ಪಣಜಿ: ಸಮಾಜದ ವಿವಿಧ ಸ್ತರಗಳಲ್ಲಿ ದೇಶಕ್ಕೆ ಕೊಡುಗೆ ನೀಡಬಲ್ಲ ಸ್ವಯಂ ಸೇವಕರನ್ನು ರಾಷ್ಟ್ರೀಯ ಸ್ವಯಂ ಸೇವಕ ರೂಪಿಸುತ್ತದೆ ವಿನಃ ಸಮಾಜದಲ್ಲಿ ಒತ್ತಡ ಸೃಷ್ಟಿಸುವ ಘಾತುಕ ಶಕ್ತಿಗಳನ್ನಲ್ಲ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಪಣಜಿಯಲ್ಲಿ ಮಾತನಾಡಿದ ಅವರು ಸಂಘ ತನ್ನ ಸ್ವಯಂ ಸೇವಕ ರಿಗೆ ಸೇವೆಯ ಉದ್ದೇಶ, ಚಿಂತನೆಯನ್ನು ನೀಡಿದೆ. ನಮ್ಮ ಸ್ವಯಂ ಸೇವಕರು ವೈಯಕ್ತಿಕವಾಗಿ ದೇಶದ ಒಳಿತಿಗಾಗಿ, ವಿವಿಧ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿ, ಸಮಾಜವನ್ನ ಅವರೊಟ್ಟಿಗೆ ಮುನ್ನಡೆಸುತ್ತಿದ್ದಾರೆ.
ಅಂಥ ಸಾಮರ್ಥ್ಯ ಅವರಲ್ಲಿದೆ. ಸ್ವಯಂ ಸೇವಕನೊಬ್ಬ ರೂಪುಗೊಳ್ಳುವುದೇ ಹೀಗೆ. ಸ್ವಯಂಸೇವಕರು ಸಮಾಜ ಮುನ್ನಡೆಸುವ ಶಕ್ತಿಯಾಗಿದ್ದಾರೆ ವಿನಃ ಒತ್ತಡ ಸೃಷ್ಟಿಸುವ ಘಾತುಕ ಗುಂಪುಗಳಾಗಿ ಎಂದಿಗೂ ನಿರ್ಮಾಣವಾಗಿಲ್ಲ ಎಂದಿದ್ದಾರೆ.