Advertisement
ಎಲ್ಲಕ್ಕಿಂತ ಮೊದಲಿಗೆ, ಪ್ರಣಬ್ ಮುಖರ್ಜಿ ಅವರು ಈಗ ಕಾಂಗ್ರೆಸ್ ಪಕ್ಷದ ನಾಯಕರಾಗಿ ಉಳಿದಿಲ್ಲ. 2012ರಲ್ಲಿ ದೇಶದ ಅತ್ಯುನ್ನತ ಪದವಿಗೆ ಏರಿದಾಗಲೇ ಅವರೊಬ್ಬ ಪಕ್ಷಾತೀತ ವ್ಯಕ್ತಿ ಯಾಗಿಬಿಟ್ಟಿದ್ದರು. ಅವರ ಇಬ್ಬರು ಮಕ್ಕಳು ಕಾಂಗ್ರೆಸ್‌ನ ಸದಸ್ಯ ರೆನ್ನುವುದು ಬೇರೆ ಮಾತು. ರಾಜಕೀಯ ಮಹತ್ವಾಕಾಂಕ್ಷಿಯಾಗಿರುವ ಅವರ ಮಗಳು ಶರ್ಮಿಷ್ಠಾ, ಆರೆಸ್ಸೆಸ್ ಹಾಗೂ ಬಿಜೆಪಿಗಳ ವಿರುದ್ಧ ವಿಷಕಾರುತ್ತಿರುವ ಎಐಸಿಸಿಯ ವಕ್ತಾರರಲ್ಲೊಬ್ಬರು.
ಅವಿಭಜಿತ ಮದ್ರಾಸ್ ರಾಜ್ಯದ ಮುಖ್ಯಮಂತ್ರಿಯಾಗಲು ಒಪ್ಪಿಕೊಂಡರು(1952). ವಾಸ್ತವವಾಗಿ ಇದು ಹಿಂಬಾಗಿಲಿನ ಪ್ರವೇಶವಾಗಿತ್ತು.
Related Articles
Advertisement
ಅಂತೂ ಅತ್ಯುನ್ನತ ಮಟ್ಟದ ಸಾಂವಿಧಾನಿಕ ಹುದ್ದೆಗಳಲ್ಲಿದ್ದ ರಾಷ್ಟ್ರಪತಿಗಳು, ಉಪರಾಷ್ಟ್ರಪತಿಗಳು, ರಾಜ್ಯಪಾಲರುಗಳು, ಸರ್ವೋಚ್ಚ ನ್ಯಾಯಾಲಯ – ಉಚ್ಚ ನ್ಯಾಯಾಲಯಗಳು ಮುಖ್ಯ ನ್ಯಾಯಮೂರ್ತಿಗಳು, ಕಂಪೊಲರ್ ಹಾಗೂ ಆಡಿಟ್ ಜನರಲ್ ಗಳು ಹಾಗೂ ಚುನಾವಣಾ ಆಯುಕ್ತರ ಹುದ್ದೆಗಳಲ್ಲಿದ್ದ ಮಹನೀಯರ ಪೈಕಿ ಹೆಚ್ಚಿನವರು ತಮ್ಮ ನಿವೃತ್ತಿಯ ಬಳಿಕ ರಾಜಕೀಯ ದಿಂದ ದೂರವೇ ಉಳಿದಿದ್ದಾರೆ. ಗಮನಿಸಬೇಕಾದ ಇನ್ನೊಂದು ಅಂಶವೆಂದರೆ ಆರೆಸ್ಸೆಸ್ ಒಂದು ಅಸ್ಪೃಶ್ಯ ಸಂಘಟನೆಯಲ್ಲ; ಅದು ನಮ್ಮ ಸಾಮಾಜಿಕ ಹಾಗೂ ಸಾಂಸ್ಕೃತಿಕ ಬದುಕಿನ ಅಂಗವೇ ಆಗಿದೆ. ಎಲ್ಲೋ ಕೆಲಕಾಲ ಮಾತ್ರ ವಷ್ಟೇ ಅದನ್ನು ನಿಷೇಧಿಸಲಾಗಿತ್ತು. ಆದರೆ ಅದೆಲ್ಲ ಇಂದು ಇತಿ ಹಾಸ.
