಎಂದು ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next