Advertisement

ವಾಯುಪಡೆ, ಮೋದಿ ಸರಕಾರಕ್ಕೆ ಆರೆಸ್ಸೆಸ್‌ ಮೆಚ್ಚುಗೆ

12:30 AM Mar 09, 2019 | Team Udayavani |

ಗ್ವಾಲಿಯರ್‌: ಪಾಕಿಸ್ಥಾನದಲ್ಲಿ ಉಗ್ರ ನೆಲೆಗಳ ಮೇಲೆ ದಾಳಿ ನಡೆಸಿದ್ದಕ್ಕೆ ವಾಯುಪಡೆ ಮತ್ತು ನರೇಂದ್ರ ಮೋದಿ ಸರಕಾರವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹೊಗಳಿದೆ. ಈ ಸಂಬಂಧ ಗ್ವಾಲಿಯರ್‌ನಲ್ಲಿ ನಡೆಯುತ್ತಿರುವ ಅಖೀಲ ಭಾರತೀಯ ಪ್ರತಿನಿಧಿ ಸಭೆಯಲ್ಲಿ ನಿಲುವಳಿ ಕೈಗೊಳ್ಳಲಾಗಿದೆ. ಪಾಕಿಸ್ಥಾನದಲ್ಲಿ ಸಿಕ್ಕಿಬಿದ್ದು, ಭಾರತಕ್ಕೆ ಮರಳಿದ ವಿಂಗ್‌ ಕಮಾಂಡರ್‌ ಅಭಿನಂದನ್‌ಗೆ ಗೌರವಾರ್ಥವಾಗಿ ಈ ನಿಲುವಳಿಗೆ ಅಭಿನಂದನ ಪ್ರಸ್ತಾವ ಎಂದು ಹೆಸರಿಸಲಾಗಿದೆ. ದೇಶವಿರೋಧಿ ಶಕ್ತಿಗಳ ವಿರುದ್ಧ ಶ್ರಮಿಸಲು ಸರಕಾರ ತೆಗೆದುಕೊಂಡ ನಿರ್ಧಾರ ಸರಿಯಾಗಿದೆ. ಭಾರತೀಯರು ಇಂಥ ಶಕ್ತಿಗಳ ಬಗ್ಗೆ ಎಚ್ಚರಿಕೆ ಹೊಂದಿರಬೇಕು ಎಂದು ಆರ್‌ಎಸ್‌ಎಸ್‌ ಜಂಟಿ ಪ್ರಧಾನ ಕಾರ್ಯದರ್ಶಿ ಮನಮೋಹನ ವೈದ್ಯ ಹೇಳಿದ್ದಾರೆ.

Advertisement

ಹುತಾತ್ಮರಾದ ಯೋಧರಿಗೆ ಸಂತಾಪವನ್ನೂ ಈ ಸಭೆಯಲ್ಲಿ ಸೂಚಿಸಲಾಗಿದ್ದು, ಭಾರತದ ಸಹಿಷ್ಣುತೆಯನ್ನು ಬಲಹೀನತೆ ಎಂದು ಪರಿಗಣಿಸಬಾರದು ಎಂದು ವೈದ್ಯ ಹೇಳಿದ್ದಾರೆ. ಪ್ರತಿನಿಧಿ ಸಭೆಯಲ್ಲಿ ಸುಮಾರು 1400 ಸದಸ್ಯರು ಭಾಗವಹಿಸಿದ್ದಾರೆ. ಶಬರಿಮಲೆಯಲ್ಲಿ ಮಹಿಳೆಯರಿಗೆ ಪ್ರವೇಶ ಸೇರಿದಂತೆ ಹಲವು ವಿಚಾರಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next