ಹೀಗೆನ್ನುವಾಗಲೇ ಇನ್ನೊಂದು ಮಾತನ್ನೂ ಇಲ್ಲಿ ಉಲ್ಲೇಖೀಸ ಬೇಕಾಗುತ್ತದೆ. ಅವಿಭಜಿತ ಕಮ್ಯುನಿಸ್ಟ್ ಪಕ್ಷದ ನಾಯಕರು 1962ರಲ್ಲಿ ಚೀನಾ ಆಕ್ರಮಣವನ್ನು ಸಮರ್ಥಿಸಿದ್ದ ಸಂದರ್ಭದಲ್ಲಿ ಆ ಪಕ್ಷವನ್ನೂ ನಿಷೇಧಿಸಲಾಗಿತ್ತು; ಅದರ ನಾಯಕರನ್ನು ಜೈಲಿಗೆ ದೂಡಲಾಗಿತ್ತು. ಮುಂದೆ ಈ ನಿಷೇಧವನ್ನು ರದ್ದು ಪಡಿಸಿದವರು ಆಗಿನ ಗೃಹ ಸಚಿವ ಗುಲ್ಜಾರಿಲಾಲ್ ನಂದಾ. ಹೀಗಿರುತ್ತ ಕಮ್ಯುನಿಸ್ಟರನ್ನು ಹಾಗೂ ಕಮ್ಯುನಿಸ್ಟ್ ಪಕ್ಷ ಜೀವನದ ವಿವಿಧ ಕ್ಷೇತ್ರಗಳಲ್ಲಿ, ವಿಶೇಷವಾಗಿ ವಿಶ್ವವಿದ್ಯಾಲಯಗಳಲ್ಲಿ ಹಾಗೂ ಕಾಲೇಜುಗಳಲ್ಲಿ, ಹಾಗೆಯೇ ಕಲೆ, ಸಂಸ್ಕೃತಿ, ಸಾಹಿತ್ಯ, ಮಾಧ್ಯಮ ಕ್ಷೇತ್ರಗಳಲ್ಲಿ ಪ್ರತಿಷ್ಠಾಪಿಸಿರುವ ವ್ಯಕ್ತಿಗಳನ್ನು ಕೂಡ ಅಸ್ಪೃಶ್ಯರೆಂದು ಪರಿಗಣಿಸಬೇಕೆ?
ಹಾಗೆ ನೋಡಿದರೆ ದೇಶದ ಬಹುತೇಕ ಭಾಗಗಳಲ್ಲಿ ಆರೆಸ್ಸೆಸ್ ಮೂಲದ ವ್ಯಕ್ತಿಗಳಿದ್ದಾರೆ. ಇವರೆಲ್ಲ ಬಹುತೇಕ ರಾಜ್ಯಗಳಲ್ಲಿ ಕೇಂದ್ರ ಸರಕಾರದ ಮೂಲಕವೇ ನೇಮಿತರಾಗಿರುವವರು. ಬಿಜೆಪಿಯ ಮೂಲಕ ಪರೋಕ್ಷವಾಗಿ ನೇಮಿಸಲ್ಪಟ್ಟ ವಿವಿಧ ಸೇವಾ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರು ದಿಲ್ಲಿಯೇ ಆಗಲಿ, ದೇಶದ ಇತರೆಡೆಗಳಲ್ಲೇ ಆಗಲಿ ಕಾಂಗ್ರೆಸ್ ಮತ್ತಿತರ ಬಿಜೆಪಿಯೇತರ ಪಕ್ಷಗಳಿಗೆ ಸೇರಿದ ವ್ಯಕ್ತಿಗಳು ಬಿಜೆಪಿಯ ಮಂತ್ರಿಗಳೊಂದಿಗೆಯೇ ವ್ಯವಹರಿಸಬೇಕಾಗುತ್ತದೆ. ಪ್ರಣಬ್ ಮುಖರ್ಜಿ ಇದುವರೆಗೂ ತಮ್ಮ ಇಂಗಿತವೇನೆಂಬು ದನ್ನು ಬಹಿರಂಗ ಪಡಿಸಿಲ್ಲ. ನಾಗ್ಪುರ ಭೇಟಿಯನ್ನೂ ರದ್ದು ಪಡಿಸಿಲ್ಲ. ನಾನೇನು ಹೇಳಬೇಕೆಂದಿದ್ದೇನೋ ಅದನ್ನು ನಾಗ್ಪುರದಲ್ಲೇ ಹೇಳುವೆ ಎನ್ನುವುದು ಅವರ ಸದ್ಯದ ನಿಲುವು. ಆರೆಸ್ಸೆಸ್‌ನ ಆಹ್ವಾನವನ್ನು ಒಪ್ಪಿಕೊಂಡಿರುವುದಕ್ಕಾಗಿ ಪ್ರಣಬ್ ಮುಖರ್ಜಿಯವರನ್ನು ಟೀಕಿಸುತ್ತಿರುವ ಕಾಂಗ್ರೆಸ್ ನಾಯಕರಲ್ಲಿ ನಮ್ಮವರೇ ಆದ ಸಿ.