Advertisement

RSS; ಶತಮಾನದ ಸಂಭ್ರಮ: ಸದಸ್ಯರಿಗೆ ಮೋದಿ ಶುಭಾಶಯ

02:17 AM Oct 13, 2024 | Team Udayavani |

ಹೊಸದಿಲ್ಲಿ: ರಾಷ್ಟ್ರೀಯ ಸ್ವಯಂಸೇ ವಕ ಸಂಘ (RSS) ಶತಮಾನೋತ್ಸವಕ್ಕೆ ಕಾಲಿಟ್ಟಿರುವ ಹಿನ್ನೆಲೆಯಲ್ಲಿ ಶನಿವಾ ರ ಸಂಘದ ಎಲ್ಲ ಸದಸ್ಯ ರಿಗೂ ಶುಭಾಶಯ ಹೇಳಿರುವ ಪ್ರಧಾನಿ ನರೇಂದ್ರ ಮೋದಿ, “ಆರೆಸ್ಸೆಸ್‌ ದೇಶ ಸೇವೆಗೆಂದೇ ಮುಡಿಪಾಗಿರುವ ಸಂಸ್ಥೆ’ ಎಂದು ಹೊಗಳಿದ್ದಾರೆ.

Advertisement

ಶನಿವಾರ ನಾಗ್ಪುರ ವಿಜಯದ ಶಮಿ ಕಾರ್ಯಕ್ರಮದಲ್ಲಿ ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು ಮಾಡಿದ ಭಾಷಣದ ಲಿಂಕ್‌ ಅನ್ನು ಟ್ವೀಟರ್‌ನಲ್ಲಿ ಅಪ್‌ಲೋಡ್‌ ಮಾಡಿರುವ ಮೋದಿ, “ಈ ಭಾಷಣವನ್ನು ಎಲ್ಲರೂ ಆಲಿಸಬೇಕು’ ಎಂದಿದ್ದಾರೆ.

ಜತೆಗೆ, ತಾಯಿ ಭಾರತಿಯ ಸೇವೆ ಕುರಿತ ಆರೆಸ್ಸೆಸ್‌ನ ಸಂಕಲ್ಪವು ಪ್ರತಿ ತಲೆಮಾರಿಗೂ ಸ್ಫೂರ್ತಿಯಾಗಿದ್ದು, ಇದು ವಿಕಸಿತ ಭಾರತದ ಗುರಿ ಸಾಧಿ ಸಲು ಹೊಸ ಶಕ್ತಿ ನೀಡಲಿದೆ ಎಂದಿದ್ದಾರೆ. ಇದೇ ವೇಳೆ, ಆರೆಸ್ಸೆಸ್‌ ಸ್ಥಾಪನಾ ದಿನದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಅಮಿತ್‌ ಶಾ ಅವರೂ ಸಂಘದ ಎಲ್ಲ ಸದಸ್ಯರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. 1925ರ ಸೆ.27ರಂದು ನಾಗ್ಪುರದಲ್ಲಿ ವಿಜಯ ದಶಮಿ ದಿನ ಆರೆಸ್ಸೆಸ್‌ ಸ್ಥಾಪನೆಯಾಯಿತು.

Advertisement

Udayavani is now on Telegram. Click here to join our channel and stay updated with the latest news.

Next