Advertisement

ರಾಜಕೀಯಕ್ಕೂ, ಆರ್‌ಎಸ್‌ಎಸ್‌ಗೂ ಸಂಬಂಧವಿಲ್ಲ: ಭಾಗವತ್‌

10:08 AM Jan 19, 2020 | Team Udayavani |

ಮೊರಾದಾಬಾದ್‌: ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರೆಸ್ಸೆಸ್‌)ಕ್ಕೆ ಮತ್ತು ರಾಜಕೀಯಕ್ಕೆ ಯಾವುದೇ ಸಂಬಂಧ ಇಲ್ಲ. ದೇಶದ ನೈತಿಕ, ಸಾಂಸ್ಕೃತಿಕ ಮತ್ತು ಮಾನವೀಯ ಅಂಶಗಳ ಬಗ್ಗೆ ಮಾತ್ರ ಸಂಘಟನೆ ಕೆಲಸ ಮಾಡುತ್ತದೆ ಎಂದು ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದ್ದಾರೆ. ಶನಿವಾರ ಮೊರಾದಾಬಾದ್‌ನಲ್ಲಿ ಮಾತನಾಡಿದ ಅವರು, ಸಮಾಜದ ಎಲ್ಲಾ ವರ್ಗಗಳ ಜನರು ಆರ್‌ಎಸ್‌ಎಸ್‌ನ ಭಾಗವಾಗಿದ್ದಾರೆ ಎಂದಿದ್ದಾರೆ.

Advertisement

“60 ವರ್ಷಗಳಿಂದ ದೇಶದ ನೈತಿಕ, ಸಾಂಸ್ಕೃತಿಕ ಮತ್ತು ಮಾನವೀಯ ಅಂಶಗಳ ಬಗ್ಗೆ ಕೆಲಸ ಮಾಡುತ್ತಿದ್ದೇವೆ. ರಾಜಕೀಯಕ್ಕೂ ನಮಗೂ ಸಂಬಂಧವಿಲ್ಲ’ ಎಂದು ಹೇಳಿದ್ದಾರೆ ಭಾಗವತ್‌. ದೇಶದ 130 ಕೋಟಿ ಮಂದಿಯ ಜತೆಗೆ ಸಂಘಟನೆ ಕೆಲಸ ಮಾಡುತ್ತದೆ. ಬಿಜೆಪಿಯನ್ನು ನಿಯಂತ್ರಿಸುತ್ತೇವೆ ಎಂಬ ವಾದ ಸರಿಯಲ್ಲ ಎಂದು ಪ್ರತಿಪಾದಿಸಿದ್ದಾರೆ.

ಆರ್‌ಎಸ್‌ಎಸ್‌ನ ಶಾಖೆಗೆ ಬಾರದೇ ಇದ್ದರೂ, ರಾಷ್ಟ್ರೀಯ ಏಕತೆಯ ಬಗ್ಗೆ ಚಿಂತನೆ ಇದ್ದವರೂ ಸಂಘಟನೆಯ ಕಾರ್ಯಕರ್ತರೆಂದು ಹೇಳಿಕೊಳ್ಳಬಹುದು ಎಂದರು ಭಾಗವತ್‌.

Advertisement

Udayavani is now on Telegram. Click here to join our channel and stay updated with the latest news.

Next