ಕೆ. ಜಾಫರ್ ಷರೀಫ್ ಅವರೂ ಇದ್ದಾರೆನ್ನುವುದು ಒಂದು ತಮಾಷೆಯ ಸಂಗತಿ. ಕಳೆದ ವರ್ಷವಷ್ಟೇ, (ಪ್ರಣಬ್ ಅವರ ಉತ್ತರಾಧಿಕಾರಿಯಾಗಲು ತಕ್ಕ ಅಭ್ಯರ್ಥಿಯನ್ನು ಆಯ್ಕೆ ಮಾಡ ಹೊರಟ ಸಂದರ್ಭದಲ್ಲಿ) ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಅವರನ್ನು ಮುಂದಿನ ರಾಷ್ಟ್ರಪತಿಯನ್ನಾಗಿ ನೇಮಿಸೋಣವಾಗಲಿ ಎಂದವರು ಇದೇ ಷರೀಫ್ ಸಾಹೇಬರು. ಅವರು ಇಷ್ಟು ಬೇಗ ತಮ್ಮ ಅಂದಿನ ಸಲಹೆಯನ್ನು ಮರೆತುಬಿಟ್ಟರೆ? ತಮ್ಮ ಚಿತ್ರದುರ್ಗದ ದಿನಗಳಲ್ಲಿ ಕೆಲಕಾಲ ತಾನು ಆರೆಸ್ಸೆಸ್ ಕಾರ್ಯ ಕರ್ತ ನಾಗಿದ್ದೆನೆಂಬುದು ಅವರಿಗೆ ಮರೆತುಹೋಗಿರಲಿಕ್ಕಿಲ್ಲ. ಮುಂದೆ ಅವರು ಕಾಂಗ್ರೆಸ್ ಸೇವಾದಳಕ್ಕೆ ಸೇರ್ಪಡೆಗೊಂಡರು; ಸಿ. ರಂಗರಾವ್ ಹಾಗೂ ಎನ್. ನಿಜಲಿಂಗಪ್ಪನವರಂಥ ಅಂದಿನ ಕಾಂಗ್ರೆಸ್ ನಾಯಕರ ಬೆಂಬಲಿಗರಾದರು. ಮುಂದೆ ಷರೀಫ್ ನಿಜಲಿಂಗಪ್ಪನವರ ವಿರೋಧಿಯಾಗಿ ಮಾರ್ಪಟ್ಟು ಇಂದಿರಾ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು. ಪ್ರಣಬ್ ಮುಖರ್ಜಿ ಹಿಂದೆ ಕಾಂಗ್ರೆಸ್‌ನಲ್ಲಿದ್ದಾಗ ಅವರನ್ನು ಹೇಗೆ ನಡೆಸಿಕೊಳ್ಳಲಾಯಿತೆಂಬುದನ್ನು ಆ ಪಕ್ಷ ಕೊಂಚ ನೆನಪು ಮಾಡಿಕೊಂಡು ಆ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಪ್ರಣಬ್ ಅವರಿಗೆ ಪ್ರಧಾನಿಯಾಗುವ ಯೋಗ್ಯತೆಯಿದ್ದರೂ ಅವರು ಪಕ್ಷದಲ್ಲಿ ಎರಡನೆಯ ಸ್ಥಾನಕ್ಕಿಂತ ಮುಂದೆ ಸಾಗಲು ಸಾಧ್ಯವಾಗಲೇ ಇಲ್ಲ. ಕೆಲವರಂತೂ “ಪ್ರಣಬ್ ಮುಖರ್ಜಿಯವರು ಭಾರತ ಎಂದೂ ಪಡೆಯಲಾಗದ ಓರ್ವ ಅತ್ಯುತ್ತಮ ಪ್ರಧಾನ ಮಂತ್ರಿಯಾಗಿದ್ದರು.’ ಎಂದೇ ಹೇಳುತ್ತಾರೆ. ಇಂದಿರಾಗಾಂಧಿ ಯವರು ಹತ್ಯೆಗೊಳಗಾದಾಗ ಪ್ರಣಬ್ ಅವರು ಪ್ರಧಾನಿ
ಹುದ್ದೆಯ ತೀರಾ ಸನಿಹದಲ್ಲಿದ್ದರು; ಇಂದಿರಾ ಅವರ ಉತ್ತರಾಧಿ ಕಾರಿಯಾಗಿ ಪ್ರಣಬ್ ಅವರೇ ಬರಬಹುದು ಎಂದೂ ಅಂದು ಕೊಂಡವರಿದ್ದರು. ಆದರೆ ಅಂದಿನ ರಾಷ್ಟ್ರಪತಿ ಜ್ಞಾನಿ ಜೈಲ್‌ಸಿಂಗ್ ಅವರಲ್ಲಿ ಬೇರೆಯದೇ ಆದ “ಯೋಜನೆಗಳಿದ್ದವು; ತೀರಾ ಅವಸರದಲ್ಲೆಂಬಂತೆ ಜೈಲ್‌ಸಿಂಗ್ ರಾಜೀವ್‌ಗಾಂಧಿಯವರಿಗೆ ಪ್ರಧಾನಮಂತ್ರಿಯ ಪ್ರಮಾಣವಚನವನ್ನು ಬೋಧಿಸಿದರು. ಪಂಜಾಬಿನ ಮಾಜಿ ಮುಖ್ಯಮಂತ್ರಿಯಾದ ಜೈಲ್‌ಸಿಂಗ್ ಮುಂದೆ ತಾವು ಪಡೆದ ರಾಷ್ಟ್ರದ ಅತ್ಯುನ್ನತ ಹುದ್ದೆಗೆ ಸರಿಯಾದ ವ್ಯಕ್ತಿಯಾಗಿರಲಿಲ್ಲ. ಅಂಥ ಅರ್ಹತೆ ಅವರಿಗಿರಲಿಲ್ಲ. ಮುಂದೆ 1991ರಲ್ಲಿ ರಾಜೀವ್ ಹತ್ಯೆಯಾದಾಗಲೂ ಪ್ರಣಬ್ ಅವರು ಪ್ರಧಾನಿ ಹುದ್ದೆಯಿಂದ ವಂಚಿತರಾದರು. ಆ ಪಟ್ಟ ಪಿ. ವಿ. ನರಸಿಂಹ ರಾವ್ ಅವರ ಪಾಲಾಯಿತು. ಪಿ.ವಿ.ಎನ್. ಅವರಾದರೋ ಡಾ| ಮನಮೋಹನ್ ಸಿಂಗ್ ಅವರನ್ನು ವಿತ್ತ ಸಚಿವರನ್ನಾಗಿ ಮಾಡಿಕೊಂಡು ಪ್ರಣಬ್ ಅವರನ್ನು ಯೋಜನಾ ಆಯೋಗದ ಉಪಾ ಧ್ಯಕ್ಷ ಸ್ಥಾನಕ್ಕೆ ದೂಡಿದರು. ಈಗ ಮಾಜಿ ರಾಷ್ಟ್ರಪತಿಯಾಗಿರುವ ಪ್ರಣಬ್ ಇಂದು ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣವಾಗಿ ತನ್ನ ಮುಷ್ಟಿಯಲ್ಲಿಟ್ಟುಕೊಂಡಿರುವ ಇಂದಿರಾ ಕುಟುಂಬದ ಬಗ್ಗೆ ಭ್ರಮನಿರಸನಗೊಂಡಿರಬಹುದು. ರಾಹುಲ್ ಗಾಂಧಿ ಪಕ್ಷದ ಅಧ್ಯಕ್ಷನಾಗಿ ಅದರ ಮೂಗುದಾರ ಹಿಡಿದಿರುವುದು ಪ್ರಣಬ್ ಅವರಿಗೆ ಖಂಡಿತಾ ಒಪ್ಪಿಗೆಯಾಗಿಲ್ಲ. ಹಿಂದೆ ಪಕ್ಷದ ನೇತಾರನಾಗಿದ್ದು ಮುಂದೆ ರಾಷ್ಟ್ರಪತಿ ಸ್ಥಾನ ಕ್ಕೇರಿದ ಒಬ್ಬ ವ್ಯಕ್ತಿ ಆರೆಸ್ಸೆಸ್ ಕೇಂದ್ರ ಕಚೇರಿಗೆ ಭೇಟಿ ನೀಡಲಿದ್ದಾರೆಂದರೆ, ಇದರ ಪರಿಣಾಮವಾಗಿ ಬಹುತೇಕ ತಾನು ಮುಸ್ಲಿಮರಿಂದ ದೂರವಾಗಬೇಕಾಗಿ ಬಂದೀತೆಂಬುದೇ ಕಾಂಗ್ರೆಸ್‌ನ ಮುಖ್ಯ ಚಿಂತೆ. ಕನಿಷ್ಠ ಪಕ್ಷ ಕರ್ನಾಟಕದಲ್ಲಾದರೂ ಅದು ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಸಮುದಾಯಗಳ ಓಟು ಗಳ ಮೇಲೆ ತೀವ್ರವಾಗಿ ಅವಲಂಬಿತವಾಗಿದೆ. ಆದರೆ ರಾಜ್ಯದ ಕಾಂಗ್ರೆಸ್ ನಾಯಕರಿಗೆ ಕೇಳಲೇಬೇಕಾದ ಪ್ರಶ್ನೆಯೊಂದಿದೆ. ಅದೆಂದರೆ, ಈ ಬಾರಿ ಕಾಂಗ್ರೆಸ್ ಪಕ್ಷ ಎಷ್ಟು ಮಂದಿ ಮುಸ್ಲಿಂ ಹಾಗೂ ಕ್ರೈಸ್ತರಿಗೆ ಶಾಸಕರಾಗಲು ನೆರವು ನೀಡಿದೆ ಎಂಬುದೆ ಆಗಿದೆ. 15ನೆಯ ವಿಧಾನ ಸಭೆಗೆ ಆಯ್ಕೆಯಾಗಿ ಬಂದಿರುವವರು ಕೇವಲ ಏಳು ಮಂದಿ ಮುಸ್ಲಿಂ ಹಾಗೂ ಕೇವಲ ಓರ್ವ ಕ್ರಿಶ್ಚಿಯನ್ ಅಭ್ಯರ್ಥಿ. ಅಲ್ಪ ಸಂಖ್ಯಾಕರಿಗೆ ರಾಜ್ಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನ್ಯಾಯಯುತವಾಗಿ ಪ್ರಾತಿನಿಧ್ಯ ದೊರೆಯುತ್ತಿದೆ ಎನ್ನುವುದಾದರೆ ಅದು ಈ ರೀತಿಯಲ್ಲೆ? ಈ ವಿಷಯದಲ್ಲಿ ದೊಡ್ಡ ಪ್ರಮಾಣದಲ್ಲಿ ಪಾಪವೆಸಗಿರುವುದು, ತನ್ನ ಹೆಸರಿನಲ್ಲೇ ಜಾತ್ಯತೀತ ಎಂದು ಘೋಷಿಸಿಕೊಂಡಿರುವ ಜೆಡಿಎಸ್! ನೂತನ ವಿಧಾನಸಭೆಗೆ ಅದರ ಟಿಕೆಟ್ ಮೂಲಕ ಒಬ್ಬನೇ ಒಬ್ಬ ಮುಸ್ಲಿಂ ಅಥವಾ ಕ್ರಿಶ್ಚಿಯನ್ ಅಭ್ಯರ್ಥಿ ಆಯ್ಕೆಯಾಗಿಲ್ಲ. ದಿಲ್ಲಿಯ ಕಾಂಗ್ರೆಸ್ ನಾಯಕರು ಪ್ರಣಬ್ ಮುಖರ್ಜಿ ಅವರನ್ನು ಕಾಂಗ್ರೆಸಿಗ ಎಂದು ಇನ್ನೂ ಪರಿಗಣಿಸಿರುವುದೇ ತುಂಬ ತಮಾಷೆಯಾಗಿದೆ. ಒಬ್ಬ ಮಾಜಿ ರಾಷ್ಟ್ರಪತಿಯಾಗಿ ಅವರು ಪಕ್ಷಗಳ ಕಕ್ಷೆಯಿಂದ, ಪಕ್ಷ ರಾಜಕೀ ಯದಿಂದ ದೂರವಾಗಿ ತುಂಬ ಎತ್ತರದಲ್ಲಿ ನಿಂತಿರುವ ವ್ಯಕ್ತಿ. ಆರೆಸ್ಸೆಸ್ ಹಾಗೂ (ಬಿಜೆಪಿಯಲ್ಲದಿದ್ದರೂ) ಶಿವಸೇನೆಯಂಥ ಹಿಂದೂ ಪರ ನಿಲುವಿನ ಪಕ್ಷಗಳ ಬಗೆಗಿನ ಕಾಂಗ್ರೆಸ್ ಪಕ್ಷದ ಅಲರ್ಜಿ ಕಳೆದ ಅನೇಕ ವರ್ಷಗಳಿಂದೀಚೆಗೆ ಹೆಚ್ಚುತ್ತಲೇ ಬಂದಿದೆ. ಆದರೆ ಅವು ಎಲ್ಲ ಅಡ್ಡಿ ನಿಡೂರಗಳನ್ನು ಸರಿಸಿ ಬಲವನ್ನು ಹೆಚ್ಚಿಸಿಕೊ ಳ್ಳುತ್ತಲೇ ಬಂದಿವೆ. ಸ್ವಾತಂತ್ರ ದೊರೆತ ಬೆನ್ನಿಗೇ ಅಸ್ತಿತ್ವಕ್ಕೆ ಬಂದ ನೆಹರೂ ನೇತೃತ್ವದ ಪ್ರಥಮ ಸರಕಾರದಲ್ಲಿ ಹಿಂದೂ ಮಹಾ ಸಭಾದ ನೇತಾರ ಶ್ಯಾಮಾಪ್ರಸಾದ್ ಮುಖರ್ಜಿಯವರಿದ್ದರು! ಹಿಂದುತ್ವ ನಿಲುವಿನ ಪಕ್ಷಗಳು ಚಿಕ್ಕಪುಟ್ಟ ಸಂಘಟನೆಗಳಾಗಿದ್ದುದರಿಂದ ಆ ಕಾಲದಲ್ಲಿ ಕಾಂಗ್ರೆಸ್‌ಗೆ ಅವುಗಳ ಬಗ್ಗೆ ಯಾವುದೇ ತಕರಾರು ಇರಲಿಲ್ಲ. ಪ್ರಣಬ್ ಮುಖರ್ಜಿಯವರೇ ಖುದ್ದಾಗಿ ಆರೆಸ್ಸೆಸ್ ಮುಖ್ಯಸ್ಥ ಈ ಹಿಂದಿನ ಮೋಹನ್ ಭಾಗ್ವತ್ ಅವರನ್ನು ರಾಷ್ಟ್ರಪತಿ ಭವನಕ್ಕೆ ಆಹ್ವಾನಿಸಿದ್ದರು. ಬಹುಶಃ ನಾಗ್ಪುರ ಕಾರ್ಯಕ್ರಮ, ಭಾಗ್ವತ್ ಅವರ ಭೇಟಿಗೆ ಪ್ರತಿಯಾಗಿ ಪ್ರಣಬ್ ನೀಡುತ್ತಿರುವ ಉತ್ತರ ರೂಪದ ಮರುಭೇಟಿಯಾಗಿರಬಹುದು. ಈ ಹಿಂದೆ ಮಹಾತ್ಮಗಾಂಧಿಯವರು 1934ರಲ್ಲಿ ವಾರ್ಧಾದಲ್ಲಿ ನಡೆದ ತಮ್ಮ ಸಮಾವೇಶದಲ್ಲಿ ಪಾಲ್ಗೊಂಡಿದ್ದರು; ಅಂಬೇಡ್ಕರ್ ಅವರೂ 1939ರಲ್ಲಿ ಪುಣೆಯ ಆರೆಸ್ಸೆಸ್ ಸಮಾವೇಶದಲ್ಲಿ ಭಾಗವಹಿಸಿದ್ದರು ಎಂಬ ಮಾತನ್ನು ಆರೆಸ್ಸೆಸ್ ದಣಿವಿಲ್ಲವೆಂಬಂತೆ ಮತ್ತೆ ಮತ್ತೆ ಹೇಳುತ್ತಲೇ ಬಂದಿದೆ. *ಅರಕೆರೆ ಜಯರಾಮ್